ಸೂಪರ್ ಸೀಡ್ ಸಂಧಾನಕ್ಕಾಗಿ ಸಿಎಂ ಬಳಿ ಕಾಕಾ..ಮಾಮಾ ಹಾಜರ್…!

ಬೆಳಗಾವಿ- ನಾಡವಿರೋಧಿ ಎಂಈಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ಮೇಯರ್ ಸರೀತಾ ಪಾಟೀಲ ಹಾಗು ಉಪ ಮೇಯರ್ ಸಂಜಯ ಶಿಂಧೆಗೆ ನೋಟೀಸ್ ಜಾರಿಯಾದಾಗಿನಿಂದ ಎಂಈಎಸ್ ನಾಯಕರು ಬೆಚ್ಚಿಬಿದ್ದಿದ್ದಾರೆ

ಸರ್ಕಾರ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬಹುದೆಂಬ ಆತಂಕದಿಂದ ಎಂಈಎಸ್ ನಾಯಕ ಕಿರಣ ಸೈನಾಯಕ,ಮಹೇಶ ನಾಯಕ.ಸೇರಿದಂತೆ ಹಲವಾರು ಜನ ಎಂಈಎಸ್ ನಗರ ಸೇವಕರು ಮುಖ್ಯಮಂತ್ರಿಗಳನ್ನು ಸಾಂಬ್ರಾ ವಿಮಾಣ ನಿಲ್ದಾಣದಲ್ಲಿ ಭೇಟಿಯಾಗಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಡಿ ಎಂದು ಅಂಗಲಾಚಿದ್ದು ಹಾಸ್ಯಾಸ್ಪದವಾಗಿತ್ತು

ಕರಾಳ ದಿನಾಚರಣೆಯಲ್ಲಿ ಭಾಗವಹಿದವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಿ ಸೂಪರ್ ಸೀಡ್ ಬೇಡ ಎಂದು ಎಂಈಎಸ್ ನಗರ ಸೇವಕರು ಹಾಗು ಕನ್ನಡ ನಗರ ಸೇವಕರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ

ಪಾಲಿಕೆಯ ಕಾಕಾ ರಮೇಶ ಸೊಂಟಕ್ಕಿ ಪಾಲಿಕೆಯ ಮಾಮಾ ಕಿರಣ ಸೈನಾಯಕ ಅವರು ಸರ್ಕಾರದ ಸೂಪರ್ ಸೀಡ್ ಶಿಕ್ಷೆಯ ಸ್ಪೀಡ್ ಕಡಿಮೆ ಮಾಡಲು ಕಾಕಾ ಮಾಮಾ ಸಿಎಂ ಮೊರೆ ಹೋದ ವಿಷಯ ಈಗ ನಗರಾದ್ಯಂತ ಚರ್ಚೆಗೆ ಗ್ರಾಸವಾಗಿದೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಈಎಸ್ ಕುರಿತು ಮಾತನಾಡಿದ ಧಾಟಿ ನೋಡಿದರೆ ಬಹುಶ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವದಿಲ್ಲ ಬದಲಾಗಿ ಕೇವಲ ಮೇಯರ್ ಉಪ ಮೇಯರ್ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ

ಸರಕಾರದ ನಡೆಯ ಮೇಲೆ ಕನ್ನಡ ಸಂಘಟನೆಗಳು ತೀರ್ವ ನೀಗಾ ವಹಿಸಿವೆ  ಇಂದು ಸಾಂಬ್ರಾ ವಿಮಾಣ ನಿಲ್ದಾಣದಲ್ಲಿ ನಡೆದ ಪ್ರಹಸನ ಗಮನಿಸಿದರೆ ಕನ್ನಡ ನಗರ ಸೇವಕರು ಎಂಈಎಸ್ ಗೆ ಸಾಥ್ ಕೊಟ್ಟರೇ ಅಥವಾ ಎಂಈಎಸ್ ನಗರ ಸೇವಕರು ಜನ್ನಡ ನಗರ ಸೇವಕರಿಗೆ ಸಾಥ್ ಕೊಟ್ಟರೇ..ಎನ್ನುವ ವಿಷಯ ಮಾತ್ರ ಎಲ್ಲರಿಗೂ ಅರ್ಥವಾಗಲಿಲ್ಲ

 

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *