ರಾಜ್ಯೋತ್ಸವದ ದಿನ ಕಿತಾಪತಿ ಮಾಡಲು ಎಂಈಎಸ್ ನಿಂದ ಹೊಸ ಐಡಿಯಾ…!!
ಬೆಳಗಾವಿ- ರಾಜ್ಯೋತ್ಸವದ ದಿನ ಕನ್ನಡಿಗರು ಹಬ್ಬದ ಸಂಭ್ರಮ ದಲ್ಲಿರುವಾಗ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಯಕರು ಕನ್ನಡಿಗರನ್ನು ಪ್ರಚೋದಿಸಲು ಹೊಸ ತಂತ್ರ ರೂಪಿಸಿದೆ.
ಈ ಬಾರಿ ರಾಜ್ಯೋತ್ಸವದ ದಿನ ಸೈಕಲ್ ರ್ಯಾಲಿ ಗೆ ಅನುಮತಿ ಸಿಗೋದಿಲ್ಲ ಅಂತಾ ಖಾತ್ರಿಯಾದ ಮೇಲೆ ಎಂಈಎಸ್ ಬೇರೆ ರೀತಿಯ ಕಿತಾಪತಿ ನಡೆಸಲಿದೆ.
ರಾಜ್ಯೋತ್ಸವದ ದಿನ ಎಂಈಎಸ್ ನಾಯಕರು ಬೆಳಗಾವಿ ಮಹಾನಗರದ ಬಾನಂಗಳದಲ್ಲಿ ಒಂದು ಲಕ್ಷ ಬಲೂನ್ಸ್ ಗಳನ್ನು ಹಾರಿ ಬಿಡಲು ತಯಾರಿ ನಡೆಸಿದ್ದಾರೆ.
ರಾಜ್ಯೋತ್ಸವದ ದಿನ ಎಂಈಎಸ್ ಕಾರ್ಯಕರ್ತರು ತಮ್ಮ ಮನೆಗಳ ಛಾವಣಿಯ ಮೇಲೆ ನಿಂತು ಕಪ್ಪು ಬಣ್ಣದ ಬಲೂನ್ ಗಳನ್ನು ಬಾನಂಗಳದಲ್ಲಿ ಹಾರಿ ಬಿಡಲಿದ್ದಾರೆ.
ಕಪ್ಪು ಬಣ್ಣದ ಬಲೂನ್ ಗಳನ್ನು ಎಂಈಎಸ್ ನಾಯಕರೇ ಖರೀಧಿಸಿ ಕಾರ್ಯಕರ್ತರಿಗೆ ಹಂಚುವ ಗುಪ್ತ ಕಾರ್ಯಾಚರಣೆ ನಡೆಸಿದ್ದಾರೆ.
ಒಂದು ಲಕ್ಷ ಬಲೂನ್ ಗಳನ್ನು ರಾಜ್ಯೋತ್ಸವದ ದಿನ ಬೆಳಗಾವಿ ಮಹಶನಗರದಲ್ಲಿ ಹಾರಿಸಿ ಕನ್ನಡಿಗರನ್ನು ಪ್ರಚೋದಿಸುವ ಕುತಂತ್ರವನ್ನು ಎಂಈಎಸ್ ರೂಪಿಸಿದ್ದು ಜಿಕ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡು ನಾಡವಿರೋಧಿಗಳ ಕುತಂತ್ರಕ್ಕೆ ಲಗಾಮು ಹಾಕುವದು ಅತ್ಯಗತ್ಯವಾಗಿದೆ.
ಎಲ್ಲ ಕ್ಷೇತ್ರಗಳಲ್ಲೂ ಅಧಿಕಾರ ಕಳೆದುಕೊಂಡು ಕಂಗಾಲ್ ಆಗಿರುವ ಎಂಈಎಸ್ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊಸ ಐಡಿಯಾ ಹುಡುಕಿದೆ.