ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಕ್ಕಟ್ಟು ಈಗ ಶಮನವಾಗಿದೆ ಸತೀಶ ಜಾರಕಿಹೊಳಿ ಅವರಿಗೆ aicc ಕಾರ್ಯದರ್ಶಿ ಹುದ್ದೆ ಕೊಟ್ಟಿರುವದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹತ್ತು ಸೀಟು ಗೆಲ್ಲುವ ಗುರಿ ಹೊಂದಲಾಗಿತ್ತು ಆದರೆ ನಾವು ಈಗ ಒಗ್ಗಟ್ಟಾಗಿರುವದರಿಂದ ಹದಿನಾಲ್ಕು ಸೀಟು ಗೆಲ್ಲೋದು ಗ್ಯಾರಂಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ
ಬೆಳಗಾವಿಯಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಸತೀಶ ಜಾರಕಿಹೊಳಿ ಅವರಿಗೆ aicc ಕಾರ್ಯದರ್ಶಿ ಸ್ಥಾನ ಕೊಟ್ಟರುವದರಿಂದ ನಮಗೆ ಸಂತಸವಾಗಿದೆ ನಾವೆಲ್ಲರೂ ಸೇರಿಕೊಂಡು ಪಕ್ಚವನ್ನು ಬಲಿಷ್ಠಗೊಳಿಸಿ ಬೆಳಗಾವಿ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ ಅನ್ನೋದನ್ನು ಸಾಭೀತು ಮಾಡಿ ತೋರಿಸುತ್ತೇವೆ ಎಂದು ರಮೇಶ ಜಾರಕಿಹೊಳಿ ಹೇಳಿದರು
ಬೆಳಗಾವಿಯಲ್ಲಿ ಕೆಲವು ಕಿಡಗೇಡಿಗಳು ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ನಾವೆಲ್ಲರು ಭಾರತೀಯರು ಅನದನೋದನ್ನು ಮನವರಿಕೆ ಮಾಡಿಕೊಳ್ಳಬೇಕು ಕಿಡಗೇಡಿಗಳ ಕೃತ್ಯಕ್ಕೆ ಮಹತ್ವ ಕೊಡಬಾರದು ಎಂದು ರಮೇಶ ಜಾರಕಿಹೊಳಿ ಹೇಳಿದರು
ಲಖನ್ ಜಾರಕಿಹೊಳಿ ಅವರು ಯಮನಮರ್ಡಿ ಯಿಂದ ಸ್ಪರ್ದೆ ಮಾಡುವ ಕುರಿತು ಮಾದ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ರಮೇಶ ಜಾರಕಿಹೊಳಿ ಜಾರಿಕೊಂಡರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ