ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ಗ್ರಾಮ ಪಂಚಾಯತಿಗಳು ಬರುತ್ತಿದ್ದು ನಾಲ್ಕು ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಹನ್ನೆರಡು ಹಳ್ಳಿಗಳು ಬರುತ್ತಿದ್ದು ಈ ಎಲ್ಲ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 115 ಕೋಟಿ ರೂ ವೆಚ್ಚದ ಪ್ರಸ್ತಾವಣೆ ಸಿದ್ಧಪಡಿಸಲಾಗುತ್ತಿದೆ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ
ಶನಿವಾರ ಬೆಳಿಗ್ಗೆ ದಕ್ಷಿಣ ಕ್ಷೇತ್ರದ ಯಳ್ಳೂರ ಗ್ರಾಮಕ್ಕೆ ಜಿಲ್ಲಾ ಪಂಚಾಯ್ತಿಯ ಕುಡಿಯುವ ನೀರಿನ ವಿಭಾಗದ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅಭಯ ಪಾಟೀಲ ಗ್ರಾಮದ ಹಿರಿಯರೊಂದಿಗೆ ಸಮಾಲೋಚನೆ ನಡೆಸಿದರು ಯಳ್ಳೂರ ಗ್ರಾಮದಲ್ಲಿ ಹದಿನೈದು ದಿನಕ್ಕೊಂದು ಬಾರಿ ನೀರು ಬಿಡಲಾಗುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿದೆ ಅದಕ್ಕಾಗಿ ಅಧಿಕಾರಿಗಳ ಸಮೇತ ಇಲ್ಲಿಗೆ ಬಂದಿದ್ದೇನೆ ದಕ್ಷಿಣ ಮತಕ್ಷೇತ್ರದ ಎಲ್ಲ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಂಕಲ್ಪ ಮಾಡಲಾಗಿದೆ 115ಕೋಟಿ ರೂ ವೆಚ್ಚದ ಯೋಜನೆ ಸಿದ್ಧಪಡಿಸಲಾಗುತ್ತದೆ ಡಿಸೆಂಬರ್ ತಿಂಗಳೊಳಗಾಗಿಈ ಯೋಜನೆಗೆ ಮಂಜೂರಾತಿ ಪಡೆದು ಎರಡು ವರ್ಷದಲ್ಲಿ ಈ ಯೋಜನೆ ಪೂರ್ಣಗಳಿಸುವ ಗುರಿ ಇದ್ದು ಈ ಯೋಜನೆ ಅನುಷ್ಠಾನಕ್ಕೆ ಬಂದರೆ ದಕ್ಷಿಣ ಕ್ಷೇತ್ರದ ಎಲ್ಲ ಹಳ್ಳಿಗಳ ನೀರಿನ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಅಭಯ ಪಾಟೀಲ ಯಳ್ಳೂರ ಗ್ರಾಮಸ್ಥರಿಗೆ ಭರವಸೆ ನೀಡಿದರು
ದಕ್ಷಿಣ ಮತಕ್ಷೇತ್ರದ, ಯಳ್ಳೂರ ,ಪೀರನವಾಡಿ,ಧಾಮಣೆ,ಮಚ್ಛೆ ಗ್ರಾಮ ಪಂಚಾಯ್ತಿಯ ವ್ಯಾಪಿಗೆ ಬರುವ ಮಸ್ಕೋಡನಟ್ಟಿ, ,ದೇವಗಡನಟ್ಟಿ,ಕುರುಬರಹಟ್ಟಿ,ಮೌಚಾರಟ್ಟಿ,ಯರಮಳ ಝಾಡ ಶಹಾಪೂರ ಬಾಳಗಮಟ್ಟಿ ,ಹುಂಚ್ಯಾನಟ್ಟಿ ಕೇದಾರವಾಡಿ ಸೇರಿದಂತೆ ಕ್ಷೇತ್ರದ ಒಟ್ಟು ಹದಿನಾರು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಈ ಯೋಜನೆಯನ್ನು ಮುಂದಿನ ವರ್ಷದಿಂದ ಆರಂಭಿಸಿ ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು
ಬೆಳಗಿನ ಜಾವ 6-30 ಘಂಟೆಗೆ ಜಿಲ್ಲಾ ಪಂಚಾಯ್ತಿಯ ಅಧಿಕಾರಿಗಳೊಂದಿಗೆಅಭಯ ಪಾಟೀಲರು ಯಳ್ಳೂರಗ್ರಾಮಕ್ಕೆ ಬೇಟಿ ನೀಡಿ ನೀರಿನ ಸಮಸ್ಯೆ ಆಲಿಸಿದ್ದಕ್ಕೆ ಯಳ್ಳೂರ ಗ್ರಾಮದ ಹಿರಿಯರು ಅಭಯ ಪಾಟೀಲರ ಸಾಮಾಜಿಕ ಕಳಕಳಿಯ ಕುರಿತು ಮೆಚ್ಚುಗೆ ವ್ಯೆಕ್ತ ಪಡಿಸಿದರು.