ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಸೆಕ್ಟರ್ ಮ್ಯಾಜಿಸ್ಟ್ರೇಟ್ ನೇಮಕ
ಬೆಳಗಾವಿ: ಬೆಳಗಾವಿ ನಗರದಲ್ಲಿ ನವೆಂಬರ್ 1 ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೇಂದ್ರ ಸರ್ಕಾರದ ವಿರುದ್ಧ ಹರತಾಳ ಮತ್ತು ಪ್ರತಿಭಟನಾ ರ್ಯಾಲಿ ನಡೆಸುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಬೆಳಗಾವಿ ನಗರಕ್ಕೆ ಐದು ಕಾರ್ಯನಿರ್ವಾಹಕ ದಂಡಾಧಿಕಾರಿ (ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್) ಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ದಂಢಾಧಿಕಾರಿಗಳಾದ ಜಿಯಾವುಲ್ಲಾ ಎಸ್ ಅವರು ಆದೇಶಿಸಿದ್ದಾರೆ.
ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಗಳ ಹಾಗೂ ಕಾರ್ಯನಿರ್ವಹಿಸುವ ಸ್ಥಳದ ವಿವರ:
ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ, ಜಂಟಿ ನಿರ್ದೇಶಕರಾದ ಮುನಿರಾಜು, ಮೊ.ನಂ 8904089006, ಕಾರ್ಯನಿರ್ವಹಿಸಬೇಕಾದ ವ್ಯಾಪ್ತಿ ಟಿಳಕವಾಡಿ ಮತ್ತು ಉದ್ಯಮಬಾಗ ಪೊಲೀಸ್ ಠಾಣೆ, ಪಶುಸಂಗೋಪನೆ ಉಪನಿರ್ದೇಶಕರಾದ ಚಂದ್ರಶೇಖರ, ಮೊ.ನಂ 9945674465, ಕಾರ್ಯನಿರ್ವಹಿಸಬೇಕಾದ ವ್ಯಾಪ್ತಿ ಮಾಳಮಾರುತಿ ಮತ್ತು ಎ.ಪಿ.ಎಂ.ಸಿ ಪೊಲೀಸ್ ಠಾಣೆ, ಅರಣ್ಯ ಇಲಾಖೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯ್ಕವಾಡಿ, ಮೊ.ನಂ 9916769618, ಕಾರ್ಯನಿರ್ವಹಿಸಬೇಕಾದ ವ್ಯಾಪ್ತಿ ಮಾರ್ಕೆಟ ಪೊಲೀಸ್ ಠಾಣೆ, ತೋಟಗಾರಿಕೆ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರಾದ ಪ್ರವೀಣ ಮಹೇಂದ್ರಕರ, ಮೊ ನಂ 9886400526, ಕಾರ್ಯನಿರ್ವಹಿಸಬೇಕಾದ ವ್ಯಾಪ್ತಿ ಖಡೇ ಬಜಾರ ಮತ್ತು ಕ್ಯಾಂಪ ಪೊಲೀಸ್ ಠಾಣೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಅಧಿಕಾರಿ ಗೋಪಾಲಕೃಷ್ಣಾ, ಮೊ.ನಂ. 9900145500, ಕಾರ್ಯನಿರ್ವಹಿಸಬೇಕಾದ ವ್ಯಾಪ್ತಿ ಶಾಹಾಪೂರ ಪೊಲೀಸ್ ಠಾಣೆ.
ಅಧಿಕಾರಿಗಳು ಸಂಬಂದಪಟ್ಟ ಪೊಲೀಸ್ ಠಾಣೆಗಳಿಗೆ ಅಕ್ಟೋಬರ್ 31 ರಂದು ಸಂಜೆ 4 ಗಂಟೆಗೆ ವರದಿ ಮಾಡಿಕೊಂಡು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಜಿಲ್ಲಾ ದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.