ಬೆಳಗಾವಿ- ರಾಜ್ಯ ಸರ್ಕಾರ ನವ್ಹೆಂಬರ ೨೧ ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲಿದ್ದು ಇದಕ್ಕೆ ಪ್ರತಿಯಾಗಿ ಎಂಈಎಸ್ ಮರಾಠಿ ಮಹಾ ಮೇಳಾವ್ ನಡೆಸಲು ಅನುಮತಿ ನೀಡುವಂತೆ ನಗರ ಪೋಲೀಸ್ ಆಯುಕ್ರರಿಗೆ ಮನವಿ ಅರ್ಪಿಸಿದೆ
ಶಾಸಕ ಸಂಬಾಜಿ ಪಾಟೀಲ,ಅರವಿಂದ ಪಾಟೀಲ ಹಾಗು ಮಾಜಿ ಶಾಸಕ ಮನೋಹರ ಕಿಣೇಕರ ದೀಪಕ ದಳವಿ ಸೇರಿದಂತೆ ಅನೇಕ ಎಂಈಎಸ್ ನಾಯಕರು ನಗರ ಪೋಲೀಸ್ ಆಯುಕ್ತರನ್ನು ಭೇಟಿ ಮಾಡಿ ಮೇಳಾವ್ ನಡೆಸುವದಾಗಿ ಮಾಹಿತಿ ನೀಡಿದರು
ಈ ಸಂಧರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ದೀಪಕ ದಳವಿ ಗಡಿ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿದೆ ಆದರೂ ರಾಜ್ತಸರ್ಕಾರ ಉದ್ದೇಶಪೂರ್ವಕವಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿದೆ ಇದರಿಂದ ಮರಾಠಿ ಭಾಷಿಕರು ಸಂತೃಷ್ಟರಾಗಿಲ್ಲ ಅದಕ್ಕಾಗಿ ೨೦೦೬ ರಿಂದ ನಾವು ಅಧಿವೇಶನಕ್ಕೆ ಪ್ರತಿಯಾಗಿ ಮೆಳಾವ್ ನಡೆಸುತ್ರ ಬಂದಿದ್ದೇವೆ ಈ ಬಾರಿಯೂ ನಡೆಸುತ್ತೇವೆ ಎಂದು ದೀಪಕ ದಳವಿ ತಿಳಿಸಿದರು
ಶಾಸಕ ಸಂಬಾಜಿ ಪಾಟೀಲ ಮಾತನಾಡಿ ನಮ್ಮ ಹೋರಾಟ ೧೯೪೬ ರಿಂದ ನಡೆಯುತ್ತಿದೆ ರಾಜ್ಯ ಸರ್ಕಾರದ ವಿರುದ್ಧ ನಾವು ಹೋರಾಡುತ್ತಿಲ್ಲ ನಮ್ಮ ಹೋರಾಟ ಇರುವದು ಕೇಂದ್ರ ಸರ್ಕಾರದ ವಿರುದ್ಧವಾಗಿದೆ ಎಂದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ