Breaking News

ಮದರ್ ತೆರೇಸಾ ಭವನ ಲೋಕಾರ್ಪಣೆ

ಬೆಳಗಾವಿ- ಬೆಳಗಾವಿಯ ಶಾಹು ನಗರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಿರ್ಮಿಸಲಾಗಿರುವ ಮದರ್ ಥೆರೆಸ್ಸಾ ಭವನವನ್ನು ಶಾಸಕ ಸೇಠ ಇಂದು ಲೋಕಾರ್ಪಣೆ ಮಾಡಿದರು

ಭವನ ಉದ್ಘಾಟಿಸಿ ಮಾತನಾಡಿದ ಶಾಸಕ ಸೇಠ ಮದರ್ ತೆರೇಸಾ ಅವರು ಜಾತಿ ಧರ್ಮವನ್ನು ಲೆಕ್ಕಿಸದೇ ಮಾನವೀಯ ಧರ್ಮವನ್ನು ರೂಪಿಸಿದರು ಅವರು ಮಾಡಿದ ಸೇವೆಯನ್ನು ಇಡೀ ಲೋಕವೇ ಮರೆಯಲು ಸಾಧ್ಯವಿಲ್ಲ ಅವರ ಹೆಸರಿನಲ್ಲಿ ಭವನ ನಿರ್ಮಿಸುವ ಅವಕಾಶ ನನಗೆ ಒದಗಿ ಬಂದಿದ್ದು ಪೂರ್ವ ಜನ್ಮದ ಪುಣ್ಯ ಎಂದರು

ಕ್ರಿಶ್ಚಿಯನ್ ಸಮಾಜ ಎಲ್ಲ ಸಮಾಜದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಭವಿಷ್ಯ ರೂಪಿಸುತ್ತಿದೆ ಈ ಸಮಾಜಕ್ಕೆ ಸರ್ಕಾರದಿಂದ ಏನಾದರೂ ಕೊಡುಗೆ ನೀಡಬೇಕು ಎನ್ನುವ ಕನಸು ತಮ್ಮದಾಗಿತ್ತು ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ವಿಶಾಲವಾದ ಭವನ ಬೆಳಗಾವಿಯಲ್ಲಿ ನಿರ್ಮಿಸಿ ಇಂದು ಉದ್ಘಾಟನೆಯಾಗಿದೆ ಈ ಭವನದ ಸದುಪಯೋಗ ಪಡೆಸಿಕೊಳ್ಳಬೇಕೆಂದು ಶಾಸಕ ಸೇಠ ಕರೆ ನೀಡಿದರು

ಬಿಷಪ್ ಪೀಟರ್ ಮಚಾಡೋ ಮಾತನಾಡಿ ಶಾಸಕ ಸೇಠ ಅವರು ಬೆಳಗಾವಿ ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಸರ್ವ ಸಮಾಜಗಳ ಬೇಡಿಕೆಗಳನ್ನು ಈಡೇರಿಸುತ್ತಿದ್ದಾರೆ ಮದರ್ ತೆರೇಸಾ ಭವನ ನಿರ್ಮಿಸುವಂತೆ ಶಾಸಕರಿಗೆ ಮನವಿ ಮಾಡಿಕೊಂಡಾಗ ಅವರು ಅದಕ್ಕೆ ತಕ್ಷಣ ಸ್ಪಂದಿಸಿ ಭವನ ನಿರ್ಮಿಸಿ ಕೊಟ್ಟಿದ್ದಾರೆ ಕ್ರಿಶ್ಚಿಯನ್ ಸಮಾಜ ಶಾಸಕ ಸೇಠ ಅವರು ಮಾಡಿರುವ ಸೇವೆಯನ್ನು ಮರೆಯುವದಿಲ್ಲ ಶಾಸಕ ಸೇಠ ಅವರ ಅಭಿವೃದ್ಧಿಯ ಪರ್ವ ಮುಂದುವರೆಯಲಿ ಎಂದು ಬಿಷಪ್ ಪೀಟರ್ ಮಚಾಡೋ ಹಾರೈಸಿದರು

ಮೇಯರ್ ಸಂಜೋತಾ ಬಾಂಧೇಕರ ಉಪ ಮೇಯರ್ ನಾಗೇಶ ಮಂಡೋಳ್ಕರ್ ಮೋಹನ ಬೆಳಗುಂದಕರ ಪಾಲಿಕೆ ಮುಖ್ಯ ಅಭಿಯಂತರ ಆರ್ ಎಸ್ ನಾಯಕ ಸೇರಿದಂತೆ ಹಲವಾರು ಜನ ಗಣ್ಯರು ಭಾಗವಹಿಸಿದ್ದರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *