ಬೆಳಗಾವಿ:ತೀವ್ರ ಕುತೂಹಲ ಕೆರಳಿಸಿದ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಲೆಕ್ಕ ಸ್ಥಾಯಿ ಸಮಿತಿ ಕನ್ನಡಿಗರ ಪಾಲಾದರೆ, ಉಳಿದ ಮೂರು ಸ್ಥಾಯಿ ಸಮಿತಿಗಳು ಆಡಳಿತರೂಢ ಮರಾಠಿ ಗುಂಪಿನ ಪಾಲಾಗಿವೆ.
ಆಡಳಿತ ಮತ್ತು ವಿರೋಧಿ ಗುಂಪಿನ ಭಿನ್ನಮತದ ಪರಿಣಾಮ ಮೂರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದಿದ್ದು, ಈ ಮೂರು ಸಮಿತಿಗಳ ಮೇಲೆ ಮರಾಠಿಗರ ಗುಂಪು ಹಿಡಿತ ಸಾಧಿಸಿದೆ. ವಿವಿಧ ಸ್ಥಾಯಿ ಸಮಿತಿಗಳಿಗೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ.
ಲೆಕ್ಕಗಳ ಸ್ಥಾಯಿ ಸಮಿತಿ:
ಮೈನಾಬಾಯಿ ಚೌಗಲೆ, ಶಿವಾಜಿ ರಾಮಚಂದ್ರ ಕುಡೂಚಕರ, ಕಿರಣ ಕೃಷ್ಣಾರಾವ್ ಸಾಯನಾಕ, ಕತನ ಮಾಸೇಕರ, ಫಯಿಮ್ ಇಕ್ಬಾಲ ಅಹ್ಮದ ನಾಯಿಕವಾಡಿ ಹಾಗೂ ಪುಷ್ಪಾ ಸಂತೋಷ ಪರ್ವತರಾವ್ ಅವರು ಅವಿರೋಧವಾಗಿ ಆಯ್ಕೆಯಾದರು.
ನಗರ ಯೋಜನೆ ಮತ್ತು ನಗರ ಅಭಿವೃದ್ಧಿ ಸ್ಥಾಯಿ ಸಮಿತಿ: ರಾಕೇಶ ರಘುನಾಥ ಪಲಂಗೆ, ಮೋಹನ ಬಾಂಧುರ್ಗೆ, ಮಧುಶ್ರೀ ಅಪ್ಪಾಸಾಹೇಬ ಪೂಜಾರಿ, ಮೀನಾಕ್ಷಿ ಮೋಹನ ಜಿಗರೆ, ಜಯಶ್ರೀ ಪ್ರಕಾಶ ಮಾಳಗಿ, ಶ್ರೀಯಲಾ ಬಾಹುಬಲಿ ಜಿನಗೌಡ, ಖಾಲಿ ಅಜಮ ಎಂ ಸಿದ್ದಕಿ (ಪಿಂಟು) ಚುನಾಯಿತಗೊಂಡಿದ್ದಾರೆ.
ತೆರಿಗೆ ನಿರ್ಧರಣೆ ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ: ಸಂಜಯ ನಾಗೇಶ ಸವ್ವಾಸೇರಿ, ಶಾಂತವ್ವ ಹಣುಮಂತ ಉಪ್ಪಾರ, ಸತೀಶ ನಾಗೇಶ ದೇವರಪಾಟೀಲ, ವೈಶಾಲಿ ರವೀಂದ್ರ ಹುಲಜಿ, ರೂಪಾ ಶಿವಾಜಿ ನೇಸರಕರ, ಮಲ್ಲಸರ್ಜ ಬಳಗಣ್ಣವರ, ರೇಣು ಮುತಗೇಕರ ಚುನಾಯಿತಗೊಂಡಿದ್ದಾರೆ.
ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ವಿಜಯ ಬೋಸಲೆ, ರಾಜು ಬಿರ್ಜೆ, ಸುಧಾ ಬಾತಖಾಂಡೆ, ಬಸಪ್ಪ ಚಿಕ್ಕಲದಿನ್ನಿ, ಮನೋಹರ ಹಲಗೇಕರ, ರವಿ ದೋತ್ರೆ ಮತ್ತು ಲೋಕೇಶ್ ಚುನಾಯಿತಗೊಂಡಿದ್ದಾರೆ.