ಬೆಳಗಾವಿ- ಗಡಿನಾಡ ಗುಡಿ ಬೆಳಗಾವಿಯಲ್ಲಿ ನಾಡವಿರೋಧಿಗಳ ಚಲ್ಲಾಟ ವಿಪರೀತವಾಗಿದೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಾಲ ಬಿಚ್ಚಿರುವ ಎಂಈಎಸ್ ನಾಯಕರು ಬೆಳಗಾವಿಯ ಮರಾಠಾ ಮಂದಿರದಲ್ಲಿ ಸಭೆ ಸೇರಿ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಬೆಳಗಾವಿಯಲ್ಲಿ ಮರಾಠಿ ಮಹಾ ಮೇಳಾವ್ ನಡೆಸುವ ಪುಂಡಾಟಿಕೆಯ ನಿರ್ಧಾರ ತೆಗೆದುಕೊಂಡಿದ್ದಾರೆ
ಮನೋಹರ ಕಿಣೇಕರ ದೀಪಕ ದಳವಿ ಅರವಿಂದ ಪಾಟೀಲ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಸಭೆ ಸೇರಿ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ, ದಿನ ಮರಾಠಿ ಮಹಾ ಮೇಳಾವ್ ನಡೆಸಿ ಪುಂಡಾಟಿಕೆ ಪ್ರದರ್ಶಿಸಲು ನಿರ್ಧರಿಸಿದ್ದಾರೆ
ಕರ್ನಾಟಕ ಸರ್ಕಾರ ಗಡಿ ಭಾಗದ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡುತ್ತಿದೆ ಅಂತೆ ಇದಕ್ಕೆ ಉತ್ತರ ನೀಡಲು ಮರಾಠಿ ಭಾಷಿಕರು ಒಂದಾಗಬೇಕಂತೆ ಮಹಾರಾಷ್ಟ್ರ ನಾಯಕರು ಬೆಳಗಾವಿಗೆ ಬರಬೇಕಂತೆ ಹೀಗೆ ಅಂತೆ ಕಂತೆಗಳ ಸಂತೆಯಾಗಿದ್ದ ಎಂಈಎಸ್ ಸಭೆಯಲ್ಲಿ ಮಾಜಿ ಶಾಸಕ ಮನೋಹರ ಕಿಣೇಕರ ಎಂದಿನಂತೆ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದರೆ ದೀಪಕ ದಳವಿ ಕೇಂದ್ರ ಗೃಹ ಸಚಿವರನ್ನು ಭೇಟಿಯಾದ ಬಗ್ಗೆ ವರದಿ ಮಂಡಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ