ಬೆಳಗಾವಿ- ಉತ್ತರ ಕರ್ನಾಟಕದ ಅಭಿವೃದ್ಧಿ ಗಾಗಿ ಪತ್ಯೇಕ ಬಜೆಟ್ ಮಂಡಿಸುವಂತೆ ಒತ್ತಾಯಿಸಲು ಉತ್ತರ ಕರ್ನಾಟಕದ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಧ್ವನಿಗೂಡಿಸುವಂತೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಉತ್ತರ ಕರ್ನಾಟಕದ 95 ಶಾಸಕರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ
ಉತ್ತರ ಕರ್ನಾಟಕದ ಎಲ್ಲ ಪಕ್ಷಗಳ 95 ಜನ ಶಾಸಕರಿಗೆ ಪತ್ರ ಬರೆದು ಬೆಳಗಾವಿಯ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿಯಾಗಬೇಕು ಸರ್ಕಾರ ಪ್ತತ್ಯೇಕ ಬಜೆಟ್ ಮಂಡಿಸಿದರೆ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದು ಪತ್ರದಲ್ಲಿ ನಮೂದಿಸಲಾಗಿದೆ
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಬೇಕು ಎನ್ನುವದು ಈ ಭಾಗದ ಜನ ನಿರೀಕ್ಷೆ ಮಾಡುತ್ತಾರೆ ಆದರೆ ಪ್ರತಿ ವರ್ಷ ಈ ಭಾಗದ ಜನರ ನೀರೀಕ್ಷೆಗೆ ತಕ್ಕಂತೆ ಅಧಿವೇಶನದಲ್ಲಿ ಚರ್ಚೆ ನಡೆಯುವದಿಲ್ಲ ಯಾವುದೇ ನಿರ್ಧಾರ ಹೊರಬೀಳುವದಿಲ್ಲ ಈ ಬಾರಿ ಉತ್ತರ ಕರ್ನಾಟಕದ ಶಾಸಕರು ಪಕ್ಷಾತೀತವಾಗಿ ಪ್ರತ್ಯೇಕ ಬಜೆಟ್ ಗಾಗಿ ಒತ್ತಾಯಿಸುವಂತೆ ಶಾಸಕ ಅಭಯ ಪಾಟೀಲ ಉತ್ತರ ಕರ್ನಾಟಕದ ಶಾಸಕರಿಗೆ ಲವ್ ಲೆಟರ್ ರವಾನಿಸಿದ್ದು ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ಪ್ರತ್ಯೇಕ ಬಜೆಟ್ ದ ಕೂಗು ಪ್ರತಿಧ್ವನಿಸುವದು ಗ್ಯಾರಂಟಿ