ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶಾಸಕ ಅಭಯ ಪಾಟೀಲರು,ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ, ಸ್ವಚ್ಛತಾ ಕಾಮಗಾರಿ,ನೀರು ಸರಬರಾಜು,ಮತ್ತು ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಶೀಲನೆ ಮಾಡಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತರು,ಅಧಿಕಾರಿಗಳು,ಮತ್ತು ನಗರ ಸೇವಕರು ಭಾಗವಹಿಸಿದ್ದರು. ಸಭೆಯ ಆರಂಭದಲ್ಲಿ ಶಾಸಕ ಅಭಯ ಪಾಟೀಲ,ನಗರದಲ್ಲಿ ನೀರು ಸರಬರಾಜು ಮಾಡುವ ಗುತ್ತಿಗೆ ಪಡೆದಿರುವ L&T ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನಗರದಲ್ಲಿ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಸೂಚಿಸಿದರು.
ಬೆಳಗಾವಿ ಮಹಾನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.ಇದರಿಂದ ಬೆಳಗಾವಿಯ ನಿವಾಸಿಗಳು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು ಮನೆಯಿಂದ ಹೊರಗೆ ಬಂದು ಆಟವಾಡುವದೂ ನಿಂತು ಹೋಗಿದೆ. ಬೀದಿ ನಾಯಿಗಳನ್ನು ಸ್ಥಳಾಂತರ ಮಾಡುವಂತೆ ಹತ್ತು ಹಲವಾರು ಬಾರಿ ಸೂಚನೆ ನೀಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸಭೆಯಲ್ಲಿ ಶಾಸಕ ಅಭಯ ಪಾಟೀಲ ಆಕ್ರೋಶ ವ್ಯೆಕ್ತ ಪಡಿಸಿದರು.
ಜುಲೈ ಹದಿನಾಲ್ಕರ ಒಳಗಾಗಿ ಬೆಳಗಾವಿ ಮಹಾನಗರದಲ್ಲಿರುವ ಎಲ್ಲ ಬೀದಿ ನಾಯಿಗಳನ್ನು ಹಿಡಿದು, ದೂರದ ಪ್ರದೇಶಕ್ಕೆ ಬಿಡಬೇಕು.ಈ ನಾಯಿಗಳು ಮರಳಿ ನಗರಕ್ಕೆ ಬಾರದಂತೆ ದೂರದ ಪ್ರದೇಶಗಳಿಗೆ ಬಿಡಬೇಕು.ಈ ಕಾರ್ಯದಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಜುಲೈ ಹದಿನೈದರಂದು ಈ ಬೀದಿ ನಾಯಿಗಳನ್ನು ಪಾಲಿಕೆ ಆವರಣದಲ್ಲಿ ತಂದು ಬಿಡಬೇಕಾಗುತ್ತದೆ.ಎಂದು ಶಾಸಕ ಅಭಯ ಪಾಟೀಲ ಪಾಲಿಕೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ರು…