ದನಗಳ ಅಸ್ತಿಪಂಚರ ಕಂಡು ಕಕ್ಕಾಬಿಕ್ಕಿಯಾದ ಕೇಂದ್ರ ಸಚಿವೆ..!
ಬೆಳಗಾವಿ- ಅವು ಬೆಳಗಾವಿಯ ಹೃದಯ ಭಾಗದಲ್ಲಿ ಇರುವ ಶೀತ ಗೃಹಗಳು. ಇಲ್ಲಿ ಯಾವುದಾದ್ರು ಹಣ್ಣು, ತರಕಾರಿಗಳನ್ನು ಇಟ್ಟಿಬಹುದು ಅಂತ ಅಕ್ಕಪಕ್ಕದ ಜನ ಭಾವಿಸಿದ್ದರು. ಆದರೇ ಇವುಗಳ ಮೇಲೆ ರೆಡ್ ನಡೆಸಿದ ಅಧಿಕಾರಿಗಳು ಹಾಗೂ ಎನ್ ಜಿ ಓ ಕಾರ್ಯಕರ್ತರಿಗೆ ಶಾಕ್ ಆಗಿದೆ. ಸ್ವತಃ ಕೇಂದ್ರ ಸಚಿವೆ ಮೆನಕಾ ಗಾಂಧಿ ಹಾಗೂ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಸೇರಿ ಎಲ್ಲರು ಶೀತ ಗೃಹದಲ್ಲಿ ಇರೋ ದೃಶ್ಯ ನೋಡಿ ಬೆಚ್ಚಿಬಿದ್ದಿದಾರೆ. ಇಷ್ಟಕ್ಕೂ ಶೀತ ಗೃಹದಲ್ಲಿ ಕಂಡ ಭಯಾನಕ ದೃಶ್ಯ ಯಾವುದು ಗೊತ್ತಾ..
ಮುಂಭಾಗದಲ್ಲಿ ನೋಡೊದಕ್ಕೆ ಇವೆಲ್ಲ ಶೀತ ಗೃಹಗಳಂತೆ ಕಂಡರು. ಒಳಗೆ ನಡೆಯೋದು ಮಾತ್ರ ಖತರನಾತ್ ದಂಧೆ… ಶೀತ ಗೃಹ ಹೆಸರನಲ್ಲಿ ಒಳಗಡೆ ಪ್ರಾಣಿಗಳ ಹತ್ಯೆ ನಡೆಸಿ. ಅವುಗಳ ಮಾಂಸವನ್ನು ಬೇರೆ ಕಡೆಗಳಲ್ಲಿ ಸಾಗಾಟ ಮಾಡುತ್ತಿದ್ದರು. ಇದ್ಯಾವುದು ಇಲ್ಲಿನ ಅಧಿಕಾರಿಗಳು ಹಾಗೂ ಜನರಿಗೆ ಗೊತ್ತೆ ಇರಲಿಲ್ಲ. ಗುಪ್ತ ಗುಪ್ತವಾಗಿ ಇಲ್ಲಿ ನಡೆಯುತ್ತಿದ್ದ ದಂಧೆ ಇದೀಗ ಬಟಾ ಬಯಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಪಿಪಲ್ಸ್ ಫಾರ್ ಎನಿಮಲ್ ಸಂಸ್ಥೆ ಸದಸ್ಯರು ಬೆಳಗಾವಿಗೆ ಬಂದು ಇಲ್ಲಿನ ಆಟೋ ನಗರದಲ್ಲಿ ನಡೆಯುತ್ತಿದ್ದ ದಂಧೆಯ ಕರಾಳ ಮುಖವನ್ನು ಹೊರ ಹಾಕಿದ್ದರು. ಈ ಕುರಿತು ಮಾಳ ಮಾರುತಿ ಪೊಲೀಸ್ ಠಾಣೆಗೆ ಸಹ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ತನಿಖೆಗೆ ಇಳಿದಾಗ ಒಂದಲ್ಲ ಎರಡಲ್ಲ ಬರೋಬ್ಬರಿ 7 ಅಕ್ರಮ ಕಸಾಯಿ ಖಾನೆ ಮೀರಿಸುವ ಶೀತ ಗೃಹಗಳು ಪತ್ತೆಯಾಗಿವೆ. ಸದ್ಯ ಈ ವಿಚಾರ ಗೊತ್ತಾಗುತ್ತಿದ್ದಂತೆ ಶೀತ ಗೃಹಕ್ಕೆ ಭೇಟಿ ನೀಡಿದ್ದ ಬಿಜೆಪಿ ಮುಖಂಡರು ಇದರಲ್ಲಿ ಸ್ಥಳೀಯ ಶಾಸಕ ಫೀರೋಜ್ ಸೇಠ್ ಕುಮಕ್ಕು ಇದೆ ಅಂತ ಆರೋಪಿಸಿದ್ದರು. ಅಷ್ಟೇ ಅಲ್ಲ ಇವತ್ತು ಕೇಂದ್ರ ಸಚಿವೆ ಮೆನಕಾ ಗಾಂಧಿ, ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಂಸದರಾದ ಪ್ರಲ್ಹಾದ್ ಜೋಶಿ, ಸುರೇಶ ಅಂಗಡಿ ಸೇರಿ ಅನೇಕರು ಭೇಟಿ ನೀಡಿದ್ರು. ಈ ವೇಳೆ ಅಕ್ರಮ ದಂಧೆಯ ಕುರಿತು ಮೆನಕಾ ಗಾಂಧಿ ತೀವ್ರ ಕೆಂಡಾ ಮಂಡಲರಾಗಿ ಅಧಿಕಾರಿಗಳ ವಿರುದ್ಧ ಹರಿಹಾಯಿದ್ರು.
ಇಷ್ಟೇ ಅಲ್ಲ ಸ್ಥಳೀಯ ಪೊಲೀಸ್ ಅಧಿಕಾರಿಗಳು ಅಕ್ರಮ ದಂಧೆಗೆ ಸಾಥ್ ನೀಡುತ್ತಿದ್ದಾರೆ ಎನ್ನೆ ಆರೋಪವು ಸಹ ಕೇಳಿ ಬಂದಿದೆ. ಈ ನಡುವೆ ಪೊಲೀಸರ ವಿರೋಧದ ನಡುವೆ ಶೀತ ಗೃಹದ ಒಳಗೆ ಹೋದ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕರಿಗೆ ಕಂಡಿದ್ದು ಮಾತ್ರ ಭಯಾನಕ ದೃಶ್ಯ. ಸಾವಿರಾರು ಹಸುಗಳನ್ನು ಹತ್ಯೆ ಮಾಡಿ ರಾಶಿ ರಾಶಿ ಅಸ್ತಿ ಪಂಚರಗಳನ್ನು ದಾಸ್ತಾನು ಮಾಡಿರೋದು ಕಂಡು ಬಂತು. ಇದನ್ನು ಕಂಡ ಕೇಂದ್ರ ಸಚಿವೆ ಮೆನಕಾ ಗಾಂಧಿ ಕೆಲ ಕ್ಷಣ ಕಕ್ಕಾಬಿಕ್ಕಿಯಾದ್ರು. ಇನ್ನೂ ಸುಧಾರಿಸಿಕೊಂಡು ಹೊರ ಬಂದ ಬಿಜೆಪಿ ಸಂಸದ ಪ್ರಲ್ಹಾದ್ ಜೋಶಿ, ಈ ಬಗ್ಗೆ ಅಧಿಕಾರ ಬೇಜವಾಬ್ದಾರಿ ವಿರುದ್ದ ಹಿರಿಯ ಅಧಿಕಾರಿಗಳಿಗೆ ಫೋನ್ ನಲ್ಲಿ ವಾಗ್ದಾಳಿ ನಡೆಸಿದರು
ಕೋಲ್ಡ್ ಸ್ಟೋರೆಜ್ ಹೆಸರಿನಲ್ಲಿ ಕಟ್ಟಡ ನಿರ್ಮಿಸಿಕೊಂಡು ಅಕ್ರಮ ಕಸಾಯಿ ಖಾನೆ ನಡೆಸುತ್ತಿರುವುದು ಇದೀಗ ಬಹಿರಂಗವಾಗಿದೆ. ಆದರೇ ಹಲವು ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದಂತೆ ಅಧಿಕಾರಿಗಳು ಕಂಡು ಕಾಣದಂತೆ ಇದಿದ್ದು ಮಾತ್ರ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಸದ್ಯ ಈ ವಿಚಾರವನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಂಡಿದ್ದು, ಮುಂದೆ ಯಾವ ಸ್ವರೂಪ ಪಡೆಯಲಿದೆ ಎನ್ನೋದು ಕಾದು ನೋಡಬೇಕಿದೆ.
ಬೆಳಗಾವಿಯ ಅಟೋನಗರದಲ್ಲಿ ಭಯಾನಕ ದೃಶ್ಯ ಕಂಡು ಕಕ್ಕಾ ಬಿಕ್ಕಿಯಾದ ಕೇಂದ್ರ ಸಚಿವೆ ಮೇನಕಾ ಗಾಂಧೀ ಬೆಳಗಾವಿಯಲ್ಲಿ ಭಯಾನಕ ದಂಧೆ ನಡೆಯುತ್ತಿದೆ ಈ ಕುರಿತು ಸಿಬಿಐ ತನಿಖೆ ಮಾಡುವಂತೆ ಸಿಬಿಐ ಗೆ ರೆಫರ್ ಮಾಡುವೆ ಸ್ಥಳೀಯ ಪೋಲೀಸ್ ಅಧಿಕಾರಿಗಳ ಆಸ್ತಿ ತಪಾಸಣೆ ಮಾಡುವಂತೆ ಹೇಳುವೆ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧೀ ಹೇಳಿದ್ದಾರೆ