ಬೆಳಗಾವಿ- ನೆರೆಯ ಮಹಾರಾಷ್ತ್ರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಪ್ರಮಾಣ ಸೋಮವಾರ ಕಡಿಮೆಯಾಗಿದೆ ಹೀಗಾಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರ ಈಗ ಸದ್ಯಕ್ಕೆ ನಿರಾಳವಾಗಿದೆ
ಮಹಾರಾಷ್ತ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಸಹ ಕೃಷ್ಣಾ ನದಿಯ ನೀರಿನ ಮಟ್ಟ ಕಡಿಮೆಯಾಗಿಲ್ಲ.ವೇದಗಂಗಾ, ದೂದಗಂಗಾ ನದಿಗಳು ಈಗಲೂ ಊಕ್ಕಿ ಹರಿಯುತ್ತಿದ್ದು.ಯಾವುದೇ ರೀತಿಯ ಅಪಾಯ ಎದುರಾಗುವದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಠಪಡಿಸಿದೆ
ಬೆಳಗಾವಿ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಜನಜೀವನ ಅಸ್ಥವ್ಯಸ್ತವಾಗಿದ್ದು ಮಳೆಯ ಹೊಡೆತಕ್ಕೆ ಬೆಳಗಾವಿ ನಗರದ ಬಾಪಟ ಗಲ್ಲಿಯ ಮನೆಯೊಂದು ಕುಸಿದು ಬಿದ್ದಿದೆ.
ಜಿಲ್ಲೆಯ ಜಲಪ್ರಳಯದಿಂದಾಗಿ ಜಿಲ್ಲೆಯ ಸುಮಾರು ಐದು ಸಾವಿರ ಹೆಕ್ಟೆರ್ ಬೆಳೆ ಪ್ರದೇಶ ಜಲಾವೃತಗೊಂಡಿದ್ದು ಕಬ್ಬು,ಸೋಯಾಬಿನ್ ಸೇರಿದಂತೆ ಹಲವು ಬೆಳೆಗಳು ಜಲಸಮಾಧಿಯಾಗಿವೆ,
