ಬೆಳಗಾವಿ:ಪವಿತ್ರ ಕ್ರಿಸಮಸ್ ಹಬ್ಬದ ಅಂಗವಾಗಿ ಕ್ರಿಶ್ಚಿಯನ್ ಬಾಂಧವರು ಇಂದು ಚರ್ಚ್‍ಗಳಲ್ಲಿ ದೇವ ಏಸು ಮತ್ತು ಮಾತೆ ಮೇರಿ ಅವರಿಗೆ ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಿದರು.
ಮೆಥೋಡಿಸ್ಟ್, ಕೆಥೋಲಿಕ್ ಹಾಗೂ ಪ್ರೊಟೆಸ್ಟಂಟ್ ತತ್ವದ ಅನುಯಾಯಿಗಳು ತಮ್ಮ ಪದ್ಧತಿ ಮತ್ತು ನಂಬುಗೆಯ ಪ್ರಕಾರ ಪ್ರಾರ್ಥನೆ, ಆರಾಧನೆ ನಡೆಸಿದರು.
ಯೇಸುವೆ… ಯೇಸುವೆ ನಿನ್ನನ್ನೇ ಬಯಸುವೆ….. ಪ್ರಾರ್ಥನಾ ಮೈ ತುಜಸೇ ಕರು ಓ ಮೇರೆ ಪ್ಯಾರೆ ಮಸೀಹಾ…… ಐ ಎಂಟರ್ ದಿ ಹೋಲಿ ಆಫ್ ಹೋಲಿ… ಎಂಬ ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಮರಾಠಿ ಭಾಷೆಯ ಯೇಸು ಆರಾಧನೆಯ ಹಾಡುಗಳು ಸುಶ್ರಾವ್ಯ ಸಂಗೀತದ ಮಧ್ಯೆ ಭಾವಪೂರ್ವಕವಾಗಿ ಮೂಡಿಬಂದವು.
ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಮೆಥೋಡಿಸ್ಟ್ ಚರ್ಚ್, ಫಿಶ್ ಮಾರ್ಕೇಟ್ ಬಳಿ ಕೆಥೋಲಿಕ್ ಚರ್ಚ್ ಹಾಗೂ ಕ್ಯಾಂಪ್‍ನ ಪ್ರೊಟೆಸ್ಟಂಟ್ ಚರ್ಚಗಳಲ್ಲಿ ಬಹು ಸೌಮ್ಯ ಮತ್ತು ಭಕ್ತಿ ಭಾವದಿಂದ ಕ್ರಿಶ್ಚಿಯನ್ ಸಮುದಾಯದ ಜನತೆ ಕುಟುಂಬ ಸಮೇತರಾಗಿ ಆಗಮಿಸಿದರು. ಯೇಸು ಸಮಸ್ತ ಜಗತ್ತಿನ ಒಳಿತಿಗಾಗಿ ದೇವರ ಮಗನಾಗಿದ್ದರೂ ಪ್ರಾಣ ತ್ಯಾಗ ಮಾಡಿ ಮತ್ತೆ ಹುಟ್ಟಿಬಂದ ಬಗ್ಗೆ ಅಪಾರ ನಂಬಿಕೆ ಹೊಂದಿರುವ ಕ್ರಿಶ್ಚಿಯನ್ ಬಾಂಧವರು ಅವರ ತ್ಯಾಗದ ಪ್ರತೀಖವಾಗಿ ರಕ್ತ ಮಾಂಸ ಪ್ರತಿನಿಧಿಸುವ ಬ್ರೆಡ್ ಮತ್ತು ಕೆಂಪು ಬಣ್ಣದ ದ್ರಾಕ್ಷಾಪೇಯ ಸೇವಿಸುತ್ತಾರೆ.
ಮೆಥೋಡಿಸ್ಟ್ ಚರ್ಚ್‍ನಲ್ಲಿ ಫಾದರ್ ಅವರಿಂದ ಕ್ರಿಸಮಸ್ ಹಬ್ಬದ ಶುಭಾಷಯ ಮತ್ತು ಮೆಸೇಜ್ ಮೂಡಿಬಂತು. ಕ್ಯಾಂಪ್ ಪ್ರದೇಶದ ಮನೆಮನೆ ಮುಂದೆ ಹಾಗೂ ಸಮಸ್ತ ಕ್ರಿಶ್ಚಿಯನ್ ಬಾಂಧವರ ಮನೆಯೊಳಗೆ ಮಗು ಕ್ರಿಸ್ತ್, ತಾಯಿ ಮೇರಿ ಪ್ರತಿಮೆಗಳನ್ನಿಟ್ಟು ದೀಪಾಲಂಕಾರದಿಂದ ಹಬ್ಬ ಆಚರಿಸಲಾಗುತ್ತಿದೆ. ನಿನ್ನೆ ರಾತ್ರಿ ಹಾಗೂ ಇಂದು ಸಂಜೆ ಇತರ ಸಮುದಾಯದ ಬಾಂಧವರನ್ನು ಮನೆಗೆ ಕರೆದು ಔತನಕೂಟ ಕ್ರಿಶಿಯನ್ ಬಾಂಧವರು ಏರ್ಪಡಿಸುತ್ತಾರೆ.