ಬೆಳಗಾವಿ- ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ತಮ್ಮನ್ನು ಪ್ರವಾಸೋದ್ಯಮ ನಿಗಮದ ಅಧ್ಯಕ್ಷನನ್ನಾಗಿ ನೇಮಿಸಿದ್ದರು ಕ್ಷೇತ್ರದ ಅಭಿವೃದ್ಧಿಗೆ ಈ ಹುದ್ದೆ ತೊಡಕಾಗಬಾರದು ಎನ್ನುವ ಉದ್ದೇಶದಿಂದ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಸಿಎಂ ತಮ್ಮ ಪ್ರಮಾಣಿಕತೆಗೆ ಮೆಚ್ಚಿ ಬುಡಾ ಅಧ್ಯಕ್ಷರನ್ನಾಗಿ ನೇಮಿಸಿದ್ದು ಬುಡಾದಲ್ಲಿ ಆಕ್ರಮ ವ್ಯೆವಹಾರಗಳಿಗೆ ಅವಕಾಶ ನೀಡುವದಿಲ್ಲ ಎಂದು ಶಾಸಕ ಸೇಠ ಭರವಸೆ ನೀಡಿದ್ದಾರೆ
ಬುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಕಣಬರ್ಗಿ ಸಮೀಪ 160 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಿಸಲಾಗುತ್ತಿದೆ ಆದಷ್ಟು ಬೇಗನೆ ಪ್ಲಾಟಗಳನ್ನು ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದ ಸೇಠ ತಮಗೆ ಮಂತ್ರಿಯಾಗುವ ಆಸೆ ಇಲ್ಲ ಆದ್ರೆ ಮುಖ್ಯಮಂತ್ರಿಗಳು ತಮ್ಮ ಮೇಲೆ ವಿಶ್ವಾಸವಿಟ್ಟು ನೀಡಿರುವ ಬುಡಾ ಅಧ್ಯಕ್ಷ ಸ್ಥಾನವನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ ಎಂದು ಸೇಠ ಹೇಳಿದರು
ಬೆಳಗಾವಿ ನಗರದಲ್ಲಿ ಈಡೀ ದೇಶವೇ ಹೆಮ್ಮೆಪಡುವ ಅತೀ ಎತ್ತರದ ಎರಡನೇಯ ರಾಷ್ಟ್ರ ಧ್ವಜವನ್ನು ಬೆಳಗಾವಿಯಲ್ಲಿ ಹಾರಿಸುತ್ತೇವೆ ರಾಹುಲ್ ಗಾಂಧೀ ಮತ್ತು ಮುಖ್ಯಮಂತ್ರಿಗಳ ಅಪಾಯಿನ್ಮೆಂಟ್ ತೆಗೆದುಕೊಂಡು ಚುನಾವಣೆಗೆ ಮುನ್ನ ಈ ಹೆಮ್ಮೆಯ ಅತೀ ಎತ್ತರದ ತಿರಂಗಾ ಬೆಳಗಾವಿಯ ಬಾನಂಗಳದಲ್ಲಿ ಹಾರಾಡುವದು ಖಚಿತ ಎಂದು ಸೇಠ ಹೇಳಿದರು