ಬೆಳಗಾವಿ-
ರಾಜ್ಯೋತ್ಸವನ್ನು ವಿರೋಧಿಸಿ ನಾಡ ದ್ರೋಹಿ ಎಂಇಎಸ್ ನಿಂದ ಕರಾಳ ದಿನ ಆಚರಣೆಗೆ
ರ್ಯಾಲಿಯಲ್ಲಿ ಪಾಲಿಕೆ ಮೇಯರ್ ಸಂಜೋತಾ ಬಾಂಧೇಕರ ಅವರು ಭಾಗವಹಿಸುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ್ದಾರೆ
ಕರಾಳ ದಿನಾಚರಣೆಯ ಸೈಕಲ್ ರ್ಯಾಲಿಯಲ್ಲಿ ಭಾಗವಹಿಸಿದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಹಾಗೂ ಮೇಯರ ಸಂಜೋತ್ ಬಾಂದೇಕರ ಭಾಗಿ
ರಾಗ ಬದಲಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್
ಇದುವೆರೆಗೂ ಕನ್ನಡಿಗರು ಕರ್ನಾಟಕ ಸರ್ಕಾರದ ವಿರುದ್ದ ಹೇಳಿಕೆ ನೀಡುತ್ತಿದ್ದ ಶಾಸಕ ಸಂಭಾಜಿ ಪಾಟೀಲ ಈಗ ಕೇಂದ್ರ ಸರ್ಕಾರದ ವಿರುದ್ದ ಆರೋಪ ಮಡುವ ಹೊಸ ರಾಗ ಶುರುಮಾಡಿದ್ದಾರೆ
ನಮ್ಮ ಹೋರಾಟ ರಾಜ್ಯ ಸರ್ಕಾರದ ವಿರುದ್ದ ಅಲ್ಲ.ಅದು ಕೇಂದ್ರ ಸರ್ಕಾರದ ವಿರುದ್ದವಾಗಿದೆ.
ಕೇಂದ್ರ ಸರ್ಕಾರ ನಮಗೆ ಅನ್ಯಾಯವಾಗಿದೆ.ನಾವು ಹಿಂದೆ ಮುಂಬೈ ಪ್ರಾಂತ್ಯದಲ್ಲಿದ್ದು,ಹಾಗಾಗಿ ನಮ್ಮನ್ನ ಮಹಾರಾಷ್ಟ್ರ ಕ್ಕೆ ಸೇರಿಸಿ ಅಂತಾ ಹೋರಾಟ ಮಾಡುತ್ತಿದ್ದೇವೆ.
ಬೆಳಗಾವಿ ಮತ್ತು ಮರಾಠಿಗರು ಒಟ್ಟಿಗೆ ಇದ್ದೇವೆ ಕನ್ನಡಿಗರ ಮೇಲಾಗಲಿ, ರಾಜ್ಯ ಸರ್ಕಾರದ ಮೇಲಾಗಲಿ ನಮಗೆ ಯಾವುದೇ ದ್ವೇಷ ಇಲ್ಲ.
ಮಾದ್ಯಮಗಳಿಗೆ ಶಾಸಕ ಸಂಭಾಜಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ
ಕಳೆದ ವರ್ಷವೂ ಮೇಯರ್ ಸಂಜೋತಾ ನಾಡವಿರೋಧಿ ಕರಾಳದಿನಾಚರಣೆಯಲ್ಲಿ ಭಾಗವಹಿಸಿ ಪುಂಡಾಟಿಕೆ ಪ್ರದರ್ಶನ ಮಾಡಿದ ಹಾಗೆ ಈ ವರ್ಷವೂ ಸರ್ಕಾರದ ಕ್ರಮದ ಯಾವುದೇ ಭೀತಿ ಇಲ್ಲದೇ ಮೇಯರ್ ಕರಾಳ ದಿನಾಚರಣೆಗೆ ಹಾಜರ್ ಆಗುವ ಮೂಲಕ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ
ಬೆಳಗಾವಿಯಲ್ಲಿ ಎಂಇಎಸ ಕರಾಳ ದಿನ ಠುಸ್ ಆಗಿದೆ ನಗರದ ಧರ್ಮವೀರ ಸಂಭಾಜಿ ಮೈದಾನದಿಂದ ರ್ಯಾಲಿ ಆರಂಭವಾಗಿದ್ದು ಕರಾಳ ದಿನ ರ್ಯಾಲಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನ ಸೇರದೇ ಇರುವದರಿಂದ ನಾಡವಿರೋಧಿ ಎಂಈಎಸ್ ಕಂಗಾಲಾಗಿದೆ
ಕರಾಳ ದಿನದಲ್ಲಿ ಎಂಇಎಸ ಭಿನ್ನಮತ ಬಯಲಾಗಿದ್ದು
ಮ ಶಾಸಕ ಸಂಭಾಜಿ ಪಾಟೀಲ್, ಕಿರಣ ಠಾಕೂರು ಮತ್ತು ಮನೋಹರ ಕಿಣೆಕರ ಪ್ರತ್ಯೇಕವಾಗಿ ಮೂರು ಬಣಗಳಿಂದ ಪ್ರತ್ಯೇಕ ರ್ಯಾಲಿ ನಡೆದಿದೆ
ಬಾಯಿಗೆ ಕಪ್ಪು ಪಟ್ಟಿಕಟ್ಟಿಕೊಂಡು ಕರಾಳ ದಿನದಲ್ಲಿ ಭಾಗಿಯಾದ ನಾಡವಿರೋಧಿಗಳು ಸೈಕಲ್ ರ್ಯಾಲಿ ನಡೆಸಿದರು
ಬೀಗಿ ಪೊಲೀಸ ಭದ್ರತೆಯಲ್ಲಿ ಕರಾಳ ದಿನದ ರ್ಯಾಲಿ ನಡೆಯುತ್ತಿದೆ