ಚುನಾವಣೆ ಎದುರಿಸಲು ಸನ್ನದ್ಧರಾಗಿ: ಮಾಣಿಕ್ ಟಾಗೋರ್
ಬೆಳಗಾವಿ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ವಿಧಾನಸಭೆ
ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕು. ಅದಕ್ಕಾಗಿ ಜಿಲ್ಲೆಯ ಕಾಂಗ್ರೆಸ್
ನಾಯಕರು ಒಗ್ಗಟ್ಟನಿಂದ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು. ಜಿಲ್ಲೆಯಿಂದ ಕನಿಷ್ಠ 13
ಕಾಂಗ್ರೆಸ್ ಅಭ್ಯರ್ಥಿಗಳ ಗೆಲವಿಗೆ ಸಂಕಲ್ಪ ಮಾಡಬೇಕು ಎಂದು ಬೆಳಗಾವಿ ವಿಭಾಗದ ಪಕ್ಷದ
ಉಸ್ತುವಾರಿ ಹಾಗೂ ಎಐಸಿಸಿ ಕಾರ್ಯದರ್ಶಿ ಮಾಣಿಕ್ ಟಾಗ್ಯೋರ್ ಕರೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಬೆಳಗಾವಿಗೆ ಭೇಟಿ ನೀಡಿದ ಅವರು ಗ್ರಾಮೀಣ ಕಾಂಗ್ರೆಸ್
ಕಚೇರಿಯಲ್ಲಿ ಬೆಳಗಾವಿ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು
ಹಾಗೂ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಬೆಳಗಾವಿ ಜಿಲ್ಲೆ ಅತಿ ದೊಡ್ಡ ಜಿಲ್ಲೆಯಾಗಿದ್ದು, ಜಿಲ್ಲೆ ಕಾಂಗ್ರೆಸ್ ನ
ಭದ್ರಕೋಟೆಯಾಗಬೇಕು. ನಾಯಕರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ
ಬಲ ಸಂವರ್ಧನೆಗೆ ಬೇರು ಮಟ್ಟದಲ್ಲಿ ಸಂಘಟಿಸಬೇಕು ಎಂದು ಮಾಣಿಕ್ ಟಾಗ್ಯೋರ್ ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಚಿವ ರಮೇಶ ಜಾರಕಿಹೊಳಿ, ಮಾಜಿ ಸಚಿವ
ಸತೀಶ ಜಾರಕಿಹೊಳಿ, ಶಾಸಕ ಫಿರೋಜ್ ಸೇಠ್, ಸಚೇತಕ ಅಶೋಕ ಪಟ್ಟಣ, ಗಣೇಶ ಹುಕ್ಕೇರಿ,
ವಿವೇಕರಾವ್ ಪಾಟೀಲ, ಕೆಪಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್,
ವಿನಯ ನಾವಲಗಟ್ಟಿ, ರಾಜು ಸೇಠ್ ಸೇರಿದಂತೆ ಹಲವಾರು ನಾಯಕರು ಮತ್ತು ಟಿಕೇಟ್
ಆಕಾಂಕ್ಷಿಗಳು ಮಾಣಿಕ್ ಟಾಗ್ಯೋರ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅಭಿಪ್ರಾಯ
ವ್ಯಕ್ತಪಡಿಸಿದರು.
ನೂತನ ಪದಾಧಿಕಾರಿಗಳ ಸತ್ಕಾರ
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಯುವ ಘಟಕದ ನೂತನ ಪದಾಧಿಕಾರಿಗಳನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರು ಸತ್ಜರಿಸಿ ಗೌರವಿಸಿದರು
ಗ್ರಾಮಿಣ ಕ್ಷೇತ್ರದ ಯುವ ಅದ್ಯಕ್ಷ ತೌಸೀಫ ಫನಿಬಂದ ಸೇರಿದಂತೆ ಇತರ ಪದಾಧಿಕಾರಗಳನ್ನು ಸತ್ಕರಿಸಲಾಯಿತು ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸಿಸಿ ಪಾಟೀಲ ಯುವರಾಜ ಕದಂ ಸೇರಿದಂತೆ ಇತರ ನಾಯಕರು ಉಒಸ್ಥಿತರಿದ್ದರು