ಬೆಳಗಾವಿ- ಗಡಿ ಭಾಗದ ಬೆಳಗಾವಿಯಲ್ಲಿ ನಾಡ ವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ಬಂಡವಾಳ ಈಗ ಬಯಲಾಗಿದೆ ಬೆಳಗಾವಿ ನಗರದಲ್ಲಿ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿರುವ ನಾಡ ವಿರೋಧಿಗಳ ಕರಾಳ ದಿನಾಚರಣೆಯ ಸೈಕಲ್ ರ್ಯಾಲಿಗೆ ಜನ ಸೇರದೇ ಕಂಗಾಲಾಗಿರುವ ಎಂಈಎಸ್ ಈಗ ಮಹಾರಾಷ್ಟ್ರದ ಕೊಲ್ಲಾಪೂರದಲ್ಲಿ ನಡೆದ ಮರಾಠಾ ಮೀಸಲಾತಿಯ ಮೌನ ಹೋರಾಟದ ನಕಲು ಮಾಡಲು ಷಡ್ಯಂತ್ರ ನಡೆಸಿದೆ
ಬೆಳಗಾವಿಯ ಎಂಈಎಸ್ ನಾಯಕರು ಬುಧವಾರ ರಾತ್ರಿ ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಬೆಳೆಸಲಿದ್ದು ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೆಳಗಾವಿಯ ಕರಾಳ ದಿನಾಚರಣೆಗೆ ಬರುವಂತೆ ಆಮಂತ್ರಣ ನೀಡಲಿದ್ದಾರೆ ಅದಲ್ಲದೆ ಮಹಾರಾಷ್ಟ್ರದ ಶಿವಸೇನೆಯ ನಾಯಕರನ್ನು ರಾಜ್ಯೋತ್ಸವದ ದಿನ ಬೆಳಗಾವಿಯಲ್ಲಿ ನಡೆಯಲಿರುವ ಸೈಕಲ್ ರ್ಯಾಲಿಯಲ್ಲಿ ಭಾಗವಹಿಸುವ ಆಮಂತ್ರಣ ನೀಡಲಿದ್ದಾರೆ
ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಬೆಳಗಾವಿ ಗಡಿ ವಿವಾದದ ಕುರಿತು ತದ್ಞರ ಸಮೀತಿಯ ಸಭೆ ಕರೆದಿದ್ದಾರೆ ಸಭೆಯಲ್ಲಿ ಭೆಳಗಾವಿಯಎಂಈಎಸ್ ಶಾಸಕರಾದ ಸಂಬಾಜಿ ಪಾಟೀಲ ಅರವಿಂದ ಪಾಟೀಲ ದೀಪಕ ದಳವಿ ಮಾಲೋಜಿ ಅಷ್ಟೇಕರ ಮನೋಹರ ಕಿಣೇಕರ ದಿಗಂಬರ ಪಾಟೀಲ ಮೊದಲಾದವರು ಭಾಗವಹಿಸಲಿದ್ದಾರೆ
ಇತ್ತಚಿಗೆ ಮಹಾರಾಷ್ಟ್ರದ ಕೊಲ್ಲಾಪೂರದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡಲು ಆಗ್ರಹಿಸಿ ಮರಾಠಾ ಮೂಕ ಕ್ರಾಂತಿ ಮೋರ್ಚಾ ನಡೆದಿತ್ತು ಈ ಮೋರ್ಚಾದಲ್ಲಿ ಲಕ್ಷಾಂತರ ಮರಾಠಾ ಸಮುದಾಯದ ಜನ ಭಾಗವಹಿಸಿದ್ದರು ಇದೇ ಮಾದರಿಯಲ್ಲಿ ಮುಂದಿ ಡೆಸೆಂಬರ ತಿಂಗಳಲ್ಲಿ ಬೆಳಗಾವಿಯಲ್ಲಿಯೂ ಮರಾಠಾ ಮೂಕ ಮೋರ್ಚಾ ನಡೆಸಲು ಎಂಈಎಸ್ ನಿರ್ಧರಿಸಿದೆ
ಒಟ್ಟಾರೆ ಅಸ್ತಿತ್ವ ಕಳೆದುಕೊಂಡಿರುವ ನಾಡವಿರೋಧಿಗಳು ರಾಜ್ಯೋತ್ಸವದ ದಿನದಂದು ನಡೆಯ4ವ ಕರಾಳ ದಿನಾಛರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ಮಹಾರಾಷ್ಟ್ರ ಸರ್ಕಾರದ ದುಂಬಾಲು ಬಿದ್ದಿದ್ದಾರೆ