Breaking News

ಬೆಳಗಾವಿಯಲ್ಲಿ ಹಾರಾಡಲಿದೆ ದೇಶದಲ್ಲಿಯೇ ಅತೀ ಎತ್ತರದ ರಾಷ್ಟ್ರ ಧ್ವಜ..

ಬೆಳಗಾವಿ – ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಸೇಠ ಅವರ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ದೇಶದಲ್ಲಿಯೇ ಅತೀ ಎತ್ತರವಾದ ನಮ್ಮೆಲ್ಲರ ಹೆಮ್ಮೆಯ ರಾಷ್ಟ್ರ ಧ್ವಜ ಹಾರಾಡಲಿದೆ

ಬೆಳಗಾವಿಯ ಕೋಟೆ ಕೆರೆಯ ದಡದಲ್ಲಿ ಬುಡಾ ಕಚೇರಿಯ ಎದುರಲ್ಲಿರುವ ಓಪನ್ ಥೇಟರ್ ಆವರಣದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಕಂಬ ನಿರ್ಮಾಣದ ಕಾಮಗಾರಿಗೆ ಶಾಸಕ ಫಿರೋಜ್ ಸೇಠ ಇಂದು ಸಂಜೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು
ಮುಖ್ಯಮಂತ್ರಿಗಳ ನೂರು ಕೋಟಿ ವಿಶೇಷ ಅನುದಾನದಲ್ಲಿ ಐದು ಕೋಟಿ ರೂ ವೆಚ್ವದಲ್ಲಿ ಈ ಧ್ವಜ ಸ್ಥಂಭ ನಿರ್ಮಿಸಲಾಗುತ್ತಿದೆ
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಸೇಠ ಹಜರತ್ ಟಿಪ್ಪು ಸುಲ್ತಾನ್ ಒಬ್ಬ ದೇಶ ಭಕ್ತ ನಾಳೆ ಅವರ ಜಯಂತಿ ಇದ್ದು ಇದರ ಅಂಗವಾಗಿ ರಾಷ್ಟ್ರ ಪ್ರಜ್ಞೆ ಮೂಡಿಸುವ ರಾಷ್ಟ್ರಾಭಿಮಾನ ಬೆಳೆಸುವ ಮಹತ್ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ ರಾಷ್ಟ್ರ ಧ್ವಜ 110 ಅಡಿ ಎತ್ತರದಲ್ಲಿ ಹಾರಾಡಲಿದೆ ಎಂಟು ಸಾವಿರ ಚದರ ಅಡಿ ಧ್ವಜದ ಗಾತ್ರವಿದ್ದು ಅತೀ ಎತ್ತರದ ಈ ಧ್ವಜ ಐತಿಹಾಸಿಕ ಕ್ರಾಂತಿ ನೆಲದ ಪ್ರಮುಖ ಆಕರ್ಷಣೆ ಆಗಲಿದೆ ಎಂದು ಶಾಸಕ ಸೇಠ ಹೇಳಿದರು
ಧ್ವಜ ಸ್ಥಂಬದ ನಿರ್ಮಾಣಕ್ಕಾಗಿ 1.62 ಕೋಟಿ ಲ್ಯಾಂಡ್ ಸ್ಕೇಪಿಂಗ್ ಕಾಮಗಾರಿಗೆ 2.5 ಕೋಟಿ ಒಟ್ಟು ಐದು ಕೋಟಿ ರೂ ವೆಚ್ಚದಲ್ಲಿ ಧ್ವಜ ಸ್ಥಂಬ ಸೇರಿದಂತೆ ಸಂಪೂರ್ಣ ಕಾಮಗಾರಿ ನಡೆಯಲಿದ್ದು ಎರಡೇ ತಿಂಗಳಲ್ಲಿ ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜ ಕೋಟೆ ಕೆರೆಯ ದಡದಲ್ಲಿ ಹಾರಾಡಲಿದೆ ಎಂದು ಸೇಠ ಹೇಳಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *