ಬೆಳಗಾವಿ- ಬೆಳಗಾವಿ ನಗರದಲ್ಲಿ ಕರ್ನಾಟಕ ರಾಜ್ಯೋತ್ಸವದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದ ಕನ್ನಡಾಭಿಮಾನಿಗಳ ಸಿಂಹ ಘರ್ಜನೆಯ ಎದುರು ನಾದ್ರೋಹಿ ಝಾಪಾಗಳ ಕರಾಳ ದಿನ ಸಪ್ಪೆಯಾಯಿತು ಕನ್ನಡಿಗರ ಸ್ವಾಭಿಮಾನದ ಜ್ವಾಲೆಯ ಹೊಡೆತಕ್ಕೆ ಕರಾಳ ಮುಖಗಳಿಗೆ ಲಕ್ವಾ ಹೊಡೆಯಿತು
ನಾವು ನಿಮಗೆ ರೇಶನ್ ಕಾರ್ಡ ಕೊಡಿಸುತ್ತೇವೆ ಆಶ್ರಯ ಮನೆ ಕೊಡಿಸುತ್ತೇವೆ ಎಂದು ಮುಗ್ದ ಮರಾಠಿಗರನ್ನು ಹಳ್ಳಿಗಳಿಂದ ಬೆಳಗಾವಿಗೆ ಕರೆಯಿಸಿ ಮಾಡಿದ ಸೈಕಲ್ ಜಾಥಾ ಕೊನೆಗೂ ಠುಸ್ಸಾಯಿತು
ಕರಾಳ ದಿನಾಚರಣೆಯಲ್ಲಿ ಸರ್ಕಾರದ ಸವಲತ್ತು ಪಡೆದು ಸರ್ಕಾರದ ಆಧಿನದಲ್ಲಿರುವ ನಾಡದ್ರೋಹಿ ಮೇಯರ್ ಸರೀತಾ ಪಾಟೀಲ ಹಾಗು ಉಪ ಮೇಯರ್ ಹಾಗು ಶಾಸಕ ಸಂಬಾಜಿ ಪಾಟೀಲ,ಅರವಿಂದ ಪಾಟೀಲ ಸೇರಿದಂತೆ ಕೆಲವು ಎಂಈಎಸ್ ನಗರ ಸೇವಕರು ಕರಾಳ ದಿನದ ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಸವಾಲ್ ಹಾಕಿದ್ದು ಇವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುವದಾಗಿ ಜಿಲ್ಲಾಧಿಕಾರಿ ಜೈರಾಮ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ