ಬೆಳಗಾವಿ- ರಾಜ್ತೋತ್ಸವದ ದಿನ ಸುದ್ಧಿವಾಹಿನಿಗಳಿಗೆ ಬುದ್ಧಿವಾದ ಹೇಳಿದ ಪ್ರಸಂಗ ನಡೆಯಿತು
ಬೆಳಗಾವಿಯಲ್ಲಿ ಕರಾಳ ದಿನ ಆಚರಣೆ.
ಎಂಇಎಸ್ ವಿರುದ್ಧ ಕ್ರಮದ ಬದಲು ದೃಶ್ಯ ಮಾಧ್ಯಮದವರಿಗೆ ಬುದ್ಧಿವಾದ ಹೇಳಿದರು ಎಂಈಎಸ್ ನವರಿಗೆ ಮಹತ್ವ ಕೊಡಬೇಡಿ ಅವರಿಗೆ ಹೆಚ್ಚು ಪ್ರಚಾರ ಕೊಟ್ಟರೆ ಅವರು ಮತ್ತಷ್ಟು ಪ್ರಬಲರಾಗುತ್ತಾರೆ ರಾಜ್ಯೋತ್ಸವದ ಮೆರವಣಿಗೆಯಲ್ಲಿ ನಡೆದ ಸಣ್ಣ ಗಲಾಟೆ ಯನ್ನು ಸುದ್ಧಿ ವಾಹಿನಿಗಳು ವೈಭವೀಕರಿಸಿವೆ ಈ ರೀತಿ ತೋರಿಸುವದು ಸರಿಯಲ್ಲ ಮುದ್ರಣ ಮಾದ್ಯಮದವರು ಗಲಾಟೆ ಸುದ್ಧಿಯನ್ನು ವೈಭವಿಕರಿಸಿಲ್ಲ ಗಲಾಟೆ ಸುದ್ಧಿ ವೈಭವೀಕರಿಸಿ ಅದನ್ನೇ ತೋರಿಸಿದರೆ ಬೆಳಗಾವಿ ಅಭಿವೃದ್ಧಿಗೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ರಮೇಶ ಜಾರಕಿಹೊಳಿ ಸುದ್ಧಿವಾಹಿನಿಗಳಿಗೆ ಬುದ್ದಿವಾದ ಹೇಳಿದರು
ಸಣ್ಣ ಗಲಾಟೆಯ ಬಗ್ಗೆಯ ದೃಶ್ಯ ಮಾಧ್ಯಮದಲ್ಲಿ ವೈಭವಿಕರಿಸಲಾಗಿದೆ.
ಚೂರಿ ಇರಿತ, ಕಲ್ಲೂ ತೂರಾಟ ನಡೆದಿರೋದು ಡ್ಯಾನ್ಸ್ ಗಾಗಿ. ಅದನೇ ದೊಡ್ಡದಾಗಿ ಬಿಂಬಿಸಲಾಗಿದೆ. ಎಂಇಎಸ್ ಕರಾಳ ದಿನ ಆಚರಣೆ ಕುರಿತು
ಜಿಲ್ಲಾಧಿಕಾರಿ ಮೂಲಕ ವರದಿ ತರಿಸಲಾವುದು.
ಸೂಪರ್ ಸೀಡ್ ಮಾಡೋದು ಬೇಡ. ಸೂಪರ್ ಸೀಡ್ ಮಾಡಿದ್ರೆ ಎಂಇಎಸ್ ಸಂಖ್ಯೆ ಹೆಚ್ಚಾಗುತ್ತದೆ.
ಕರಾಳದಿನದಲ್ಲಿ ಪಾಲ್ಗೊಂಡ ಮೇಯರ್ ಮೇಲೆ ಕ್ರಮ ಕೈಗೊಳ್ಳಲಾಗುವುದು.
ಮೇಯರಗೆ ತಕ್ಕ ಪಾಠ ಕಲಿಸುತ್ತೇವೆ. ಆದರೆ ಇನ್ನಿತರ ಪಾಲಿಕೆ ಸದಸ್ಯರಿಗೆ ಅನ್ಯಾಯ ಆಗೋದು ಬೇಡ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಜಿಲ್ಲಾಧಿಕಾರಿ ಜಿಯಾವುಲ್ಲಾ ಮಾತನಾಡಿ ರಾಜ್ಯೋತ್ಸವದ ದಿನ ನಡೆದ ಕರಾಳ ದಿನಾಚರಣೆಯ ಬಗ್ಗೆ ಪೋಲೀಸ್ ಆಯುಕ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ವರದಿ ನೀಡುವಂತೆ ಲಿಖಿತವಾಗಿಯೂ ಸೂಚನೆ ಕೊಡುತ್ತೇನೆ ರಶಜ್ಯೋತ್ಸವದ ದಿನ ನಡೆದ ಕರಾಳ ದಿನಾಚರಣೆ ಯಲ್ಲಿ ಭಾಗವಹಿಸುವದು ತಪ್ಪು ಕರಾಳ ದಿನಕ್ಕೆ ಯಾವ ಯಾವ ಜನಪ್ರತಿನಿಧಿಳು ಹೋಗಿದ್ದರು ಅನ್ನೋದು ನನಗೆ ಸಂಪೂರ್ಣ ಮಾಹಿತಿ ಇಲ್ಲ ಪೋಲೀಸ್ ಆಯುಕ್ತರು ವರದಿ ಸಲ್ಲಿಸಿದ ಬಳಿಕ ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಡಿಸಿ ಜಿಯಾವುಲ್ಲಾ ಹೇಳಿದರು