ಬೆಳಗಾವಿ
ಬೆಳಗಾವಿ ಉತ್ತರ ಕ್ಷೇತ್ರದಿಂದ ಈ ಬಾರಿ ಹಾಲಿ ಕಾಂಗ್ರೆಸ್ ಶಾಸಕ ಫಿರೋಜ ಸೇಠ
ಬದಲಿಗೆ ಬೇರೆಯವರಗೆ ಟಿಕೆಟ್ ನೀಡಬೇಕು ಎಂದು ಬೆಳಗಾವಿ ಮುಸ್ಲೀಮ್
ಫೋರಮ್ ಮುಖಂಡರು ಒತ್ತಾಯಿಸಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಮ್
ಮುಖಂಡ ಹಾಗೂ ಜಿಲ್ಲಾ ವಕ ಮಂಡಳಿ ಚೇರಮನ್ ಸಿ ಕೆ ಎಸ್ ನಜೀರ ಎರಡು
ಬಾರಿ ಫಿರೋಜ ಸೇಠ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೆವು. ಆದರೆ ಅವರಿಂದ ನಾವು
ನಿರೀಕ್ಷೆ ಮಾಡಿದಂತೆ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಹೀಗಾಗಿ ಈ ಬಾರಿ ಬದಲಾವಣೆ
ಬೇಕು ಎಂದರು.
ಫಿರೋಜ ಸೇಠ ಬದಲಿಗೆ ನಾವು ಈಗಾಗಲೇ ಸಯ್ಯದ್ ಜಾವಿದ್ ಪಾಚಾ ಇನಾಮದಾರ
ಹಾಗೂ ಹಶಮ್ ಭಾವಿಕಟ್ಟಿ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದೇವೆ.
ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಪ್ರಯತ್ನ ಮಾಡಬೇಕು ಎಂದು ಜಿಲ್ಲಾ
ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಎ ಐ ಸಿ ಸಿ ಕಾರ್ಯದರ್ಶಿ ಸತೀಶ
ಜಾರಕಿಹೊಳಿ ಅವರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಒಂದು ಪಕ್ಷ ಕಾಂಗ್ರೆಸ್ ಪಕ್ಷ ನಮ್ಮ ಮನವಿಗೆ ಸ್ಪಂದಿಸದೆ ಫಿರೋಜ ಸೇಠಗೆ
ಟಿಕೆಟ್ ನೀಡಿದರೆ ಆಗ ನಾವು ಫೆÇೀರಮ್‍ದಿಂದ ಇವರಿಬ್ಬರಲ್ಲಿ ಒಬ್ಬರನ್ನು
ಕಣಕ್ಕಿಳಿಸುತ್ತೇವೆ. ಇದು ಖಚಿತ ಎಂದು ನಜೀರ ಹೇಳಿದರು.
2008 ರಲ್ಲಿ ಫಿರೋಜ ಸೇಠ ಅವರನ್ನು ಕಾಂಗ್ರೆಸ್‍ಗೆ ಕರೆತಂದು ನಾವು ಬಹಳ
ದೊಡ್ಡ ತಪ್ಪು ಮಾಡಿದ್ದೇವೆ. ಅಷ್ಟೇ ಅಲ್ಲ ಎರಡು ಬಾರಿ ಶಾಸಕರನ್ನಾಗಿ ಆಯ್ಕೆ
ಮಾಡಿ ಮಹಾಪರಾಧ ಮಾಡಿದ್ದೇವೆ. ಇದಕ್ಕೆ ಉತ್ತರ ಕ್ಷೇತ್ರದ ಜನರ ಹಾಗೂ
ಸಮಾಜದ ಜನರ ಕ್ಷಮೆ ಕೇಳುತ್ತೇನೆ ಎಂದು ಎದ್ದುನಿಂತು ಕೈಮುಗಿದ ಸಿ ಕೆ
ಎಸ್ ನಜೀರ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಪದೇ ಪದೇ ಗಲಾಟೆ
ಅಗುತ್ತಿರುವದಕ್ಕೆ ಕಾರಣ ಏನು. ಇದುವರೆಗೆ 1800 ಕ್ಕೂ ಹೆಚ್ಚು ಯುವಕರ
ಮೇಲೆ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಶಾಸಕರ ಬಳಿ ಉತ್ತರ ಇದೆಯೇ
ಎಂದು ಖಾರವಾಗಿ ಪ್ರಶ್ನಿಸಿದರು.
ಫಿರೋಜ ಸೇಠ ಕಾಂಗ್ರೆಸ್ ಪಕ್ಷದ ಇಮೇಜ್ ಹಾಳು ಮಾಡಿದ್ದಾರೆ. ಅದರಲ್ಲೂ
ಮುಸ್ಲೀಮ ಸಮಾಜಕ್ಕೆ ಸಹ ಇವರಿಂದ ಯಾವುದೇ ಅನುಕೂಲ ಆಗಿಲ್ಲ. ತಮಗೆ
ಬೇಕಾದ ಒಬ್ಬನೇ ವ್ಯಕ್ತಿಗೆ ಅಭಿವದ್ಧಿ ಕಾಮಗಾರಿಗಳ ಗುತ್ತಿಗೆ ನೀಡಿದ್ದಾರೆ. ಈ
ಶಾಸಕರಿಂದಾಗಿ ಇಲ್ಲಿಯವರೆಗೆ ನಿಜವಾದ ಫಲಾನುಭವಿಗಳಿಗೆ ಆಶ್ರಯ ಮನೆಗಳು
ಸಿಕ್ಕಿಲ್ಲ ಎಂದು ನಜೀರ ಆರೋಪ ಮಾಡಿದರು.
ಬೆಳಗಾವಿ ಉತ್ತರ ಕ್ಷೇತ್ರದ ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕಾರಣ
ಕಾಂಗ್ರೆಸ್ ಪಕ್ಷ ನಾವು ಶಿಫಾರಸ್ಸು ಮಾಡಿರುವ ಅಭ್ಯರ್ಥಿಗಳಿಗೆ ಟಿಕೆಟ್
ನೀಡಬೇಕು. ಇಲ್ಲಿ ಇಂಥವರಿಗೇ ಮತ ಹಾಕಿ ಎಂದು ಫತ್ವಾ ಹೊರಡಿಸಲು ಅವಕಾಶ
ಇಲ್ಲ. ಜನರು ಸಹ ಇಂತಹ ಸುದ್ದಿಗಳನ್ನು ನಂಬಬಾರದು ಎಂದರು.
ಜೆ ಡಿ ಎಸ್ ನ ಮುಖಂಡ ಫೈಜುಲ್ಲಾ ಮಾಡಿವಾಲೆ ಮಾತನಾಡಿ ಬೆಳಗಾವಿ ಉತ್ತರದಿಂದ
ಕಾಂಗ್ರೆಸ್ ಮುಸ್ಲೀಮರಿಗೆ ಟಿಕೆಟ್ ನೀಡಿದರೆ ಆಗ ನಾನು ಜೆ ಡಿ ಎಸ್ ದಿಂದ ಸ್ಪರ್ಧೆ
ಮಾಡುವ ಬಗ್ಗೆ ವಿಚಾರ ಮಾಡುತ್ತೇನೆ. ಇಲ್ಲದಿದ್ದರೆ ಜೆ ಡಿ ಎಸ್ ಹಾಗೂ
ಫೋರಮ್ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಲಿದ್ದೇವೆ ಎಂದು ಹೇಳಿದರು.
ಕೆ ಪಿ ಸಿ ಸಿ ಸದಸ್ಯ ಬಾಬುಲಾಲ ಬಾಗವಾನ ಮಾತನಾಡಿ ಬೆಳಗಾವಿಯ ಶಾಸಕ
ಫಿರೋಜ ಸೇಠ ಕಾಂಗ್ರೆಸ್ ಪಕ್ಷವನ್ನು ತಮ್ಮ ಮನೆಯಲ್ಲಿ ಕಟ್ಟಿಟ್ಟಿದ್ದಾರೆ.
ಅವರ ಮಗ, ಪತ್ನಿ ಹಾಗೂ ತಮ್ಮನಿಗೆ ಅನುಕೂಲ ಮಾಡಿಕೊಡಲು ಪಕ್ಷವನ್ನು
ಬಳಸಿಕೊಳ್ಳುತ್ತಿದ್ದಾರೆ.ಅವರ ಬಿಜನೆಸ್ ಪಾಟ್ನರ್.ಅವರ ವಕೀಲ.ಅವರ ಅರ್ಕಟೆಕ್ಟರ್ ಗೆ ಅವರ ಪಿಎ ಗಳಿಗೆ ನಿಗಮ ಮಂಡಳಿ ಸ್ಥಾನ ಕೊಡಸಿದ್ದಾರೆ ಕಾರ್ಯಕರ್ತರಿಗೆ ಬೆಲೆ ಇಲ್ಲ. ಸರ್ವಾಧಿಕಾರಿ ಧೋರಣೆ ನಡೆದಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಯ್ಯದ ಜಾವಿದ್ ಪಾಚಾ ಇನಾಮದಾರ, ಹಶಮ್ ಭಾವಿಕಟ್ಟಿ,
ದಸ್ತಗೀರ ಆಗಾ, ಮಾಜಿ ನಗರಸೇವಕರಾದ ಫಿರ್ದೋಸ್ ದರ್ಗಾ, ಅಜೀಮ
ಪಟವೇಗಾರ ಉಪಸ್ಥಿತರಿದ್ದರು.
—