ಬೆಳಗಾವಿ- ಎಂಬಿಬಿಎಸ್ ಸೀಟು ಕೊಡಿಸುವದಾಗಿ ಬೆಳಗಾವಿಯ ಮೂವರು ಖಿಲಾಡಿಗಳು ಕೂಡಿಕೊಂಡು ಮದ್ಯಪ್ರದೇಶದ ಮದನಕುಮಾರ ತ್ರಿಪಾಠಿ ನಲವತ್ತು ಲಕ್ಷ ರೂ ಗಳ ಮಕ್ಮಲ್ ಟೋಪಿ ಹಾಕಿದ ಘಟನೆ ಬೆಳಗಾವಿಯ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ
ಬೆಳಗಾವಿಯ ಸಿದ್ಧಾರ್ಥ,ಅಮೀತ ಮಹೇಶ ಎಂಬುವರು ಮದ್ಯಪ್ರದೇಶದ ಡಾ ಮದನಕುಮಾರ ಅವರನ್ನು ಸಂಪರ್ಕಿಸಿ ಬೆಳಗಾವಿಯ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಸುವದಾಗಿ ನಂಬಿಸಿ ಆತನಿಂದ ಬರೊಬ್ಬರಿ ನಲವತ್ತು ಲಕ್ಷ ರೂ ಲಪಟಾಯಿಸಿದ್ದು ವಂಚನೆಗೊಳಗಾದ ಮದ್ಯಪ್ರದೇಶದ ಮದನಕುಮಾರ ಈಗ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ನಲವತ್ತು ಲಕ್ಷ ಪಡೆದು ಮದ್ಯಪ್ರದೇಶದ ತ್ರಿಪಾಠಿಗೆ ಇವರು ಖೊಟ್ಟಿ ದಾಖಲೆ ನೀಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ
ಇತ್ತಿಚಿನ ದಿನಗಳಲ್ಲಿ ಬೆಳಗಾವಿ ನಗರದಲ್ಲಿ ಮೋಸ ವಂಚನೆಯ ಪ್ರಕರಣಗಳು ಜಾಸ್ತಿಯಾಗುತ್ತಿವೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ