Breaking News

ಅನುದಾನ ವಿಳಂಬ ಬೆಳಗಾವಿಯಲ್ಲೂ ಅಸಮಾಧಾನ ಸ್ಫೋಟ…!!

ಬೆಳಗಾವಿ-ರಾಜ್ಯದ ಹತ್ತು ಮಹಾನಗರ ಪಾಲಿಕೆಗಳಿಗೆ ಬಿಡುಗಡೆಯಾಗಿದ್ದ ತಲಾ 125 ಕೋಟಿ ರೂ ಅನುದಾನ ಸಿಎಂ ವಾಪಸ್ ಪಡೆದಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀgಲ ಉತ್ನಾಳ ಆರೋಪಿಸಿದ ಬೆನ್ನಲ್ಲಿಯೇ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಅಸಮಾಧಾನ ಹೊರ ಹಾಕಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಪ್ರಶ್ನೆಗೆ ಉತ್ತರಿಸಿದ ಅವರು ಬೆಳಗಾವಿ ನಗರ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ರಾಜ್ಯದ ಎರಡನೇಯ ರಾಜಧಾನಿ ಅಂತಾರೇ ಆದರೆ ಪ್ರತಿವರ್ಷ ಕೊಡುತ್ತಿದ್ದ ನೂರು ಕೋಟಿ ರೂ ಅನುದಾನ ಈ ವರ್ಷ ಕೊಡದೇ ಇರುವದರಿಂದ ಅನೇಕ ಸಮಸ್ಯೆಗಳು ಎದುರಾಗಿವೆ. .ಈ ಬಗ್ಗೆ ಹಲವಾರು ಬಾರಿ ಮುಖ್ಯಮಂತ್ರಿಳನ್ನು ಭೇಟಿಯಾಗಿ ಮನವಿ ಮಾಡಿಕೊಂಡರೂ, ಬೆಳಗಾವಿಗೆ ಬರಬೇಕಾಗಿದ್ದ ಅನುದಾನ ಬಂದಿಲ್ಲ ಎಂದು ಶಾಸಕ ಅಭಯ ಪಾಟೀಲ ಬೇಸರ ವ್ಯೆಕ್ತಪಡಿಸಿದ್ದಾರೆ‌.

ಮಹಾನಗರ ಪಾಲಿಕೆಗೆ ಅನುದಾನ ಬಿಡುಗಡೆ ಮಾಡುವ ವಿಷಯದಲ್ಲಿ,ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು,ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು,ಆಟವಾಡುತ್ತಿದ್ದು,ಆಡಳಿತ ವ್ಯೆವಸ್ಥೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ಅಧಿಕಾರಿಗಳ ಹಠಮಾರಿ ಧೋರಣೆಯಿಂದ ಈ ವರ್ಷದ ಅನುದಾನ ಬಂದಿಲ್ಲ,ಎಂದು ಶಾಸಕ ಅಭಯ ಪಾಟೀಲ ಅಸಮಾಧಾನ ವ್ಯೆಕ್ತ ಪಡಿಸಿದ್ದಾರೆ.

ಕಳೆದ ವರ್ಷದಿಂದ ಬೆಳಗಾವಿ ಮಹಾನಗರದ ರಸ್ತೆ ಕಾಮಗಾರಿಗಳು ಕುಂಠಿತಗೊಂಡಿವೆ,ನಗರದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಕೂಡಲೇ ನಗರದ ಸಂಪರ್ಕ ರಸ್ತೆಗಳನ್ನು,ಮತ್ತು ಬಡಾವಣೆಗಳ ಒಳ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕಾಗಿದೆ,ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡದಿದ್ದರೆ,ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪಚುನಾವಣೆಯಲ್ಲಿ ಜನರಿಗೆ ಉತ್ತರ ಕೊಡೋದು ಕಷ್ಟವಾಗುತ್ತದೆ,ಬೆಳಗಾವಿಯಲ್ಲಿ ರಸ್ತೆ ಕಾಮಗಾರಿಗಳು ನಡೆಯದಿದ್ದರೆ ಜನ ರೊಚ್ಚಿಗೇಳುತ್ತಾರೆ,ಇದರ ಪರಿಣಾಮ ಲೋಕಸಭಾ ಚುನಾವಣೆಯ ಮೇಲೂ ಬಿಳುತ್ತದೆ ಎಂದು ಶಾಸಕ ಅಭಯ ಪಾಟೀಲ ಕಳವಳ ವ್ಯೆಕ್ತಪಡಿಸಿದ್ದಾರೆ.

ಬೆಳಗಾವಿ ಮಹಾನಗರದ ಅಭಿವೃದ್ಧಿಗೆ ಸರ್ಕಾರ ಪ್ರತಿವರ್ಷ ಕೊಡುವ ನೂರು ಕೋಟಿ ರೂ ಅನುದಾನ ಕೂಡಲೇ ಬಿಡುಗಡೆ ಮಾಡಿ ಬೆಳಗಾವಿ ಮಹಾನಗರದ ಜನತೆಯ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕ ಅಭಯ ಪಾಟೀಲ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *