ಬೆಳಗಾವಿ: ಎಂಇಎಸ್ ಸಂಘಟಿಸಿದ ರ್ಯಾಲಿಯಲ್ಲಿ ನಿಯಮ ಉಲ್ಲಂಘನೆಯಾದ ಹಿನ್ನಲೆಯಲ್ಲಿ ಶಾಸಕರಾದ ಸಂಭಾಜೀ ಪಾಟೀಲ, ಅರವಿಂದ ಪಾಟೀಲ ಸೇರಿದಂತೆ ೩೦೦ಕ್ಕೂ ಅಧಿಕ ಎಂಇಎಸ್ ಕಾರ್ಯಕರ್ತರ ವಿರುದ್ಧ ಮಹಾನಗರ ಪೊಲೀಸರು ದೂರು ದಾಖಲಿಸಿದ್ದಾರೆ.
ಬೆಳಗಾವಿಸುದ್ದಿ ಡಾಟ್ಕಾಮ್ಗೆ ಡಿಸಿಪಿ ಅಮರನಾಥ ರೆಡ್ಡಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಗುರುವಾರ ಎಂಇಎಸ್ ವಿವಿಧ ಬೇಡಿಕೆಗಳ ಈಡೇರಿಕೆಗೆ ಶಾಂತಿಯುತ ರ್ಯಾಲಿ ನಡೆಸುವುದಾಗಿ ಹೇಳಿಅನುಮತಿ ಪಡೆದಿತ್ತು. ಆದರೆ ನಿಯಮಗಳ ಉಲ್ಲಂಘಿಯಾದ ಈ ಹಿನ್ನೆಲೆಯಲ್ಲಿ ಕಲಂ ೧೫೩(ಎ), ೧೮೮ ಅಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ರೆಡ್ಡಿ ತಿಳಿಸಿದ್ದಾರೆ.
ಮರಾಠಿ ಪತ್ರಿಕೆಗಳಿಗೆ ಡಿಸಿ ಎಚ್ಚರಿಕೆ:
ಪತ್ರಿಕೆಗಳಲ್ಲಿ ಪ್ರಚೋದನಾತ್ಮಕ ವರದಿ ಪ್ರಕಟಿಸುವ ಮರಾಠಿ ಪತ್ರಿಕೆಗಳ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ಜಿಲ್ಲಾಧಿಕಾರಿ ಎನ್. ಜಯರಾಂ ಖಡಕ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಗುರುವಾರ ಸದ್ದಿಗಾರರೊಂದಿಗೆ ಮಾತನಾಡಿದ ಅವರು,ಪತ್ರಿಕಾ ಸ್ವಾತಂತ್ರ್ಯ ವನ್ನು ನಾನು ಗೌರವಿಸುತ್ತೇನೆ.ವಸ್ತುನಿಷ್ಠ ವರದಿಗಳನ್ನು ಮಾತ್ರ ಪ್ರಕಟಿಸಬೇಕು. ಅದನ್ನು ಬಿಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಪ್ರಚೋದಿಸುವ ವರದಿ ಪ್ರಕಟಿಸಿದರೆ ಮುಂದೆ ಕ್ರಮ ಜರಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ