Breaking News

ಬೆಳಗಾವಿಯಲ್ಲಿ ಐಟಿ ಪಾರ್ಕ,ಸದನದಲ್ಲಿ ಇಂದು ಖಾಸಗಿ ವಿದೇಯಕ ಮಂಡನೆ…

ಬೆಳಗಾವಿಯಲ್ಲಿ ಐಟಿ ಪಾರ್ಕ,ಸದನದಲ್ಲಿ ಇಂದು ಖಾಸಗಿ ನಿರ್ಣಯ…..

ಬೆಳಗಾವಿ-ಉತ್ತರ ಕರ್ನಾಟಕದಲ್ಲಿ ಲಕ್ಷಾಂತರ ಜನ ಸುಶಿಕ್ಷಿತ,ನಿರುದ್ಯೋಗಿಗಳಿದ್ದು,ಅವರಿಗೆ ಉದ್ಯೋಗ ಕಲ್ಪಿಸಲು ಬೆಳಗಾವಿಯಲ್ಲಿ ಬೃಹತ್ತ್ ಐಟಿ ಪಾರ್ಕ್ ನಿರ್ಮಿಸುವದು,ಯುವಕರಲ್ಲಿ ರಾಷ್ಟ್ರಾಭಿಮಾನ ಹೆಚ್ಚಿಸಲು,ಮಹಾಪುರುಷರ, ಸ್ಮಾರಕಗಳ ಪ್ರತಿರೂಪತೆಯ ಪಳುವಳಿಕಗಳನ್ನು ಒಂದೇ ಸ್ಥಳದಲ್ಲಿ ನಿರ್ಮಿಸುವಂತೆ . ಸರ್ಕಾರವನ್ನು ಒತ್ತಾಯಿಸಿ ಶಾಸಕ ಅಭಯ ಪಾಟೀಲ ಇಂದು ಸದನದಲ್ಲಿ ಎರಡು ಖಾಸಗಿ ನಿರ್ಣಯಗಳನ್ನು ಮಂಡಿಸಲಿದ್ದಾರೆ.

ಶಾಸಕ ಅಭಯ ಪಾಟೀಲ ಅವರು ಎರಡು ಖಾಸಗಿ ನಿರ್ಣಯಗಳನ್ನು ಮಂಡಿಸುವ ವಿಷಯ ಸದನದ ಕಾರ್ಯಕಲಾಪಗಳ ಅಜೇಂಡಾದಲ್ಲಿದ್ದು ಶಾಸಕ ಅಭಯ ಪಾಟೀಲರು ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಎರಡು ಮಹತ್ವದ ಖಾಸಗಿ ನಿರ್ಣಯಗಳನ್ನು ಮಂಡಿಸಿ ಸರ್ಕಾರದ ಗಮನ ಸೆಳೆಯಲಿದ್ದಾರೆ.

ಉತ್ತರ ಕರ್ನಾಟಕದ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಲು ಬೆಳಗಾವಿಯಲ್ಲಿ ದೊಡ್ಡ ಐಟಿ ಪಾರ್ಕ ನಿರ್ಮಿಸಬೇಕು ಎಂದು ಹಲವಾರು ಬಾರಿ ಸದನದಲ್ಲಿ ಒತ್ತಾಯ ಮಾಡುತ್ತಲೇ ಬಂದಿರುವ ಶಾಸಕ ಅಭಯ ಪಾಟೀಲ ಇಂದು ಈ ಕುರಿತು ಮತ್ತೆ ಖಾಸಗಿ ವಿದೇಯಕವನ್ನು ಮಂಡಿಸುತ್ತಿರುವದು ಅವರ ಅಭಿವೃದ್ಧಿ ಪರವಾದ ಕಾಳಜಿಯನ್ನು ತೋರಿಸುತ್ತದೆ.

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸರ್ವೆ ನಂ,1304ರಿಂದ 1349 ರವರೆಗೆ ಸುಮಾರು 745 ಎಕರೆ ಸರ್ಕಾರಿ ಜಮೀನು ಇದೆ ಇಲ್ಲಿ ಬೃಹತ್ತ್ ಐಟಿ ಪಾರ್ಕ ನಿರ್ಮಿಸುವಂತೆ ಸದನದಲ್ಲಿ ಶಾಸಕ ಅಭಯ ಪಾಟೀಲ, ಖಾಸಗಿ ವಿಧೇಯಕ ಮಂಡಿಸಲಿದ್ದಾರೆ‌.

ಜೊತೆಗೆ ಯುವಕರಲ್ಲಿ ದೇಶಾಭಿಮಾನವನ್ನು ವೃದ್ಧಿಸಲು,ಪ್ರವಾಸಿಗರನ್ನು ಆಕರ್ಷಿಸಲು ಬೆಳಗಾವಿ ಪಕ್ಕದ ಮಚ್ಛೆ ಗ್ರಾಮದಲ್ಲಿ 317 ಎಕರೆಯಷ್ಟು ಸರ್ಕಾರಿ ಜಮೀನು ಇದ್ದು ಇಲ್ಲಿ ರಾಷ್ಟ್ರದ ಮಹಾಪುರುಷರ,ಸ್ಮಾರಕಗಳ,ಅವರ ಕರ್ಮ ಭೂಮಿ ಜನ್ಮ ಸ್ಥಳ,ಅವರ ಜೀವನ ಚರಿತ್ರೆ ಬಿಂಬಿಸುವ ಪ್ರತಿರೂಪತೆಯ ಪಳುವಳಿಕೆಗಳನ್ನು (ರಿಪ್ಲಿಕಾ) ಗಳನ್ನು ಒಂದೇ ಸ್ಥಳದಲ್ಲಿ ನಿರ್ಮಿಸುವಂತೆ ಒತ್ತಾಯಿಸಿ ಶಾಸಕ ಅಭಯ ಪಾಟೀಲರು ಎರಡನೇಯ ಮಹತ್ವದ ಖಾಸಗಿ ವಿಧೇಯಕವನ್ನು ಮಂಡಿಸಲಿದ್ದಾರೆ.

ಬೆಳಗಾವಿ ಜಿಲ್ಲೆಯ ಅಭಿವೃದ್ಧಿ,ಮತ್ತು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಯ ಕುರಿತಂತೆ ಸದನದಲ್ಲಿ ಇಂದು ಎರಡು ಮಹತ್ವದ ಖಾಸಗಿ ವಿಧೇಯಕಗಳು ಮಂಡನೆಯಾಗುತ್ತಿರುವದು ಸಂತಸದ ಸಂಗತಿಯಾಗಿದೆ.

ಶಾಸಕ ಅಭಯ ಪಾಟೀಲರು ಬೆಳಗಾವಿ ದಕ್ಷಿಣ ಮತ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿ,ವಿವಿಧ ಸಂಸ್ಕೃತಿಕ,ಸಾಮಾಜಿಕ,ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ.

ಈಗ ಸಮಗ್ರ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಯ ದೂರದೃಷ್ಠಿ ಹೊಂದಿರುವ ಅವರು ಸದನದಲ್ಲಿ ಮಹತ್ವದ ಬೇಡಿಕೆಗಳ ಕುರಿತು ಎರಡು ಖಾಸಗಿ ವಿಧೇಯಕಗಳನ್ನು ಮಂಡಿಸುವ ಮೂಲಕ ಅಭಯ ಪಾಟೀಲ ಸದನದಲ್ಲಿ ಇಂದು ಬೆಳಗಾವಿ ಜಿಲ್ಲೆಯ ಧ್ವನಿಯಾಗಲಿದ್ದಾರೆ.

ಜನಪ್ರತಿನಿಧಿಗಳಿಗೆ ತಾವು ಪ್ರತಿನಿಧಿಸುವ ಕ್ಷೇತ್ರ,ಮತ್ತು ಜಿಲ್ಲೆಯ ಅಭಿವೃದ್ಧಿಪಡಿಸುವ ಕಾಳಜಿ ಮತ್ತು ಇಚ್ಛಾಶಕ್ತಿ ಇದ್ದರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಶಾಸಕ ಅಭಯ ಪಾಟೀಲ ಮಾಡೆಲ್ ಆಗಿದ್ದಾರೆ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *