ಬೆಳಗಾವಿ- ಸುರ್ಯೋದಯವಾಗುತ್ತಿದ್ದಂತೆಯೇ ಅವರು ಮನೆ ಬಿಟ್ಟು ಹೊರಗೆ ಬರ್ತಾರೆ,ಬೆಳಗಾವಿ ನಗರವನ್ನು ಸುಂದರಗೊಳಿಸಲು ಹೊಸ,ಹೊಸ ಆಲೋಚನೆಗಳನ್ನು ಮಾಡಿ,ಎಲ್ಲರಿಗೂ ಮಾದರಿಯಾಗುವಂತಹ ಯೋಜನೆಗಳನ್ನು ರೂಪಿಸುತ್ತಾರೆ,ಈಗ ಸದ್ಯೆ ಬೆಳಗಾವಿ ಮಹಾನಗರದ ವಿಕಾಸ ಎಕ್ಸ್‌ಪ್ರೆಸ್ ಗಾಡಿ ಓಡುತ್ತಿದೆ,ಅದಕ್ಕೆ ಎರಡು ಸ್ಟೇರಿಂಗ್ ಇದೆ,ಒಂದು ಸ್ಟೇರಿಂಗ್ ಶಾಸಕ ಅಭಯ ಪಾಟೀಲ ಅವರ ಕೈಯಲ್ಲಿದೆ,ಇನ್ನೊಂದು ಶಾಸಕ ಅನೀಲ ಬೆನಕೆ ಅವರ ಕೈಯಲ್ಲಿದೆ.
ಇಂದು ಬೆಳ್ಳಂ ಬೆಳಿಗ್ಗೆ ಶಾಸಕ ಅಭಯ ಪಾಟೀಲ ಬೆಳಗಾವಿ ಮಹಾನಗರದ ಛತ್ರಪತಿ ಶಿವಾಜಿ ಗಾರ್ಡನ್ ಗೆ ಭೇಟಿ ನೀಡಿದ್ರು,ಅಲ್ಲಿ ಅಳವಡಿಸಲಾಗಿರುವ ಮಕ್ಕಳ ಆಟಿಕೆಗಳನ್ನು ಪರಶೀಲಿಸಿದ ಬಳಿಕ ,ಇದೇ ಗಾರ್ಡನ್ ನಲ್ಲಿ ಮಕ್ಕಳ ರಂಜನೆಗಾಗಿ ಇನ್ ಲ್ಯಾಂಡ್ ವಾಟರ್ ಬೋಟಿಂಗ್ ಮಾಡಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗರ ಸೂಚನೆ ನೀಡಿದ್ರು.
ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಛತ್ರಪತಿ ಶಿವಾಜಿ ಗಾರ್ಡನ್ ಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ನೂರಾರು ಜನ ವಾಯು ವಿಹಾರಕ್ಕಾಗಿ ಬರ್ತಾರೆ,ಅವರಿಗೆ ಯೋಗ ಮತ್ತು ಧ್ಯಾನ ಮಾಡಲು ಧ್ಯಾನ ಮಂದಿರ ನಿರ್ಮಿಸಲು ಯೋಜನೆ ರೂಪಿಸುವಂತೆ ಶಾಸಕ ಅಭಯ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಳಗಾವಿ ಮಹಾನಗರವನ್ನು ಅತೀ ಸುಂದರಗೊಳಿಸಲು,ಈ ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ಹೊಸ ಹೊಸ ಯೋಜೆಗಳನ್ನು ಕೈಗೆತ್ತಿಕೊಂಡು ಬೆಳಗಾವಿ ಮಹಾನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಚನ್ನಮ್ಮ ವೃತ್ತದ ಅಭಿವೃದ್ಧಿಗೆ ಯೋಜನೆ
ಶಾಸಕ ಅನೀಲ ಬೆನಕೆ ಅವರು ಬೆಳಗಾವಿ ಮಹಾನಗರದ ಹೆಮ್ಮೆಯ ವೃತ್ತ ಚನ್ನಮ್ಮನ ವೃತ್ತದ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ.
ಈ ವೃತ್ತದ ಇಕ್ಕೆಲುಗಳಲ್ಲಿ ಕೋಟೆ ಮಾದರಿಯ ಕಂಪೌಂಡ್ ನಿರ್ಮಿಸಿ, ಈ ವೃತ್ತಕ್ಕೆ ರಾಣಿ ಚನ್ನಮ್ಮಾಜಿಯ ಕೋಟೆಯ ಲುಕ್ ನೀಡಲು ಶಾಸಕ ಅನೀಲ ಬೆನಕೆ ಸದ್ದಿಲ್ಲದೇ ಯೋಜನೆ ರೂಪಿಸುತ್ತಿರುವದು,ಹೆಮ್ಮೆಯ ಸಂಗತಿಯಾಗಿದೆ.