ಲೋಕಸಭೆಗೆ ನಾಮಪತ್ರ ಸಲ್ಲಿಸಿದರೆ ಮಾತ್ರ ಪಾಲಿಕೆ ಚುನಾವಣೆಯ ಟಿಕೆಟ್ ಎಂಈಎಸ್ ನಿಂದ ಆಮೀಷ
ಬೆಳಗಾವಿ- ಕಳೆದ ಲೋಕಸಭಾ ಚುನಾವಣೆಯಲ್ಲಿ ಅಡ್ರೆಸ್ ಕಳೆದುಕೊಂಡು ಕಂಗಾಲಾಗಿರುವ ಮಹಾರಾಷ್ಟ್ರ ಏಕೀಕರಣ ಸಮೀತಿಗೆ ಜಾಗೃತ ಮತದಾರರು ಕಪಾಳಮೋಕ್ಷ ಮಾಡಿದ್ರೂ ಇವರು ಪಾಠ ಕಲಿತಿಲ್ಲ ಈಗ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಪ್ರಕಟಿಸಿ ಎಂಈಎಸ್ ನಾಯಕರು ಪೇಚಿಗೆ ಸಿಲುಕಿದ್ದಾರೆ
ಲೋಕಸಭೆ ಚುನಾವಣೆಗೆ ಸ್ಪರ್ದೆ ಮಾಡಲಿರುವ ಎಂಈಎಸ್ ಕಾರ್ಯಕರ್ತರು ತಮ್ಮ ದಾಖಲೆಗಳನ್ನು ಕೊಡಿ ಎಂದು ಎಂಈಎಸ್ ಸುತ್ತೋಲೆ ಹೊರಡಿಸಿತ್ತು ಇದಕ್ಕೆ ರಿಸ್ಪಾನ್ಸ ಸಿಗದೇ ಇರುವದರಿಂದ ಎಂಈಎಸ್ ನಾಯಕರು ಈಗ ಹೊಸ ತಂತ್ರ ರೂಪಿಸಿದ್ದಾರೆ ಲೋಕಸಭೆಗೆ ಯಾರು ನಾಮಪತ್ರ ಸಲ್ಲಿಸುತ್ತಾರೋ ಮುಂದಿನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಎಂಈಎಸ್ ಟಿಕೆಟ್ ಅವರಿಗೆ ಕೊಡುತ್ತೇವೆ ಎಂದು ಎಂಈಎಸ್ ನಾಯಕರು ಫರ್ಮಾನು ಹೊರಡಿಸಿದ್ದಾರೆ
ಮಾಜಿ ಶಾಸಕ ಮನೋಹರ ಕಿಣೇಕರ ದೀಪಕ ದಳವಿ,ಪ್ರಕಾಶ ಮರಗಾಳೆ ಮತ್ತು ಅಷ್ಟೇಕರ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಕೂಡಿಕೊಂಡು ಲೋಕಸಭೆ ಚುನಾವಣೆಗೆ 101 ಅಭ್ಯರ್ಥಿಗಳನ್ನು ನಿಲ್ಲಿಸುವದಾಗಿ ಹೇಳಿಕೆ ನೀಡಿ ಈಗ ಕಂಗಾಲಾಗಿದ್ದಾರೆ ನಾಮಪತ್ರ ಸಲ್ಲಿಸಲು ಯಾರೊಬ್ಬರು ಮುಂದೆ ಬರುತ್ತಿಲ್ಲ ಹೀಗಾಗಿ ಈ ಚಾಲಾಕಿ ಖಿಲಾಡಿಗಳು ಈಗ ನಾಮಿನೇಶ್ ಮುಂದೆ ಕಾರ್ಪೋರೇಶನ್ ಎಂಬ ಬ್ಲ್ಯಾಕ್ ಮೇಲ್ ಮಾಡಲು ಇವರು ಮುಂದಾಗಿದ್ದು ಇವರ ಬ್ಲ್ಯಾಕ್ ಮೇಲೆ ತಂತ್ರಕ್ಕೆ ಮೂವತ್ತು ಜನ ಮರುಳಾಗಿರುವದು ವಿಶೇಷ
ಡಿಸಿಗೆ ಭೇಟಿ
ಇಂದು ಬೆಳಿಗ್ಗೆ 11 ಘಂಟೆಗೆ ಚುನಾವಣಾಧಿಕಾರಿಗಳಾಹಿರುವ ಜಿಲ್ಲಾಧಿಕಾರಿಗಳನ್ನು ಎಂಈಎಸ್ ನಾಯಕರು ನಾಮಪತ್ರ ಸಲ್ಲಿಸಲು ಅರ್ಜಿ ನಮೂನೆಗಳನ್ನು ಪಡೆಯಲಿದ್ದಾರೆ 11 ಘಂಟೆಗೆ ಅರ್ಜಿ ಪಡೆಯಲು ಡಿಸಿ ಕಚೇರಿಗೆ ಎಂಈಎಸ್ ನಾಯಕರು ಬರಲಿದ್ದು ಎಷ್ಟು ಜನ ಅರ್ಜಿ ಪಡೆಯುತ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ