Breaking News

ಆಂತರಿಕ ಬೇಗುದಿಗೆ ಬ್ರೇಕ್ ಸೇಠ ಜಾರಕಿಹೊಳಿ ಸಾಥ್…ಸಾಥ್..ಹೈ…!

 

ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಫಿರೋಜ್ ಸೇಠ ಅವರ ನಡುವಿನ ಆಂತರಿಕ ಬೇಗುದಿಗೆ ಬ್ರೆಕ್ ಬಿದ್ದಂತಾಗಿದೆ
ಇಬ್ಬರೂ ಈಗ ಜೊತೆ ಜೊತೆಯಾಗಿ ಓಡಾಡಿಕೊಂಡಿದ್ದು ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಜಿತೆ ಜೊತೆಯಾಗಿ ಕಾಣಿಸಿ ಕೊಳದಳುತ್ತಿದ್ದಾರೆ
ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಶಾಸಕ ಫಿರೋಜ್ ಸೇಠ ಅವರು ಮಾಜಿ ಸಚಿವ ಸತೀಶ ಜಾರಕಿಹೊಳಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು ಆರಂಭದಲ್ಲಿ ಇಬ್ಬರ ನಡುವೆ ಆಂತರಿಕ ಕಚ್ಚಾಟ ನಡೆದಿತ್ತು ಮೇಯರ್ ಚುನಾವಣೆಯಲ್ಲಿ ಶಾಸಕ ಫಿರೋಜ್ ಸೇಠ ಅವರು ಸತೀಶ ಜಾರಕಿಹೊಳಿ ಅವರ ಜೊತೆ ಗುರುತಿಸಿಕೊಂಡಿದ್ದರಿಂದ ಇದು ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು
ಆದರೆ ರಾಜ್ಯದ ಪವರ್ ಫುಲ್ ಮಿನಿಸ್ಟರ್ ರೊಬ್ಬರು ಮದ್ಯಸ್ಥಿಕೆ ವಹಿಸಿ ಇಬ್ಬರ ನಡುವಿನ ಕಚ್ಚಾಟಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ತಿಳಿದು ಬಂದಿದೆ
ನಿನ್ನೆ ಕುಮಾರ ಗಂಧರ್ವದಲ್ಲಿ ನಡೆದ ಜನಮನ ಕಾರ್ಯಕ್ರಮದಲ್ಲಿ ಇಬ್ಬರು ಜೊತೆ ಜೊತೆಯಾಗಿ ಕುಳಿತುಕೊಂಡು ಹರಟೆ ಹೊಡೆದಿದ್ದು ಎಲ್ಲರ ಗಮನ ಸೆಳೆದಿತ್ತು
ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಭಾಷಣದಲ್ಲಿ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಫಿರೋಜ್ ಸೇಠ ಶಾಸಕರಾಗಿ ಮಂತ್ರಿಯೂ ಆಗುತ್ತಾರೆ ಎಂದು ರಮೇಶ ಜಾರಕಿಹೊಳಿ ಭವಿಷ್ಯ ನುಡಿಯುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದರು
ಜನ ಮನ ಕಾರ್ಯಕ್ರಮ ಮುಗಿದ ಬಳಿಕ ಶಾಸಕ ಫಿರೋಜ್ ಸೇಠ ಮತ್ತು ಸಚಿವ ರಮೇಶ ಜಾರಕಿಹೊಳಿ ಅವರು ಮಹಾನಗರ ಪಾಲಿಕೆಯ ಆವರಣ ದಲ್ಲಿರುವ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಗಳನ್ನು ಅಹ್ವಾನಿಸಿ ದಿನಾಂಕ ನಿಗದಿ ಮಾಡುವ ಕುರಿತು ಚರ್ಚೆ ಮಾಡಿದರು
ಮುಖ್ಯಮಂತ್ರಿ ಅಥವಾ ಗೃಹ ಸಚಿವ ಡಾ ಜಿ ಪರಮೇಶ್ವರ ಅವರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸುವ ನಿರ್ಣಯ ಕೈಗೊಂಡರು
ಒಟ್ಟಾರೆ ಸಚಿವ ರಮೇಶ ಮತ್ತು ಶಾಸಕ ಸೇಠ ಅವರ ನಡುವಿಣ ಆಂತರಿಕ ಕಚ್ಚಾಟ ಶಮನಗೊಂಡಿದ್ದು ಪವರ್ ಫುಲ್ ಮಿನಿಸ್ಟರ್ ಅವರ ಸಂಧಾನ ಸಫಲವಾದಂತಾಗಿದೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *