Breaking News

ಬೆಳಗಾವಿಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿ ವಿಶೇಷ ಪಾರ್ಕ

ಬೆಳಗಾವಿ- ಕಳೆದ ಐದು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಿಂದುಳಿದಿದ್ದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮತದಾರರು ಅಛಯ ಪರ್ವಕ್ಕೆ ಆಶಿರ್ವಾದ ಮಾಡಿದ ಬಳಿಕ ಕ್ಷೇತ್ರದಲ್ಲಿ ಈಗ ಶಾಸಕ ಅಭಯ ಪಾಟೀಲರ ಅಭಿವೃದ್ಧಿಯ ಪರ್ವ ಆರಂಭವಾಗಿದೆ

ವಿಶಿಷ್ಟವಾದ ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ಶಾಸಕ ಅಭಯ ಪಾಟೀಲ ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ಬೆಳಗಾವಿ ನಗರದಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಯೇ ವಿಶೇಷವಾಗ ಪಾರ್ಕ ನಿರ್ಮಿಸಲು ನಿರ್ಧರಿಸಿದ್ದಾರೆ

ಬೆಳಗಾವಿ ನಗರದಲ್ಲಿ ಬುದ್ಧಿಮಾಂದ್ಯ ಮಕ್ಕಳ ಪೋಷಕರ ಜೊತೆ ಸುದೀರ್ಘ ಚರ್ಚೆ ನಡೆಸಿ ಅವರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ವಿಶೇಷ ಪಾರ್ಕ ನಿರ್ಮಿಸುವ ತೀರ್ಮಾಣಕ್ಕೆ ಅಭಯ ಪಾಟೀಲ ಬಂದಿದ್ದಾರೆ ಈ ಸಂಧರ್ಭದಲ್ಲಿ ಮಾತನಾಡಿದ ಅವರು
ಬುದ್ಧಿ ಮಾಂದ್ಯ ಮಕ್ಕಳು ಸಾಮಾನ್ಯ ಪಾರ್ಕಗಳಲ್ಲಿ ಎಂಜಾಯ್ ಮಾಡಲು ಸಾಧ್ತವಾಗುವದಿಲ್ಲ ಅವರಿಗಾಗಿಯೇ ವಿಶೇಷವಾದ ಪಾರ್ಕ ನಿರ್ಮಿಸಿ ಬುದ್ಧಿಮಾಂದ್ಯ ಮಕ್ಕಳ ಪೋಷಕರು ತಮ್ಮ ಮಕ್ಕಳೊಂದಿಗೆ ಈ ಪಾರ್ಕನಲ್ಲಿ ಕಾಲ ಕಳೆಯುವ ಹಾಗೆ ವಿಭಿನ್ನವಾದ ಆಟಿಕೆಗಳನ್ನು ಈ ಪಾರ್ಕನಲ್ಲಿ ಅಳವಡಿಸಲಾಗುವದು ಈ ಪಾರ್ಕನಲ್ಲಿ ಬುದ್ಧಿಮಾಂದ್ಯ ಮಕ್ಕಳನ್ನು ಹೊರತು ಪಡಿಸಿ ಉಳಿದವರ ಪ್ರವೇಶಕ್ಕೆ ಅವಕಾಶ ಇರುವದಿಲ್ಲ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ

ವಿಕಲಚೇತನರು ಬುದ್ಧಿಮಾಂದ್ಯ ಮಕ್ಕಳು ಉಳಿದ ಮಕ್ಕಳ ಹಾಗೆ ಆಟವಾಡಬೇಕು ಅವರೂ ಕೂಡಾ ಪಾರ್ಕನಲ್ಲಿ ಕಾಲ ಕಳೆಯಬೇಕು ಎನ್ನುವ ಏಕೈಕ ಉದ್ದೇಶದಿಂದ ಈ ವಿಶೇಷವಾದ ಪಾರ್ಕನ್ನು ಬೆಳಗಾವಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅಭಯ ಪಾಟೀಲ ತಿಳಿಸಿದ್ದಾರೆ

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಜನ ತಮ್ಮ ಮೇಲೆ ಅತೀವ ವಿಶ್ವಾಸವಿಟ್ಟು ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ ಅವರ ನಿರೀಕ್ಷೆಯನ್ನು ಸಾಕಾರಗೊಳಿಸಲು ಹಗಲು ರಾತ್ರಿ ಶ್ರಮಿಸುತ್ತೇನೆ ಬೆಳಗಾವಿ ದಕ್ಷಿಣತಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸುತ್ತೇನೆ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವದಾಗಿ ಅಭಯ ಪಾಟೀಲ ಭರವಸೆ ನೀಡಿದ್ದಾರೆ

ಬೆಳಗಾವಿಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ಪಾರ್ಕ ನಿರ್ಮಿಸುವದರ ಜೊತೆಗೆ ದಕ್ಷಿಣ ಮತಕ್ಷೇತ್ರದ ಎಲ್ಲ ಗಾರ್ಡನ್ ಗಳನ್ನು ಅಭಿವೃದ್ಧಿ ಪಡಿಸುವದಾಗಿ ಅಭಯ ಪಾಟೀಲ ತಿಳಿಸಿದ್ದಾರೆ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *