ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗು ಉಪ ಮೇಯರ್ ಇಬ್ಬರೂ ಮಾಡಬಾರದ ಕಿತಾಪತಿ ಮಾಡಿ ಈಗ ಫೋನ್ ಸ್ವಿಚ್ ಆಫ್ ಮಾಡಿ ನಾಟ್ ರೀಚೇಬಲ್ ಆಗಿರುವದು ಹಾಸ್ಯಾಸ್ಪದದ ಸಂಗತಿಯಾಗಿದೆ
ರಾಜ್ಯೋತ್ಸವದ ದಿನ ಎಂಈಎಸ್ ಕರಾಳ ದಿನ ಆಚರಿಸಿತ್ತು ಈ ಕರಾಳ ದಿನಾಚರಣೆಯಲ್ಲಿ ಮೇಯರ್ ಸರೀತಾ ಪಾಟೀಲ,ಹಾಗು ಉಪ ಮೇಯರ್ ಸಂಜಯ ಶಿಂಧೆ ಶಾಸಕರಾದ ಅರವಿಂದ ಪಾಟೀಲ ಸಂಬಾಜಿ ಪಾಟೀಲ ಮತ್ತು ಕೆಲವು ನಗರ ಸೇವಕರು ಭಾಗವಹಿಸಿದ್ದರು
ಸರ್ಕಾರ ಈಗ ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಚಿಂತನೆ ನಡೆಸಿರುವದರಿಂದ ನಾಡವಿರೋಧಿಗಳಿಗೆ ಶಾಕ್ ಆಗಿದ್ದು ಮೇಯರ್ ಉಪ ಮೇಯರ್ ಇಬ್ಬರೂ ತಮ್ಮ ಮೋಬೈಲ್ ಗಳನ್ನು ಸ್ವಿಚ್ ಅಪ್ ಮಾಡಿಕೊಂಡು ನಾಟ್ ರೀಚೇಬಲ್ ಆಗಿದ್ದು ಇಬ್ಬರ ಚೇಂಬರಗಳಿಗೆ ಬೀಗ ಜಡಿಯಲಾಗಿದೆ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿ ಮಾಡಲಾಗಿದೆ ಜೊತೆಗೆ ಇಬ್ಬರು ಎಂಈಎಸ್ ಶಾಸಕರ ಮನೆಗಳ ಮುಂದೆ ಬುಗಿ ಪೋಲೀಸ್ ಪಹರೆ ಇಡಲಾಗಿದೆ
ಇನ್ನೊಂದೆಡೆ ಕನ್ನಡ ಸಂಘಟನೆಗಳು ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ಡಿಸಿ ಕಚೇರಿ ಎದುರು ಟೆಂಟ್ ಹಾಕಿದ್ದಾರೆ
ಬಂಧನ
ಕರಾಳ ದಿನಾಚರಣೆಯಲ್ಲಿ ಗನ್ ಹಿಡಿದು ಮೆರೆದಾಡಿದ್ದ ಪವಾರ ಎಂಬಾತನನ್ನು ಬೆಳಗಾವಿ ಸಿಸಿಬಿ ಪೋಲೀಸರು ಬಂಧಿಸಿದ್ದಾರೆ