ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ನೇಮಿಸಲಾದ ಕಾಂಗ್ರೆಸ್ ಮೇಲುಸ್ತುವಾರಿ ಸಮೀತಿ ಇಂದು ಬೆಳಗಾವಿಯಲ್ಲಿ ಸ್ಥಳೀಯ ನಾಯಕರ ಜೊತೆ,ಮಾಜಿ ನಗರಸೇವಕರ ಜೊತೆ,ಸಭೆ ಮಾಡಿದ್ರೂ ಪಾಲಿಕೆ ಚುನಾವಣೆ ಯನ್ನು ಪಕ್ಷದ ಚಿಹ್ನೆಯ ಮೇಲೆ ಮಾಡಬೇಕೋ..ಬಿಡಬೇಕೋ ಎನ್ನುವ ನಿರ್ಧಾರ ಕೈಗೊಳ್ಳುವಲ್ಲಿ ಸಫಲವಾಗಿಲ್ಲ.
ಸುಮಾರು ಎರಡು ಘಂಟೆಗಳ ಕಾಲ ಬೆಳಗಾವಿಯ ನಾಯಕರ ಜೊತೆ ಮಾಜಿ ಸಚಿವ ಎಂ.ಬಿ ಪಾಟೀಲ,ಬಿ.ಕೆ ಹರಿಪ್ರಸಾದ ಸೇರಿದಂತೆ ಮೇಲುಸ್ತುವಾರಿ ಸಮೀತಿಯ ಸದಸ್ಯರು ಸಭೆ ಮಾಡಿದ್ರು,ಆದ್ರೆ ಸಭೆಯಲ್ಲಿ ಸ್ಥಳೀಯ ನಾಯಕರು,ಮಾಜಿ ನಗರ ಸೇವಕರು ಚುನಾವಣೆಯನ್ನು ಪಕ್ಷದ ಸಿಂಬಾಲ್ ಮೇಲೆ ಮಾಡುವ ಕುರಿತು ಪರ,ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಉಸ್ತುವಾರಿ ಸಮೀತಿ ಇವತ್ತು ಈ ಕುರಿತು ಇವತ್ತು ಅಂತಿಮ ನಿರ್ಧಾರ ಕೈಗಳ್ಳಲು ಸಾಧ್ಯವಾಗಲಿಲ್ಲ.
ಸಭೆಯ ಬಳಿಕ ಪತ್ರಿಕಾಗೋಷ್ಢಿ ನಡೆಸಿದ,ಮಾಜಿ ಸಚಿವ ಎಂ.ಬಿ ಪಾಟೀಲ.ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಕುರಿತು ಬೆಳಗಾವಿಯ ಮುಖಂಡರು,ಮಾಜಿ ನಗರಸೇವಕರ ಜೊತೆ ಸಭೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ ,ಸಿಂಬಾಲ್ ಮೇಲೆ ಇಲೆಕ್ಷನ್ ಮಾಡುವ ಕುರಿತು ಪರ,ಮತ್ತು ವಿರೋಧ ಅಭಿಪ್ರಾಯಗಳು ವ್ಯೆಕ್ತವಾಗಿವೆ ಎಂದು ತಿಳಿಸಿದರು.
ಬೆಳಗಾವಿ ಸಭೆಯಲ್ಲಿ ಪ್ರಸ್ತಾಪವಾದ ಅಭಿಪ್ರಾಯಗಳನ್ನು,ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರಿಗೆ ತಿಳಿಸ್ತೀವಿ,ನಾಳೆ ಅಥವಾ ನಾಡಿದ್ದು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಎಂ.ಬಿ ಪಾಟೀಲ ಹೇಳಿದ್ರು…