ಬೆಳಗಾವಿ- ಶಾಸಕ ಅಭಯ ಪಾಟೀಲ ಅವರು ಕಳೆದ ಬಾರಿಯ ಅಧಿವೇಶನದಲ್ಲಿ, ಬೆಳಗಾವಿಯಲ್ಲಿ ಹೈಟೆಕ್ ಐಟಿ ಪಾರ್ಕ್ ನಿರ್ಮಾಣ, ಮತ್ತು, ಐತಿಹಾಸಿಕ ಸ್ಮಾರಕಗಳ ( ರಿಪ್ಲಿಕಾ) ನಿರ್ಮಾಣ ಮಾಡುವಂತೆ ಸರ್ಕಾರದ ಗಮನ ಸೆಳೆಯಲು ಎರಡು ಖಾಸಗಿ ನಿರ್ಣಯಗಳನ್ನು ಮಂಡಿಸಿದ್ದು ಈ ಎರಡು ಖಾಸಗಿ ನಿರ್ಣಯಗಳು ನಾಳೆ ಗುರುವಾರ ಸದನದಲ್ಲಿ ಚರ್ಚೆಗೆ ಬರಲಿವೆ.
ಶಾಸಕ ಅಭಯ ಪಾಟೀಲ ಅವರು ಕಳೆದ ಅಧಿವೇಶನದಲ್ಲಿ ಮಂಡಿಸಿರುವ ಎರಡು ಖಾಸಗಿ ನಿರ್ಣಯಗಳು,ನಾಳೆ ಗುರುವಾರ ಸದನದಲ್ಲಿ ಚರ್ಚೆಗೆ ಬರುವ ಮೂಲಕ ಸರ್ಕಾರದ ಗಮನ ಸೆಳೆಯಲಿವೆ.
ಬೆಳಗಾವಿ ಅಭಿವೃದ್ಧಿಗೆ ಸಮಂಧಿಸಿದಂತೆ,ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರು ಮಂಡಿಸಿರುವ ಎರಡು ಖಾಸಗಿ ನಿರ್ಣಯಗಳಲ್ಲಿ ಏನಿದೆ ? ಈ ಕೆಳಗಿನ ಸಾರಾಂಶ ನೋಡಿ.
***********””
ಖಾಸಗಿ ಸದಸ್ಯರ ಕಾರ್ಯಕಲಾಪಗಳು
ನಿರ್ಣಯಗಳು
ಶ್ರೀ ಅಭಯ ಪಾಟೀಲ ಅವರು ದಿನಾಂಕ: 19.03.2020 ರಂದು ಮಂಡಿಸಿರುವ ಈ ಕೆಳಕಂಡ
ನಿರ್ಣಯಗಳ ಬಗ್ಗೆ ಚರ್ಚೆ:
1) “ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಪರಿಸರದಲ್ಲಿ ಹಲವಾರು ಶೈಕ್ಷಣಿಕ
ವಿದ್ಯಾಸಂಸ್ಥೆಗಳಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದು,
ಉದ್ಯೋಗವನ್ನು ಅರಸಿ ಬೇರೆ, ಬೇರೆ ದೇಶಕ್ಕೆ ಹಾಗೂ ದೇಶದ ವಿವಿಧ ರಾಜ್ಯಗಳಿಗೆ ವಲಸೆ
ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಹಾಗೂ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ವಿವಿಧ
ತಾಂತ್ರಿಕ ಹಾಗೂ ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್, ಜವಳಿ & ಕೈಗಾರಿಕಾ ಕ್ಷೇತ್ರಗಳನ್ನು ಅಭಿವೃದ್ಧಿ
ಪಡಿಸಲು ವಿವಿಧ ಬಗೆಯ ವೈಜ್ಞಾನಿಕ ಹಾಗೂ ಆಧುನಿಕ ತಾಂತ್ರಿಕತೆಯನ್ನು ಹೊಂದಿರುವ
ದೇಶದಲ್ಲಿಯೇ ಮಾದರಿಯಾಗುವ ರೀತಿಯಲ್ಲಿ ಐ.ಟಿ. ಪಾರ್ಕ್ ಸ್ಥಾಪಿಸುವುದು ಅವಶ್ಯಕವಾಗಿದೆ.
ಕಾರಣ ಬೆಂಗಳೂರು-ಮಣೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ:4ಕ್ಕೆ ಹೊಂದಿಕೊಂಡಿರುವ ಬೆಳಗಾವಿ
ಗ್ರಾಮದ ಸರ್ವೆ ನಂ.1304 ರಿಂದ 1349 ರಲ್ಲಿರುವ ಒಟ್ಟು 745 ಎಕರೆಯಷ್ಟು ರಾಜ್ಯ ಸರ್ಕಾರಕ್ಕೆ
ಸೇರಿರುವ, ಈ ಜಮೀನಿನಲ್ಲಿ ಮಾದರಿ ಬಹು ತಾಂತ್ರಿಕ ಐ.ಟಿ. ಪಾರ್ಕ್‌ನ್ನು ಸ್ಥಾಪಿಸಲು ರಾಜ್ಯ
ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಈ ಸದನವು ಒತ್ತಾಯಿಸುತ್ತದೆ.”
2) “ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಗಣ್ಯ ವ್ಯಕ್ತಿಗಳ ಹಾಗೂ ಅವರ
ಐತಿಹಾಸಿಕ ಸ್ಮಾರಕಗಳನ್ನು ನಿರ್ಮಿಸುವ ಮುಖಾಂತರ ಇಂದಿನ ಯುವ ಪೀಳಿಗೆಗೆ ಅದನ್ನು
ಪರಿಚಯಿಸುವುದು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ಅತ್ಯಂತ
ಅವಶ್ಯಕವಾಗಿದ್ದು, ಇದರಿಂದ ಮುಂಬರುವ ಹಾಗೂ ಇತ್ತೀಚಿನ ಪೀಳಿಗೆಗೆ ದೇಶಾಭಿಮಾನ
ಹಾಗೂ ದೇಶದ ಸಂಸ್ಕೃತಿ, ಸಂಸ್ಕಾರ, ಗೌರವ ಹೆಚ್ಚಿಸಬಹುದಾಗಿದೆ. ಆದ್ದರಿಂದ ವೀರ
ಯೋಧರುಗಳು, ಸಾಹಿತಿಗಳು, ವಿಜ್ಞಾನಿಗಳು, ಕವಿಗಳು, ಸ್ವತಂತ್ರ ಭಾರತಕ್ಕೆ ಹೋರಾಟ
ಮಾಡಿರುವ ಕರ್ಮಭೂಮಿ, ಜೀವನ ಶೈಲಿ, ಶೈಕ್ಷಣಿಕ ಕ್ಷಣಗಳು, ದೇಶಕ್ಕಾಗಿ ಹೋರಾಟ ಮಾಡಿ
ಪ್ರಾಣ ತೆತ್ತಿರುವ ಅವಿಸ್ಮರಣೀಯ ಕ್ಷಣಗಳು ಮುಂತಾದ ವಿವಿಧ ಬಗೆಯ ಸ್ಮಾರಕಗಳ
ಪ್ರತಿರೂಪಗಳ ಪಳುವಳಿಕೆಗಳನ್ನು ಒಂದೇ ಪರಿಸರದಲ್ಲಿ ಸ್ಥಾಪಿಸುವುದರಿಂದ ಇಂದಿನ
ಯುವಕರಲ್ಲಿ ದೇಶಾಭಿಮಾನವನ್ನು ಹೆಚ್ಚಿಸುವುದರ ಜೊತೆಗೆ ರಾಜ್ಯದ ಗಡಿ ಭಾಗ ಹಾಗೂ ಉತ್ತರ
ಕರ್ನಾಟಕದ ಕೇಂದ್ರ ಬಿಂದುವಾಗಿರುವ ಬೆಳಗಾವಿಯನ್ನು ಮಾದರಿ ಪ್ರವಾಸೋದ್ಯಮ
ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬಹುದಾಗಿದೆ. ಕಾರಣ ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದ
ಸರ್ವೆ ನಂ.559, 560, 561, ಹಾಗೂ 593 ರಲ್ಲಿರುವ ಸುಮಾರು 317 ಎಕರೆಯಷ್ಟು ಸರ್ಕಾರಿ
ಜಮೀನಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಯುಕ್ತ ಅನುದಾನದಲ್ಲಿ ಐತಿಹಾಸಿಕ
ಸ್ಮಾರಕಗಳ ಮಾದರಿಗಳನ್ನು (ರಿಪ್ಲಿಕಾಗಳನ್ನು ನಿರ್ಮಿಸಬೇಕೆಂದು ಈ ಸದನವು ಒತ್ತಾಯಿಸುತ್ತದೆ.”