ಬೆಳಗಾವಿ- ಬೆಳಗಾವಿ ಮಹಾನಗರ ಅದೆಷ್ಟು ಹೈಟೆಕ್ ಆಗುತ್ತಿದೆ ಅನ್ನೋದಕ್ಕೆ ಈ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೇ ಅದಕ್ಕೆ ಸಾಕ್ಷ್ಯ.
ಬೆಳಗಾವಿಯಲ್ಲಿ,ಹೈಟೆಕ್ ಡಿಜಿಟಲ್ ಲೈಬ್ರರಿ,ಬುದ್ದಿಮಾಂದ್ಯ,ವಿಕಲ ಚೇತನ ಮಕ್ಕಳ ಮನರಂಜನೆಗೆ ವಿಶೇಷ ಪಾರ್ಕ್, ತಿನಿಸು ಕಟ್ಟೆ,(ಖಾವು ಕಟ್ಟಾ) ನಿರ್ಮಾಣ,ಜೊತೆಗೆ ವ್ಯಾಕ್ಸೀನ್ ಡಿಪೋದಲ್ಲಿ ಎವಿಯೇಶನ್ ಸೆಂಟರ್ ಮತ್ತು ನಾಥ ಪೈ ಸರ್ಕಲ್ ಬಳಿಯ ರಸ್ತೆಯ ಡಿವೈಡರ್ ಜಾಗದಲ್ಲಿ ಬೀದಿ ವ್ಯಾಪಾರಿಗಳಿಗೆ ವಿಶೇಷ ಮಳಿಗೆ ನಿರ್ಮಿಸುವದು ಸೇರಿದಂತೆ ಹತ್ತು ಹಲವು ವಿಶೇಷ ಸವಲತ್ತುಗಳನ್ನು ಬೆಳಗಾವಿ ಜನಗರದ ಜನತೆಗೆ ಕೊಟ್ಟಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಈಗ ಸ್ವಚ್ಛತೆಯ ವಿಚಾರದಲ್ಲೂ ಹೈಟೆಕ್ ವ್ಯೆವಸ್ಥೆ ಅನುಸರಿಸಲು ಮುಂದಾಗಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಹಾಪೂರ ಪ್ರದೇಶದಲ್ಲಿ ಕೆಲವಡೆ ಅಂಡರ್ ಗ್ರೌಂಡ್ ಹೈಡ್ರೋಲೀಕ್ ಡಸ್ಟಬೀನ್ ಗಳನ್ನು ಅಳವಡಿಸುವ ವಿಶೇಷ ಯೋಜನೆ ರೂಪಿಸಿದ್ದಾರೆ.ಈ ಯೋಜನೆ ಬಹುಶ ದೇಶದ ಯಾವ ಪ್ರದೇಶದಲ್ಲಿ ಇಲ್ಲ, ಈ ಯೋಜನೆ ಬೆಳಗಾವಿ ಮಹಾನಗರದಲ್ಲಿ ಅನುಷ್ಠಾನಕ್ಕೆ ಬರುತ್ತಿರುವದು ದೇಶದಲ್ಲೇ ಮೊದಲು.
ಈ ಅಂಡರ್ ಗ್ರೌಂಡ್ ಹೈಡ್ರೋಲೀಕ್ ಡಸ್ಟಬೀನ್ ಗಳ ವಿಶೇಷತೆ ಏನೆಂದರೆ,ಇದರಲ್ಲಿ ಶೇ 50 ರಷ್ಟು ಕಸ ತುಂಬಿದ್ರೆ ನೇರವಾಗಿ ಕಸ ವಿಲೇವಾರಿ ಮಾಡುವ ಕಾರ್ಮಿಕರಿಗೆ ಮೆಸ್ಸೇಜ್ ಹೋಗುತ್ತದೆ. ಶೇ 70 ರಿಂದ 80 ರಷ್ಟು ಕಸ ತುಂಬಿದರೂ ಕಸ ವಿಲೇವಾರಿ ಆಗದಿದ್ದರೆ ಹಿರಿಯ ಅಧಿಕಾರಿಗಳಿಗೆ ಶಾಸಕರಿಗೆ ಮೆಸ್ಸೇಜ್ ಹೋಗುವ ವ್ಯೆವಸ್ಥೆ ಈ ಹೈಡ್ರೋಲೀಕ್ ಡಸ್ಟಬೀನ್ ನಲ್ಲಿ ಇದೆ.
ಬೆಳಗಾವಿ ಮಹಾನಗರದಲ್ಲಿ ಕಸ ವಿಲೇವಾರಿಯ ಸಮಸ್ಯೆ ಹೆಚ್ಚಾಗುತ್ತಿದೆ. ಬೆಳಗಾವಿ ಮಹಾನಗರದಲ್ಲಿ ಈ ವ್ಯೆವಸ್ಥೆ ಜಾರಿಗೆ ಬಂದ್ರೆ,ಎಲ್ಲಿ ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲ ಅನ್ನೋದನ್ನು ಗುರುತಿಸಿ,ಕಸ ವಿಲೇವಾರಿ ಮಾಡುವ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಲು ಈ ವ್ಯೆವಸ್ಥೆ ಅನಕೂಲ ಅಗಲಿದೆ.ಎಂದು ಶಾಸಕ ಅಭಯ ಪಾಟೀಲರು ಈ ಯೋಜನೆ ಕುರಿತು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪಲೋಡ್ ಮಾಡಿದ್ದಾರೆ.