ಮಕ್ಕಳ ಡ್ರಾಯಿಂಗ್ ಡಾರ್ಲಿಂಗ್….ಅಭಯ ಪಾಟೀಲ್….!!!
ಬೆಳಗಾವಿ- ಬೆಳಗಾವಿಯ ವ್ತಾಕ್ಸೀನ್ ಡಿಪೋ ಪ್ರಶಾಂತ ವಾತಾವರಣದಲ್ಲಿ ಇಂದು ಸಂಡೇ ಸಾವಿರಾರು ಮಕ್ಕಳು ಜಮಾಯಿಸಿದ್ದರು ಶಾಸಕ ಅಭಯ ಪಾಟೀಲ ಪ್ರತಿ ವರ್ಷದಂತೆ ಈ ವರ್ಷವೂ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ದೆಯನ್ನು ಆಯೋಜಿಸಿ ಮಕ್ಕಳ ಡ್ರಾಯಿಂಗ್ ಡಾರ್ಲಿಂಗ್ ಎನಿಸಿಕೊಂಡರು
ಸುಮಾರು ಹದಿನಾರು ಸಾವಿರಕ್ಕೂ ಹೆಚ್ಚು ಮಕ್ಕಳ ಉಪಹಾರ ಸೇವಿಸಿದ ಬಳಿಕ ಶಾಸಕ ಅಭಯ ಪಾಟೀಲರ ಗರಡಿಯಲ್ಲಿ ಮಕ್ಕಳ ಹೃದಯಾಳದಿಂದ ಹೊರ ಹೊಮ್ಮಿತು ಚಿತ್ರಕಲೆ…..!!
ಈ ಚಿತ್ರಕಲಾ ಸ್ಪರ್ದೆಯಲ್ಲಿ ಹನ್ನೆರಡು ಬಹುಮಾನ ಕೊಡಲಾಗುತ್ತದೆ ಬಹುಮಾನಿತ ಹನ್ನೆರಡು ಕಲೆಗಳನ್ನು ಹೊಸ ವರ್ಷದ ಕ್ಯಾಲೇಂಡರ್ ನಲ್ಲಿ ಪ್ರಿಂಟ್ ಮಾಡಲಾಗುತ್ತದೆ.ಹನ್ನೆರಡು ಮಕ್ಕಳಿಗೂ ಸೈಕಲ್ ಬಹುಮಾನ ಜೊತೆಗೆ ಬಹುಮಾನ ಪಡೆದ ಮಕ್ಕಳ ಪೋಷಕರಿಗೂ ಸನ್ಮಾನ ಇದು ಶಾಸಕ ಅಭಯ ಪಾಟೀಲರ ಪ್ರತಿ ವರ್ಷದ ಅಜೇಂಡಾ…
ಸ್ಪರ್ದೆಯನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಮಕ್ಕಳ ಡ್ರಾಯಿಂಗ್ ಡಾರ್ಲಿಂಗ್ ಶಾಸಕ ಅಭಯ ಪಾಟೀಲ
ಚಿತ್ರಕಲೆಯನ್ನು ಪ್ರೋತ್ಸಾಹಿಸುವುದು ಈ ಮೂಲಕ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳಿಗೆ ವೇದಿಕೆ ನೀಡುವ ಉದ್ದೇಶದಿಂದ ಚಿತ್ರಕಲಾ ಸ್ಪರ್ಧೆ ಆಯೋಯಿಜಸಲಾಗುತ್ತದೆ ಎಂದು ಹೇಳಿದರು.
ವ್ಯಾಕ್ಸಿನ್ ಡಿಪೋದ ಹಸಿರು ಪರಿಸರದಲ್ಲಿ ಕಾರ್ಯಕ್ರಮವನ್ನು ಕೇವಲ ಸ್ಪರ್ಧೆ ಗೆ ಮಾತ್ರ ಸೀಮಿತಗೊಳಿಸದೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸ್ಥಳೀಯ ಯುವ ಜನಾಂಗವನ್ನೂ ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಒಟ್ಟಾರೆ ಮಕ್ಕಳು, ಯುವ ಜನಾಂಗದಲ್ಲಿ ಕ್ರೀಯಾಶೀಲತೆಯನದನು ಬಡಿದೆಬ್ಬಿಸುವುದು ಮುಖ್ಯ ಉದ್ದೇಶ ಎಂದರು.