Breaking News

ಆಕಾಶದಲ್ಲಿ ಸಂಚರಿಸುವ ಕಾರು ಬೆಳಗಾವಿಗೂ ಬರತೈತಿ…!!!

ಬೆಳಗಾವಿ-
ಶಾಸಕ ಅಭಯ ಪಾಟೀಲ ಪರಿಶ್ರಮದ ಫಲದಿಂದ ಬಜೆಟ್ ನಲ್ಲಿ ಬೆಳಗಾವಿಗೆ ಬಂಪರ್ ಸಿಗುವ ನಿರೀಕ್ಷೆ
ಬೆಳಗಾವಿ: ಅಭಿವೃದ್ಧಿ ಕೆಲಸಗಳ ಮೂಲಕ ಮಿಸ್ಟರ್ ಡೆವಲೆಫ್ ಮೆಂಟ್ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ರಾಜ್ಯ ಬಜೆಟ್ ನಲ್ಲಿ ಕುಂದಾನಗರಿ ಜನತೆಗೆ ಬಂಪರ್ ಕೊಡುಗೆ ಕೊಡಿಸಲು ವೇದಿಕೆ ಸಿದ್ಧಗೊಳಿಸಿದ್ದಾರೆ.

ಅವರ ಪರಿಶ್ರಮದ ಫಲವಾಗಿ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಬೆಳಗಾವಿಗರಿಗೆ ವಿಶೇಷ ಕೊಡುಗೆ ಸಿಗುವ ನಿರೀಕ್ಷೆ ಗರಿಗೆದರಿದೆ.

ರಾಜ್ಯದಲ್ಲಿಯೇ ಪ್ರಪ್ರಥಮ ಕೇಬಲ್ ಕಾರು
ಐತಿಹಾಸಿಕ ರಾಜಹಂಸಗಡ ಕೋಟೆಯನ್ನು ಪ್ರವಾಸಿ ತಾಣವಾಗಿ ಮಾಡಬೇಕೆಂಬುದು ಶಾಸಕ ಅಭಯ ಪಾಟೀಲರ ಕನಸಾಗಿದ್ದು, ರಾಜ್ಯದಲ್ಲಿಯೇ ಪ್ರಪ್ರಥಮ ಕೇಬಲ್ ಕಾರು ಯೋಜನೆ ಸಾಕಾರಗೊಳ್ಳುವ ಆಶಾಭಾವನೆ ಮೂಡಿದೆ 50 ಕೋಟಿ ರೂ. ಯೋಜನೆಯ ಬ್ಲೂ ಪ್ರಿಂಟ್ ಸಿದ್ದವಾಗಿದ್ದು, ಈಗಾಗಲೇ ಪ್ರವಾಸೋಧ್ಯಮ ಇಲಾಖೆಯ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಯೋಜನೆ ಅನುಷ್ಠಾನದ ಸಾಧ್ಯಾ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ಯೋಜನೆ ಜಾರಿಗೊಳಿಸಬಹುದು ಎಂದು ಇಲಾಖೆಗೆ ವರದಿ ಕೊಟ್ಟಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲರು ಸಿಎಂ, ಪ್ರವಾಸೋದ್ಯಮ ಇಲಾಖೆ ಸಚಿವರ ಬೆನ್ನುಬಿದ್ದು ಯೋಜನೆ ಅನುಷ್ಠಾನಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ. ಈಗಿನ ಬಜೆಟ್ ನಲ್ಲಿ ಯೋಜನೆಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.

ಯೋಜನೆ ಸಾಕಾರಗೊಂಡರೆ ಯಳ್ಳೂರು ಕೆರೆಯಿಂದ ರಾಜಹಂಸಗಡಕ್ಕೆ 3.8 ಕಿಮೀ ಕೇಬಲ್ ಕಾರು ಓಡಾಡಲಿದೆ. ಐತಿಹಾಸ ಪ್ರಸಿದ್ಧ ರಾಜಹಂಸಗಡ ಕೋಟೆ ವೀಕ್ಷಣೆಗೆ ಬರಲಿರುವ ಪ್ರವಾಸಿಗರು ಕೇಬಲ್ ಕಾರು ಮೂಲಕ ನಿಸರ್ಗ ಸೌಂದರ್ಯ ಸವಿಯುವ ಅವಕಾಶ ಸಿಗಲಿದೆ.

ಬೆಳಗಾವಿಗೆ ಬರಲಿದೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ

ಈಚೆಗೆ ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಜನತೆ ಕ್ಯಾನ್ಸರ್ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರನ್ನೇ ಅವಲಂಬಿಸಬೇಕಿತ್ತು. ಆದರೆ, ಬಡವರಿಗೆ ಇದು ಗಗನಕುಸುಮವಾಗಿತ್ತು. ಇದನ್ನು ಅರಿತ ಶಾಸಕ ಅಭಯ ಪಾಟೀಲ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರ ಬೆನ್ನುಬಿದ್ದು, ಬೆಳಗಾವಿಯಲ್ಲೂ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ಡಿ.ಸುಧಾಕರ ಶಾಸಕ ಅಭಯ ಪಾಟೀಲರ ಭರವಸೆ ನೀಡಿದ್ದಾರೆ.ಈ ಆಸ್ಪತ್ರೆ ಬೆಳಗಾವಿಗೆ ಬರುವದು ಖಚಿತವಾಗಿದೆ.
ಯಳ್ಳೂರಿನಲ್ಲಿ ಒಳಾಂಗಣ ಕ್ರೀಡಾಂಗಣ
ದಕ್ಷಿಣ ಮತಕ್ಷೇತ್ರಕ್ಕೆ ಬರುವ ಯಳ್ಳೂರು ಹೊರವಲಯದಲ್ಲಿ ಬಹುಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಯೋಜನೆಗೆ ಶಾಸಕ ಅಭಯ ಪಾಟೀಲ ಸತತ ಶ್ರಮ ವಹಿಸುತ್ತಿದ್ದು, ಈ ಬಜೆಟ್ ನಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಕ್ರಿಕೆಟ್ ಹೊರತುಪಡಿಸಿ ಬಹುತೇಕ ಒಳಾಂಣದಲ್ಲಿ ಆಡಬಹುದಾದ ಎಲ್ಲ ಕ್ರೀಡೆಗಳ ಅಂಕಣ ಸಿದ್ಧಗೊಳ್ಳಲಿದ್ದು, ಇದು ಸಾಕಾರಗೊಂಡರೆ ನಗರದ ಕ್ರೀಡಾಪಟುಗಳಿಗೆ ಉತ್ತೇಜನ ಸಿಗಲಿದೆ.
ಬಹುದಿನಗಳ ಕನಸು ನನಸಾಗುವ ನಿರೀಕ್ಷೆ ಇದೆ.

ಐಟಿ ಬಿಟಿ ಪಾರ್ಕ್

ರಕ್ಷಣಾ ಇಲಾಖೆ ವಶದಲ್ಲಿರುವ ಬೆಳಗಾವಿ ನಗರದ 778 ಎಕರೆ ಪ್ರದೇಶ. ಇದರ ಲೀಜ್ ಅವಧಿ ಮುಗಿದು ದಶಕಗಳೇ ಕಳೆದರೂ ರಕ್ಷಣಾ ಇಲಾಖೆ ಜಾಗ ಬಿಟ್ಟುಕೊಡಲು ಸಿದ್ಧವಿರಲಿಲ್ಲ.ಆದರೆ, ಶಾಸಕ ಅಭಯ ಪಾಟೀಲರು ಮೊನ್ನೆ ಸಿಎಂ ಜೊತೆಗೆ ದೆಹಲಿಗೆ ತೆರಳಿ ಕೇಂದ್ರ ರಕ್ಷಣಾ ಸಚಿವರ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ ಮನವೊಲಿಸಿದ್ದು, ಜಾಗ ಹಸ್ತಾಂತರ ಭರವಸೆ ಪಡೆದು ಬಂದಿದ್ದಾರೆ. ರಾಜ್ಯ ಸರಕಾರದ ವ್ಯಾಪ್ತಿಗೆ ಈ ಜಾಗ ಲಭಿಸಿದರೆ ಅಭಿವೃದ್ಧಿ ಕೆಲಸ ಕೈಗೊಳ್ಳಲು ಸರಕಾರಕ್ಕೆ ಜಾಗದ ಸಮಸ್ಯೆಯೇ ಉದ್ಭವಿಸುವುದಿಲ್ಲ. ಇದೇ ಜಾಗೆಯಲ್ಲಿ ಬೃಹತ್ ಐಟಿ ಬಿಟಿ ಪಾರ್ಕ್ ನಿರ್ಮಿಸಿ ಬೆಳಗಾವಿ ಜಿಲ್ಲೆಯ ಸಾವಿರಾರು ಯುವಕರಿಗೆ ಉದ್ಯೋಗ ದೊರಕಿಸುವದು,ಐಟಿ ಬಿಟಿ ಇಂಡಸ್ಟ್ರೀಸ್ ಬೆಳಗಾವಿಗೆ ತರುವುದು ಶಾಸಕ ಅಭಯ ಪಾಟೀಲರ ಸಂಕಲ್ಪವಾಗಿದೆ.

ಅಭಿವೃದ್ಧಿಗೆ ಮತ್ತೊಂದು ಹೆಸರೇ ಅಭಯ ಪಾಟೀಲ
ಶಾಸಕ ಅಭಯ ಪಾಟೀಲ ಎಂದರೆ ಅಭಿವೃದ್ಧಿ, ಅಭಿವೃದ್ಧಿ ಎಂದರೆ ಅಭಯ ಪಾಟೀಲ ಎಂಬುವಷ್ಟರ ಮಟ್ಟಿಗೆ ಅವರು ಜಿಲ್ಲೆಯಲ್ಲಿ ಫೇಮಸ್ ಆಗಿದ್ದಾರೆ. ಸಣ್ಣದಿರಲಿ, ದೊಡ್ಡದಾಗಿರಲಿ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಕೆಲಸ ಹಿಡಿದರೂ ಅದನ್ನು ದಡ ಮುಟ್ಟಿಸುವವರೆಗೂ ವಿರಮಿಸುವವರಲ್ಲ. ಕ್ಷೇತ್ರದ ಯಾವುದೇ ಅಭಿವೃದ್ಧಿ ಕೆಲಸವಾಗಬೇಕಿದ್ದರೆ ಸಚಿವಾಲಯದಿಂದ ಸಚಿವಾಲಯಕ್ಕೆ, ಇಲಾಖೆಗಳಿಗೆ ಸ್ವತಃ ತಾವೇ ಓಡಾಡಿ ಮಂಜೂರಾತಿ ಆದೇಶ ಪಡೆದುಕೊಂಡೇ ಬರುತ್ತಾರೆ. ಇನ್ನು ಕ್ಷೇತ್ರದ ಮತದಾರರು ಸಮಸ್ಯೆ ಹೊತ್ತು ಅವರ ಬಳಿಗೆ ಬಂದರೆ ಸಾಕು. ಆ ಕೆಲಸ ಮಾಡಿಸುವವರೆಗೂ ಬಿಡಲ್ಲ. ಶಾಸಕ ಅಭಯ ಪಾಟೀಲ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *