ಬೆಳಗಾವಿ: ಗಡಿಭಾಗದಲ್ಲಿ ಭಾಷಾ ವೈಷ್ಯಮ್ಯದ ವಿಷ ಬೀಜ ಬಿತ್ತಿ ಮುಗ್ಧ ಮರಾಠಿಗರನ್ನು ಪ್ರಚೋದಿಸಿ ಅಧಿಕಾರ ಪಡೆಯಲು ಕಿತ್ತಾಟ ನಡೆಸಿರುವ ಎಂಇಎಸ್ ನಾಯಕರ ನಡುವಿನ ಕಲಹ ತಾರಕಕ್ಕೇರಿದೆ. ಮಾಜಿ ಶಾಸಕರು ಮನೋಹರ ಕಿಣೇಕರ, ಕಿರಣ ಠಾಕೂರ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ನಾನು ನಾನೇ….. ನೀನು ನೀನೇ……. ಎಂದು ಎರಡು ಗುಂಪುಗಳು ಒಬ್ಬರಿಗೆ ಇನ್ನೋಬ್ಬರು ಭರಕಾಸ್ತ ಮಾಡಿದ್ದು ಎಂಇಎಸ್ ಈಗ ಸಂಪೂರ್ಣವಾಗಿ ಒಡೆದ ಮನೆಯಾಗಿದೆ.
ಕಿಣೇಕರ ಹಾಗೂ ಕಿರಣ ಠಾಕೂರ ಗುಂಪುಗಳನ್ನು ಒಂದು ಮಾಡಲು ಎಂಇಎಸ್‍ನ ಕೆಲವು ನಾಯಕರು ಪ್ರಯತ್ನಿಸಿದ್ದರು. ಆದರೆ ಇವರ ಪ್ರಯತ್ನ ಫಲ ಕೊಡಲಿಲ್ಲ. ಕಿರಣ ಠಾಕೂರ ಗುಂಪು ಮದ್ಯವರ್ತಿ ಎಂಇಎಸ್ ಗುಂಪನ್ನು ಭರಕಾಸ್ತ ಮಾಡಿದರೆ ಕಿಣೇಕರ ಗುಂಪು ಠಾಕೂರ ಗುಂಪನ್ನು ಉಚ್ಛಾಟಿಸಿ ನಮ್ಮ ಗುಂಪೇ ನಿಜವಾದ ಎಂಇಎಸ್ ಎಂದು ಎರಡು ಗುಂಪುಗಳು ಹೇಳಿಕೊಂಡಿವೆ.
ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಖಾನಾಪೂರದಲ್ಲಿ ಎರಡು ಗುಂಪಿನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಗುಂಪುಗಳ ನಡುವಿನ ಭಿನ್ನಮತವನ್ನು ಶಮನ ಮಾಡಲು ಹಲವಾರು ಜನ ಎಂಇಎಸ್ ನಾಯಕರು ಕಳೆದ ಮೂರು ದಿನಗಳಿಂದ ನಿರಂತರವಾಗಿ ಸಭೆಗಳನ್ನು ನಡೆಸಿ ಒಮ್ಮತ ಮೂಡಿಸುವ ಪ್ರಯತ್ನ ಮಾಡಿದ್ದರು. ಆದರೆ ಇವರ ಪ್ರಯತ್ನಕ್ಕೆ ತಣ್ಣೀರೆರಿಚಿದ ಎರಡು ಗುಂಪುಗಳು ಪರಸ್ಪರ ವಿರೋಧ ಹೇಳಿಕೆಗಳನ್ನು ನೀಡಿ ರಂಪಾಟವನ್ನು ಬೀದಿಗೆ ತಂದಿದ್ದಾರೆ.
Check Also
ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ
ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …