ಬೆಳಗಾವಿ- ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿದ್ದು,ಇಲ್ಲಿಯ ಸಬ ರೆಜಿಸ್ಟರ್ ಕಚೇರಿಯ ಒತ್ತಡವನ್ನು ಕಡಿಮೆ ಮಾಡಲು,ಕಂದಾಯ ಇಲಾಖೆ ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ಇನ್ನೊಂದು ಸಬ್ ರೆಜಿಸ್ಟರ್ ಕಚೇರಿ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಬೆಳಗಾವಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಜಮೀನು,ಇನ್ನುಳಿದ ಆಸ್ತಿ ಖರೀದಿಸಲು ಜನ ಸರದಿಯಲ್ಲಿ ನಿಂತು ಖರೀದಿ ಮಾಡಿಸುವ ಪರಿಸ್ಥಿತಿ ಎದುರಾಗಿತ್ತು,ಇದನ್ನು ಸೂಕ್ಷ್ಮವಾಗಿ ಗಮನಿಸಿದ ಶಾಸಕ ಅಭಯ ಪಾಟೀಲ ಬೆಳಗಾವಿ ನಗರದಲ್ಲಿ ಇನ್ನೊಂದು ಸಬ್ ರೆಜಿಸ್ಟರ್ ಕಚೇರಿ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದರು
ಶಾಸಕ ಅಭಯ ಪಾಟೀಲರ ಮನವಿಗೆ ತ್ವರಿತವಾಗಿ ಸ್ಪಂದಿಸಿರುವ ಸರ್ಕಾರ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಇನ್ನೊಂದು ಸಬ್ ರೆಜಿಸ್ಟರ್ ಕಚೇರಿ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಕೊರೋನಾ ಸಂಕಟದ ಮದ್ಯೆಯೂ ಶಾಸಕ ಅಭಯ ಪಾಟೀಲ ಬೆಳಗಾವಿ ನಗರಕ್ಕೆ ಹೆಚ್ವುವರಿ ಸಬ್ ರೆಜಿಸ್ಟರ್ ಕಚೇರಿ ಮಂಜೂರು ಮಾಡುವ ಮೂಲಕ ಬೆಳಗಾವಿಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ.