ಬೆಳಗಾವಿ- ಕೊರೋನಾ ಬಂದ್ಮೇಲೆ ಬೆಳಗಾವಿ ಯಾವ ರೀತಿ ಬದಲಾಗಿದೆ ಎಂದು ನೋಡಬೇಕಾದ್ರೆ ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿರುವ ಮೆಜೆಸ್ಟೀಕ್ ಹೊಟೇಲ್ ಗೆ ಹೋಗಲೇಬೇಕು .
ಕೊರೋನಾ ಬಂದ್ಮೇಲೆ ಎರಡು ತಿಂಗಳು ಬಂದ್ ಆಗಿದ್ದ ಬೆಳಗಾವಿ ನಗರದ ಹೊಟೇಲ್ ಗಳು ಒಂದೊಂದಾಗಿ ಬಾಗಿಲು ತೆರೆಯುತ್ತಿವೆ.ಇಂದು ಅಕಸ್ಮಾತ್ ಫೋರ್ಟ್ ರಸ್ತೆಗೆ ಹೋಗಿದ್ದೆ ಇಲ್ಲಿಯ ಮೆಜಸ್ಟೀಕ್ ಹೊಟೇಲ್ ಗೆ ಚಹಾ ಕುಡಿಯಲು ಹೊಟೇಲ್ ಪ್ರವೇಶಿಸಿದಾಗ ಅಲ್ಲಿಯ ವ್ಯೆವಸ್ಥೆ,ನೋಡಿ ಅಚ್ಚರಿ ಯಾಯಿತು
ಟೇಬಲ್ ಗಳು ದೂರ..ದೂರ, ಇಡಲಾಗಿದೆ. ಇಬ್ಬರು ಗ್ರಾಗಕರು ಒಂದೇ ಟೇಬಲ್ ಮೇಲೆ ಮುಖಾ ಮುಖಿಯಾಗಿ ಕುಳಿತರೆ ಸೊಂಕು ಹರಡದಂತೆ ಗ್ಲಾಸಿನ ಗಾರ್ಡ್ ಗಳನ್ನು ಇಡಲಾಗಿದೆ. ಪ್ರತಿಯೊಬ್ಬ ವೇಟರ್ ಗ್ಲಾಸಿನ ಮಾಸ್ಕ್ ಹಾಕಿಕೊಂಡಿದ್ದಾನೆ.
ಕೊರೋನಾ ಸಂಧರ್ಭದಲ್ಲಿ ಹೊಟೇಲ್ ಯಾವ ರೀತಿಯಲ್ಲಿ ಇರಬೇಕು ಅನ್ನೋದಕ್ಕ ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿರುವ ಮೆಜೆಸ್ಟೀಕ್ ಹೊಟೇಲ್ ಮಾದರಿ
ಈ ಹೊಟೇಲ್ ಬ್ರೆಡ್ ಟೋಸ್ಟ್ ಗೆ ಫೇಮಸ್ ಆಗಿದ್ದು,ಈ ಹೊಟೇಲ್ ಮಾಲೀಕನಿಗೆ ಗ್ರಾಹಕರ ಆರೋಗ್ಯದ ಬಗ್ಗೆ ಇರುವ ಕಾಳಜಿಯನ್ನು ಮೆಚ್ಚಲೇ ಬೇಕು