Breaking News

ಒಳಚರಂಡಿ,ವಸತಿ ಸಮಸ್ಯೆ ನಿವಾರಣೆಗೆ ಅಭಯ ಪಾಟೀಲರಿಂದ ಸಚಿವ ಯುಟಿ ಖಾದರ್ ಗೆ ಮನವಿ

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಒಳಚರಂಡಿ ಹಾಗು ವಸತಿ ಸಮಸ್ಯೆ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಅಭಯ ಪಾಟೀಲ ನಗರಾಭಿವೃದ್ಧಿ ಹಾಗು ವಸತಿ ಸಚಿವ ಯುಟಿ ಖಾದರ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡರು

ವಿಧಾನ ಸಭೆಯಲ್ಲಿ ಸಚಿವ ಯುಟಿ ಖಾದರ್ ಅವರನ್ನು ಭೇಟಿಯಾದ ಶಾಸಕ ಅಭಯ ಪಾಟೀಲ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಒಳಚರಂಡಿ ಸಮಸ್ಯೆಯಿಂದ ಇಲ್ಲಿಯ ಜನ ಪರದಾಡುತ್ತಿದ್ದಾರೆ ದಕ್ಷಿಣ ಕ್ಷೇತ್ರದಲ್ಲಿ ಒಳಚರಂಡಿ ನಿರ್ಮಾಣ ಮಾಡಬೇಕು ಅದಕ್ಕಾಗಿ ಕೂಡಲೇ ಕ್ರಮ ಜರುಗಿಸಬೇಕು ಜೊತೆಗೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ನಗರದಲ್ಲಿ ತಾರತಮ್ಯ ಮಾಡದೇ ಎಲ್ಲರಿಗೂ ಸರಿಸಮನಾಗಿ ನೀರು ಹಂಚಿಕೆ ಮಾಡಲು ಕ್ರಮ ಜರುಗಿಸಬೇಕೆಂದು ಅಭಯ ಪಾಟೀಲ ಸಚಿವ ರಲ್ಲಿ ಮನವಿ ಮಾಡಿಕೊಂಡರು

ಬೆಳಗಾವಿ ನಗರದಲ್ಲಿ ಕೇವಲ ಹತ್ತು ವಾರ್ಡುಗಳಲ್ಲಿ 24*7 ನಿರಂತರ ನೀರು ಪೂರೈಕೆ ವ್ಯೆವಸ್ಥೆ ಇದೆ ಈ ಯೋಜನೆಯನ್ನು ಬೆಳಗಾವಿ ನಗರದ 58 ವಾರ್ಡುಗಳಲ್ಲಿ ವಿಸ್ತರಿಸಲು ಟೆಂಡರ್ ಕರೆಯಲಾಗಿತ್ತು ಆದರೆ ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಕೂಡಲೇ ಈ ಯೋಜನೆಗೆ ಮರು ಟೆಂಡರ್ ಕರೆದು ಈ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗಳಿಸಲು ಶಾಸಕ ಅಭಯ ಪಾಟೀಲ ಸಚಿವ ಯುಟಿ ಖಾದರ್ ಅವರಲ್ಲಿ ಮನವಿ ಮಾಡಿಕೊಂಡರು

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸಾವಿರಾರು ನೇಕಾರ ಕುಟುಂಬಗಳಿವೆ ಬಡ ನೇಕಾರ ಕುಟುಂಬಗಳಿಗೆ ವಿಶೇಷವಾದ ವಸತಿ ಸಮಚ್ಛಯ ನಿರ್ಮಿಸಿ ದಕ್ಷಿಣ ಮತಕ್ಷೇತ್ರದ ಬಡ ಕುಟುಂಬಗಳಿಗೆ ಹೆಚ್ಚುವರಿ ಆಶ್ರಯ ಮನೆಗಳನ್ನು ಮಂಜೂರು ಮಾಡಬೇಕೆಂದು ಅಭಯ ಪಾಟೀಲ ಮನವಿ ಸಲ್ಲಿಸಿದರು

ಬೆಳಗಾವಿ ನಗರದಲ್ಲಿ ಸ್ವಚ್ಛತಾ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿರುವ ಬೆಳಗಾವಿ ನಗರದಲ್ಲಿ ಕಂಡು ಕಂಡಲ್ಲಿ ಗಲೀಜು ಕಾಣಿಸುತ್ತಿದೆ ಎಂದು ಶಾಸಕ ಅಭಯ ಪಾಟೀಲ ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ಅವರಿಗೆ ದೂರು ನೀಡಿದರು

ಶಾಸಕ ಅಭಯ ಪಾಟೀಲರ ಮನವಿ ಮತ್ತು ಅಹವಾಲುಗಳನ್ನು ಸದವಿಕರಿಸಿ ಮಾತನಾಡಿದ ಯುಟಿ ಖಾದರ್ ಮುಂದಿನ ವಾರ ಬೆಳಗಾವಿಗೆ ಭೇಟಿ ಕೊಡುತ್ತೇನೆ ಮಹಾನಗರ ಪಾಲಿಕೆಯ ಸ್ವಚ್ಛತಾ ಕಾಮಗಾರಿಗಳು ಸೇರಿದಂತೆ ಪಾಲಿಕೆಯ ಪ್ರಗತಿ ಪರಶೀಲನೆ ಮಾಡುವದರ ಮೂಲಕ ನಗರದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವದಾಗಿ ಯುಟಿ ಖಾದರ್ ಭರವಸೆ ನೀಡಿದ್ದಾರೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *