Breaking News

ಬೆಳಗಾವಿ ಜಿ ಪಂ ಸಾಮಾನ್ಯ ಸಭೆಯಲ್ಲಿ ಎಂ ಈ ಎಸ್ ಸದಸ್ಯರ ಪುಂಡಾಟಿಕೆ

ಬೆಳಗಾವಿ-ಸೋಮವಾರ ಬೆಳಗಾವಿ ಜಿಲ್ಲಾ ಪಂಚಾಯತಿಯ ಸಭಾ ಭವನದಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಎಂಇಎಸ್ ಸದಸ್ಯರು ಮರಾಠಿ ಭಾಷೆಯಲ್ಲಿ ಕಾಗದ ಪತ್ರಗಳನ್ನ ನೀಡುವಂತೆ ಆಗ್ರಹಿ ತಗಾದೆ ತಗೆದು ಪುಂಡಾಟಿಕೆ ನಡೆಸಿದಾಗ ಕನ್ನಡದ ಸದಸ್ಯರು ಒಗ್ಗಟ್ಟಾಗಿ ಎಂಇಎಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು
ಸಭೆಯ ಕಲಾಪ ಾರಂಭವಾಗುತ್ತಿದ್ದಂತೆಯೇ ಎಂಇಎಸ್ ಸದಸ್ಯೆ ಸರಸ್ವತಿ ಪಾಟೀಲ ಮರಾಠಿ ಭಾಷೆಯಲ್ಲಿ ಕಾಗದ ಪತ್ರಗಳನ್ನು ನೀಡುವಂತೆ ಒತ್ತಾಯಿಸಿದಾಗ ಸದಸ್ಯ ಶಂಕರ ಮಾಡಲಗಿ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.ಎಂಇಸ್ ಸದಸ್ಯರಿಗೆ ಕನ್ನಡ ಬರುತ್ತದೆ ಸಭೆಯಲ್ಲಿ ಪ್ರಚಾರ ಪಡೆಯಲು ನಾಟಕ ಮಾಡುತ್ತಾರೆ ಇವರ ಮಾತಿಗೆ ಕಿವಿಗೊಡಬೇಡಿ ಇದು ಕರ್ನಾಟಕ ಇಲ್ಲಿ ಕನ್ನಡದಲ್ಲಿಯೇ ವ್ಯೆವಹಾರ ನಡೆಯಬೇಕು ಎಂದು ತರಾಟೆಗೆ ತೆಗೆದುಕೊಂಡರು.ಅದಕ್ಕೆ ಗೌತಂ ಬಗಾದಿ ಅವರು ಸಾಥ್ ನೀಡಿ ಇಲ್ಲಿ ಕನ್ನಡದಲ್ಲ ಮಾತ್ರ ಸಭೆಯ ಕಲಾಪಗಳು ನಡೆಯುತ್ತದೆ ಸುಮ್ಮಸುಮ್ನೆ ಡಿಸ್ಟರ್ಬ ಮಾಡಬೇಡಿ ಎಂದು ಹೇಳಿದರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *