ಬೆಳಗಾವಿ- ಬೆಳಗಾವಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಅದ್ಯಕ್ಷ ಉಪಾಧ್ಯಕ್ಷರ ಚುನಾವಣೆಗಳು ಇಂದಿನಿಂದ ಆರಂಭವಾಗಿದ್ದು ಮಾರಿಹಾಳ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ತೌಸೀಫ್ ಅಲ್ಲಾವುದ್ದೀನ್ ಫನೀಬಂಧ್ ಮತ್ತು ಉಪಾಧ್ಯಕ್ಷರಾಗಿ,ಬಸವರಾಜ್ ವೀರಭದ್ರಪ್ಪ ಮಾಧನ್ನವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾರಿಹಾಳ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಅದ್ಯಕ್ಷ ಉಪಾಧ್ಯಕ್ಷರನ್ನು ಗ್ರಾಮ ಪಂಚಾಯತಿಯ ಸದಸ್ಯರು ಸತ್ಕರಿಸಿ ಗೌರವಿಸಿದರು.ಈ ಸಂಧರ್ಭದಲ್ಲಿ ಮಾರಿಹಾಳ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಗ್ರಾಮದ ಹಿರಿಯರಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದ ಮಾರಿಹಾಳ ಗ್ರಾಮ ಪಂಚಾಯತಿ ಅದ್ಯಕ್ಷ ತೌಸೀಫ್ ಫನೀಬಂಧ್ ಗ್ರಾಮದ ಹಿರಿಯರನ್ನು ಹಾಗೂ ಗ್ರಾಮ ಪಚಾಯತಿಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ರು…
ಹೆಬ್ಬಾಳಕರ ಆಪ್ತ ಸಾಹುಕಾರ್ ತೆಕ್ಕೆಗೆ…
ಮಾರಿಹಾಳ ಗ್ರಾಮ ಪಂಚಾಯತಿಯ ಅದ್ಯಕ್ಷರಾಗಿ ಆಯ್ಕೆಯಾಗಿರುವ ತೌಸೀಫ್ ಫನೀಬಂಧ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಆಪ್ತರಲ್ಲಿ ಒಬ್ಬರಾಗಿದ್ದರು,ಆದ್ರೆ ಇತ್ತೀಚಿಗೆ ನಡೆದ ರಾಜಕೀಯ ಬೆಳವಣಿಯಲ್ಲಿ ತೌಸೀಫ್ ಫನೀಬಂಧ್ ಅವರು ಈಗ ಸದ್ಯಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ಗುರುತಿಸಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯತಿ ಅದ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಫಲಿತಾಂಶ ಸಂಪೂರ್ಣವಾಗಿ ಹೊರಬಂದ ಬಳಿಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇದೆಯೋ ಅಥವಾ ಬಿಜೆಪಿ ಪ್ರಾಬಲ್ಯ ಇದೆಯೋ ಎನ್ನುವ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ…