ಬೆಳಗಾವಿ – ಉತ್ತರ ಕರ್ನಾಟಕದಲ್ಲಿ ಮಹಾದಾಯಿಗಾಗಿ ಸಂಘರ್ಷ ನಡೆಯುತ್ತಿರುವಾಗಲೇ ನಾಡದ್ರೋಹಿ ಎಂಈಎಸ್ ಕ್ಯಾತೆ ತೆಗೆದಿದೆ ಗಡಿ ವಿವಾದ ಬಗೆಹರಿಸುವ ವರೆಗೂ ಮಹಾರಾಷ್ಟ್ರ ಸರ್ಕಾರ ಮಹಾದಾಯಿ ಯೋಜನೆಗೆ ಒಪ್ಪಿಗೆ ಸೂಚಿಸ ಬಾರದು ಎಂದು ಎಂಈಎಸ್ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ಕಾಲು ಕೆದರಿ ಜಗಳಕ್ಕೆ ನಿಂತಿದೆ
ಬೆಳಗಾವಿಯ ಮರಾಠಾ ಯುವ ಮಂಚ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕ ಸರ್ಕಾರ ಗಡಿ ಭಾಗದ ಮರಾಠಿಗರಿಗೆ ಅನ್ಯಾಯ ಮಾಡುತ್ತಿದೆ ಮಹಾದಾಯಿ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಮೂಗು ಹಿಡಿದು ಬಾಯಿ ತೆರೆದು ಕರ್ನಾಟಕ ಸರ್ಕಾರಕ್ಕೆ ಪಾಠ ಕಲಿಸಿ ಮಹಾದಾಯಿ ಯೋಜನೆಗೆ ಒಪ್ಪಿಗೆ ಸೂಚಿಸಬೇಡಿ ಎಂದು ಎಂಈಎಸ್ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ
ಮಹಾಜನ ಆಯೋಗದ ವರದಿಯ ಪ್ರಕಾರ ಕಳಸಾ ಬಂಡೂರಿ ನಾಲೆಯ ಪ್ರದೇಶ ಮಹಾರಾಷ್ಟ್ರಕ್ಕೆ ಸೇರುತ್ತದೆ ಕರ್ನಾಟಕ ಸರ್ಕಾರ ಈ ಪ್ರದೇಶದಲ್ಲಿ ನಾಲೆ ಅಗೆದು ಮಾವುಲಿ ದೇವಸ್ಥಾನಕ್ಕೆ ಧಕ್ಕೆ ಮಾಡಿದೆ ಮಹಾರಾಷ್ಟ್ರ ದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದರೆ ಮೊದಲು ಗಡಿ ವಿವಾದ ಬಗೆಹರಿಸಿ ಎಂದು ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹಾಕಿ ಎಂದು ನಾಡ ವಿರೋಧಿ ಎಂಈಎಸ್ ಕ್ಯಾತೆ ತೆಗೆದಿದೆ
ಉತ್ತರ ಕರ್ನಾಟಕದ ಜನ ಕುಡಿಯುವ ನೀರಿಗಾಗಿ ಕಣ್ಣೀರು ಸುರಿಸುತ್ತಿರುವಾಗ ನಾಡದ್ರೋಹಿ ಗಳು ಇದೇ ಕಣ್ಣೀರಿನಲ್ಲಿ ಕೈ ತೊಳೆಯಲು ಹೊಂಚು ಹಾಕಿದ್ದು ಮಹಾದಾಯಿ ನೀರನ್ನು ಕರ್ನಾಟಕದ ನೆಲಕ್ಕೆ ಹರಿಯಲು ಅನುಮತಿ ಕೊಡಬೇಡಿ ಎಂದು ಪುಂಡರು ಪುಂಡಾಟಿಕೆ ಪ್ರದರ್ಶಿಸಿದ್ದಾರೆ