ಬೆಳಗಾವಿ- ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಕ್ಷೇತ್ರದ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸಲು ಶಾಸಕ ಅಭಯ ಪಾಟೀಲ ವಿನೂತನ ವ್ಯೆವಸ್ಥೆ ಮಾಡಲು ನಿರ್ಧರಿಸಿದ್ದಾರೆ.ಖಾಸಗಿ ವೈದ್ಯರ ಸಹಾಯದಿಂದ. ಕ್ಷೇತ್ರದ ವಿವಿದೆಡೆ ಪ್ಹೋ ಕ್ಲಿನಿಕ್ ಗಳನ್ನು ತೆರದು ತಮ್ಮ ಸ್ವಂತ ಖರ್ಚಿನಲ್ಲಿಯೇ ಔಷದಿ ನೀಡಲು ನಿರ್ಧರಿಸಿದ್ದಾರೆ.
ಇಂದು ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಅದಕ್ಕೆ ಸ್ಪಂದಿಸಲು ಹಲೋ ಶಾಸಕರೇ ಎಂಬ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿರುವ ಶಾಸಕ ಅಭಯ ಪಾಟೀಲ ಕ್ಷೇತ್ರದ ಜನರ ಆರೋಗ್ಯಕ್ಕಾಗಿ ಪ್ಹೋ ಕ್ಲಿನಿಕ್ ತೆರೆದು ಜನರಿಗೆ ಅರ್ಥಪೂರ್ಣವಾದ ಸೇವೆ ಮಾಡಲು ನಿರ್ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕೊರೋನಾ ರೋಗದಿಂದ ಜಗತ್ತು ತತ್ತರಿಸಿದೆ, ಇಡೀ ವಿಶ್ವವೇ ಈ ಮಹಾಮಾರಿ ಕಾಯಿಲೆ ವಿರುದ್ಧ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಡೀ ಭಾರತ ಲೌಕ್ ಡೌನ್ ಮಾಡಿರುವುದರಿಂದ ಧೈನಂದಿನ ಬದುಕು ದುಸ್ತರವಾಗಿದೆ.
ಪ್ರಮುಖವಾಗಿ ಆರೋಗ್ಯ ಸಮಸ್ಯೆಗಳು, ಬಹಳಷ್ಟು ಖಾಸಗಿ ಆಸ್ಪತ್ರೆಗಳು ಕಳೆದ 15 ದಿನಗಳಿಂದ OPD ಸಂಪೂರ್ಣ ಬಂದಾಗಿವೆ. ಸಾಮಾನ್ಯ ಸಣ್ಣ ಸಣ್ಣ ಕಾಯಿಲೆಗಳಾದ ಕೆಮ್ಮು, ನೆಗಡಿ, ಮೈ ಕೈ ನೋವು, ಆದವರಿಗೆ ದವಾಖಾನೆಗೆ ಹೋಗಲು ತುಂಬಾ ಅನಾನುಕೂಲವಾಗುತ್ತಿದೆ.
ಈ ಗಂಭೀರ ಸಮಸ್ಯೆ ತತಕ್ಷಣ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಮಾನ್ಯ ಶಾಸಕರಾದ ಶ್ರೀ ಅಭಯ ಪಾಟೀಲ ರವರಿಂದ ಹೊಸ ಪ್ರಯೋಗ ನಡೆಸಲು ಚಿಂತನೆ ಮಾಡಲಾಗಿದೆ. ಪ್ಹೊ ಕ್ಲಿನಿಕ್ ” ಈ ಹೊಸ ಕಲ್ಪನೆಗೆ ಚಾಲನೆ ನೀಡಲಾಗುತ್ತಿದ್ದು, ಸಣ್ಣ ಪುಟ್ಟ ಆರೋಗ್ಯ ಸಂಬಂಧಿ ಔಷಧೀಯ, ಗುಳಿಗೆಗಳನ್ನು ನೀಡಿ, ಜನರ ತುರ್ತು ಚಿಕಿತ್ಸಾ ಕೇಂದ್ರಗಳ ಮಾದರಿಯಲ್ಲಿ “ಪ್ಹೊ ಕ್ಲಿನಿಕ್ ” ತರೆಯಲಾಗುತ್ತಿದೆ.
ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ 26 ವಾರ್ಡ್ ಗಳಲ್ಲಿ ಬರುವ ಸರಕಾರಿ ಶಾಲೆಗಳು ಹಾಗೂ ಮಂಗಲ ಕಾರ್ಯಾಲಯಗಳನ್ನು ಬಳಸಿಕೊಳ್ಳುವ ಚಿಂತನೆ ಮಾಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಆರೋಗ್ಯ ಅಧಿಕಾರಿಗಳು, ಖಾಸಗಿ ಡಾಕ್ಟರ್ ಗಳೊಂದಿಗೆ ಈಗಾಗಲೇ ಶಾಸಕರ ನೇತೃತ್ವದಲ್ಲಿ
ವಿಶೇಷ ಸಭೆ ನೆಡೆಸಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಮಾನ್ಯ ಶಾಸಕರಾದ ಶ್ರೀ ಅಭಯ ಪಾಟೀಲ ರವರ ಈ ಹೊಸ ಕಲ್ಪನೆ ತೀರಾ ಅವಶ್ಯಕ ಹಾಗೂ ಅನಿವಾರ್ಯ ವಾಗಿದ್ದು, ಇದರಿಂದ ಮದ್ಯಮ ವರ್ಗ, ಬಡವರಿಗೆ, ಸಾಮಾನ್ಯ ಕೂಲಿ ಕಾರ್ಮಿಕರಿಗೆ ತುಂಬಾ ಅನೂಕೂಲವಾಗುವದರಲ್ಲಿ ಸಂದೇಹವಿಲ್ಲ.
ಇಂದು ಸಂಜೆ ಹೊತ್ತಿಗೆ ಯಾವ ಯಾವ ಭಾಗಗಳಲ್ಲಿ, ಡಾಕ್ಟರ್ ಗಳ ನಿಗದಿ, ಸಮಯ, ಸ್ಥಳ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದೆಂದು, ಶಾಸಕರು ಮಾಹಿತಿ ನೀಡಿದರು.
ಒಟ್ಟಾರೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ” ಪ್ಹೊ ಕ್ಲಿನಿಕ್ ” ( ದವಾಖಾನೆಯಲ್ಲಿ) ಪ್ರಯೋಗ ಲಾಕ್ ಡೌನ್ ಸಂದರ್ಭದಲ್ಲಿ ದೇಶದಲ್ಲಿಯೇ ಪ್ರಥಮ ಎಂದರೆ ತಪ್ಪಾಗಲಾರದು…
ಮತ್ತೊಂದು ಮಹತ್ವದ ಸಂಗತಿ ಎಂದರೆ, ಡಾಕ್ಟರ್ ಗಳ ಸುರಕ್ಷಿತ ದೃಷ್ಟಿ ಯಿಂದ ಬೇಕಾದ PPE ಕಿಟ್ಟ್ ನ್ನು ಹಾಗೂ ರೋಗಿಗಳಿಗೆ ತಗಲುವ ಔಷಧೀಗಳನ್ನು ಮಾನ್ಯ ಶ್ರೀ ಅಭಯ ಪಾಟೀಲ ರವರು ತಮ್ಮ ಸ್ವಂತ ಖರ್ಚಿನಲ್ಲಿ ಕೊಡುವ ವ್ಯವಸ್ಥೆ ಮಾಡಿರುವುದು, ಇವರ ಜನಪರ ಕಾಳಜಿಗೆ ಸಾಕ್ಷಿಯಾಗಿ ಕಾಣುತ್ತಿದ್ದು, ಕ್ಷೇತ್ರದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..