Breaking News

ಬೆಳಗಾವಿ ಉತ್ತರದಲ್ಲಿ ಮೀಸ್ಟರ್ ಡೆವಲಪ್ಮೆಂಟ್ ಪರ್ವ..!!!

ಬೆಳಗಾವಿ- ಬೆಳಗಾವಿ ಉತ್ತರದಲ್ಲಿ ಎಲ್ಲಿ ನೋಡಿದಲ್ಲಿ ಅಭಿವೃದ್ಧಿ ಕಾಮಗಾರಿಗಳ ಝಲಕ್ ದಿನಕ್ಕೆ ಹತ್ತರಿಂದ ಹದಿನೈದು ಕಾಮಗಾರಿಗಳಿಗೆ ಚಾಲನೆ ಗಲ್ಲಿ,ಗಲ್ಲಿಗಳಲ್ಲಿ ಡಾಂಬರ್ ಸಂದ್ರಿ ಗೊಂದ್ರೆಗಳಲ್ಲಿ ಫೆವರ್ ಹೀಗೆ ಉತ್ತರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೊಳೆಯೇ ಹರಿಯುತ್ತಿದೆ

ಬೆಳಗಾವಿ ಉತ್ತರ ಮತಕ್ಷೇತ್ರದ ಪ್ರಮುಖ ರಸ್ತೆಗಳ ಮರು ಡಾಂಬರೀಕರಣ ನಡೆದಿದೆ ರಸ್ತೆಯ ಮದ್ಯೆ ಹೈಟೆಕ್ ಬೀದಿ ದೀಪಗಳ ಅಳವಡಿಕೆ ಚರಂಡಿ ಕಾಮಗಾರಿ ಫುಟ್ ಪಾತ್ ಕಾಮಗಾರಿ ಹೀಗೆ ನೂರೆಂಟು ಕಾಮಗಾರಿಗಳ ಪರ್ವಕ್ಕೆ ಉತ್ತರ ಮತಕ್ಷೇತ್ರ ಸಾಕ್ಷಿಯಾಗಿದೆ

ಶಾಸಕ ಫಿರೋಜ್ ಸೇಠ ಅವರ ಸಾಮಾಜಿಕ ಕಾಳಜಿ ಅಭವೃದ್ಧಿಯ ದೂರದೃಷ್ಠಿಯ ಪರಿಣಾಮ ನಗರದ ಎಲ್ಲ ಸಮಾಜಗಳ ಜನ ಅವರನ್ನು ಮಾಸ್ಟರ್ ಡೆವಲಪ್ಮೆಂಟ್ ಮೀಸ್ಟರ್ ಡೆವಲಪ್ಮೆಂಟ್ ಎಂದೇ ಕರೆಯುತ್ತಿದ್ದಾರೆ ಅಭವೃದ್ಧಿಯ ಝಲಕ್ ನೋಡಿ ಶಾಸಕ ಸೇಠ್ ಅವರಿಗೆ ಕಂಡು ಕಂಡಲ್ಲಿ ಸನ್ಮಾನ ಸತ್ಕಾರ ನಡೆಯುತ್ತಿದೆ

ಶಾಸಕ ಸೇಠ ಕೇವಲ ರಸ್ತೆ ಚರಂಡಿ ಪುಟ್ ಪಾತ್ ಕಾಮಗಾರಿಗಳನ್ನು ಮಾಡದೇ ಜೊತೆಗೆ ಉತ್ತರ ಕ್ಷೇತ್ರದ ಸರ್ದಾರ ಮೈದಾನ ಸೇರಿದಂತೆ ಎಲ್ಲ ಮೈದಾನಗಳ ಅಭಿವೃದ್ಧಿ ಮಾಡಿದ್ದಾರೆ ಪಾರ್ಕಗಳಿಗೆ ಮರು ಜೀವ ನೀಡಿದ್ದಾರೆ.ಪ್ರಮುಖ ಬಡಾವಣೆಗಳಲ್ಲಿ ಗ್ಲಾಸ್ ಹೌಸ್ ಗಳನ್ನು ನಿರ್ಮಿಸಿ ಉತ್ತರ ಮತಕ್ಷೇತ್ರದ ಸ್ವರೂಪವನ್ನೇ ಬದಲಿ ಮಾಡುವಲ್ಲಿ ಶಾಸಕ ಸೇಠ ಯಶಸ್ವಿಯಾಗಿದ್ದಾರೆ

ಶಾಸಕ ಸೇಠ ಅವರು ಹನುಮಾನ ನಗರದಲ್ಲಿ ಆಕರ್ಷಕವಾದ ಸ್ಪೋರ್ಟ್ಸ್ ಲಾಂಚ್ ನಿರ್ಮಾಣ ಮಾಡಿ ಒಂದೇ ಕಡೆ ಬ್ಯಾಡ್ಮಿಂಟನ್, ವ್ಹಾಲಿಬಾಲ್ ಸೇರಿದಂತೆ ಹಲವಾರು ಕ್ರೀಡೆಗಳ ಮೈದಾನಗಳನ್ನು ಅಕ್ಕ ಪಕ್ಕದಲ್ಲಿ ನಿರ್ಮಿಸಿ ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡುವಲ್ಲಿ ಶಾಸಕ ಸೇಠ ಯಶಸ್ವಿಯಾಗಿದ್ದಾರೆ

ಅಭಿವೃದ್ಧಿಯ ವಿಚಾರದಲ್ಲಿ ಶಾಸಕ ಸೇಠ ಎಲ್ಲರನ್ನು ಮೀರಿಸಿದ್ದಾರೆ ಧರ್ಮನಾಥ ಭವನದ ಬಳಿ ಒಳಾಂಗಣ ಕ್ರೀಡಾಂಗಣ ಸೇರಿದಂತೆ ಉತ್ತರ ಮತಕ್ಷೇತ್ರದ ಪ್ರಮುಖ ಸ್ಥಳಗಳಲ್ಲಿ ಸ್ವಿಮೀಂಗ್ ಫೂಲ್ ಗಳನ್ನು ನಿರ್ಮಿಸಿ ಉತ್ತರ ಮತ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವದರಲ್ಲಿ ಶಾಸಕ ಸೇಠ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ

ಶಾಸಕ ಸೇಠ ಅವರು ಏಜಂಟರಿಗೆ ಮಣೆ ಹಾಕದೇ ಸರ್ಕಾರದ ವಿವಿಧ ಯೋಜನೆಗಳಿಗೆ ಖುದ್ದಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ ಎಂಎಲ್ ಎ ಫಂಡ್ ನಲ್ಲಿ ಸಿಂಹ ಪಾಲನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿದ್ದಾರೆ ಉತ್ತರ ಮತ ಕ್ಷೇತ್ರದ ವಿವಿಧ ಗಾರ್ಡನ್ ಗಳನ್ನು ಅಭಿವೃದ್ಧಿ ಮಾಡುವದರ ಜೊತೆಗೆ ಕ್ಷೇತ್ರದಲ್ಲಿ ಹೊಸ ಪಾರ್ಕಗಳನ್ನು ನಿರ್ಮಿಸುವಲ್ಲಿ ಶಾಸಕ ಸೇಠ ಯಶಸ್ವಿಯಾಗಿದ್ದಾರೆ

ಬೆಳಗಾವಿ ಉತ್ತರದಲ್ಲಿ ನಿಜವಾಗಿಯೂ ಅಭಿವೃದ್ಧಿ ಯ ಝಲಕ್ ಗೋಚರಿಸುತ್ತಿದೆ ಅಭವೃದ್ಧಿಯ ವಿಚಾರದಲ್ಲಿ ಸೇಠ ಅವರು ನಿಜವಾಗಿಯೂ ಮಿಸ್ಟರ್ ಡೆವಲಪ್ಮೆಂಟ್ ಆಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಇವರ ಸ್ವಂತ ನಿರ್ಧಾರಗಳಿಂದಾಗಿ ಉತ್ತರದಲ್ಲಿ ಇವರ ರಾಜಕೀಯ ವೈರಿಗಳ ಸಂಖ್ಯೆ ಹೆಚ್ಚಾಗಿದೆ ಆದರೂ ಜನಸಾಮಾನ್ಯರ ಮನಸ್ಸು ಗೆಲ್ಲುವಲ್ಲಿ ಶಾಸಕ ಸೇಠ ಯಶಸ್ವಿಯಾಗಿದ್ದಾರೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *