Breaking News

ಬೆಳಗಾವಿಯಲ್ಲಿ ಎಂ.ಎಲ್.ಎ.ಮಾಡಿದ್ರು ಸೈಕಲ್ ಸವಾರಿ,ಕೆಲಸ ಮಾಡದ ಅಧಿಕಾರಿಗಳಿಗೆ ಹಾಕಿದ್ರು ಛೀಮಾರಿ….!!!

ಬೆಳಗಾವಿ-ಸೈಕಲ್ ಮೇಲೆ,ಎಂ.ಎಲ್.ಎ.ಸಂಚಾರ,ಕೇಳಿದ್ರು ಪಬ್ಲಿಕ್ ತಕರಾರ, ವ್ಹಾ ರೇ ವ್ಹಾ ಇದೆಂಥಾ ವಿಚಾರ,ಇದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ವಿಭಿನ್ನ,ವಿನೂತನ ಸಮಾಚಾರ.

ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನರ ಸೇವೆ ಮಾಡುತ್ತಾರೆ.ಆದ್ರೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಮಾಡುವ ಜನಸೇವೆ,ವಿಭಿನ್ನ ವಿನೂತನವಾಗಿರುತ್ತದೆ ಎನ್ನುವದಕ್ಕೆ,ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅವರು ನಡೆಸಿದ ಸೈಕಲ್ ರ್ಯಾಲಿಯೇ ಅದಕ್ಕೆ ಸಾಕ್ಷಿಯಾಗಿದೆ.

ಸರ್ಕಾರದ ಯಾವುದೇ ಯೋಜನೆ ಬರಲಿ,ಅದನ್ನು ಅತ್ಯಂತ ವ್ಯವಸ್ಥಿತವಾಗಿ ಮನೆ,ಮನೆಗೆ ಮುಟ್ಟಿಸುವ,ಯುವಕರ ತಂಡ ಅವರ ಬಳಿ ಇದೆ,ಈ ಯುವಕರ ತಂಡ ದೇಶಕ್ಕೆ ಮಾದರಿ,ಯಾಕಂದ್ರೆ ಪ್ರತಿ ಭಾನುವಾರ ಅಭಯ ಪಾಟೀಲರ ಯುವ ಪಡೆ,ತಪ್ಪದೇ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತ ಬಂದಿದೆ.ಈ ಅಭಿಯಾನ ದೇಶದಲ್ಲಿ ಮೌನವಾಗಿದ್ದರೂ,ಬೆಳಗಾವಿಯಲ್ಲಿ ಮಾತ್ರ ಪ್ರತಿ ಭಾನುವಾರ ನಿರಂತರವಾಗಿದೆ.

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಯಾವ ರೀತಿ ನಡೆಯುತ್ತಿವೆ,ಎಂದು ನೋಡಲು,ಶಾಸಕರು ಕಾರಿನಲ್ಲಿ ಸರ್ರನೇ…ಬಂದು ಭರ್ರನೇ ಹೋಗ್ತಾರೆ,ಆದ್ರೆ ಶಾಸಕ ಅಭಯ ಪಾಟೀಲ ಇಂದು ಬೆಳಿಗ್ಗೆ ಸುರ್ಯೋದಯದ ಬಳಿಕ ಸೈಕಲ್ ಏರಿ ಕ್ಷೇತ್ರದಲ್ಲಿ ಸುತ್ತಾಡಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಪರಶೀಲನೆ ಮಾಡಿದರು, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರ,ದೂರುಗಳನ್ನು ಆಲಿಸಿದರು.

ಸೈಕಲ್ ಸವಾರಿ ಮಾಡಿದ ಶಾಸಕರ ಎದುರು ನೂರಾರು ಸಮಸ್ಯೆಗಳು,ದೂರುಗಳು ಕೇಳಿ ಬಂದವು ಅದಕ್ಕೆ ಅಷ್ಟೇ ತ್ವರಿತವಾಗಿ ಸ್ಪಂದಿಸಿದ ಶಾಸಕ ಅಭಯ ಪಾಟೀಲ,ಎಲ್ಲರ ಗಮನ ಸೆಳೆದರು.

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅಭಯ ಪಾಟೀಲ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ,ಕಸ ಸಂಗ್ರಹದ ನಿರ್ವಹಣೆಯಲ್ಲಿ ಲೋಪಗಳಿದ್ದು ವಾರದಲ್ಲಿ ಅದನ್ನು ಸರಿಪಡಿಸಿಕೊಳ್ಳದಿದ್ದರೆ,ಕಸವನ್ನು ಅಧಿಕಾರಿಗಳ ಕಾರಿನಲ್ಲಿ ಸುರಿಯುವ ಜನಾಂದೋಲ ಶುರು ಮಾಡಬೇಕಾಗುತ್ತದೆ ಎಂದು ಶಾಸಕ ಅಭಯ ಪಾಟೀಲ ಎಚ್ಚರಿಕೆ ನೀಡಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *