Breaking News

ದರ್ಬಾರ್ ಗಲ್ಲಿಯಲ್ಲಿ ಸೇಠ ಮಾಡಿದ್ರು ಕಮಾಲ್..ಬಡವರಿಂದ ಬಾಡಿಗೆ ವಸೂಲಿ ಮಾಡುವವರ ಕಂಗಾಲ್..!

ಬೆಳಗಾವಿ-ರಮಜಾನ್ ಹಬ್ಬದಲ್ಲಿ ಬೆಳಗಾವಿಯ ದರ್ಬಾರ್ ಗಲ್ಲಿಯ ದರ್ಬಾರ್ ಇಮ್ಮಡಿ ಆಗುತ್ತದೆ ಈ ತಿಂಗಳಲ್ಲಿ ಇಲ್ಲಿಯ ಲುಕ್ ನೋಡಲು ಹೊರ ರಾಜ್ಯಗಳಿಂದಲೂ ಜನ ಬೆಳಗಾವಿಗೆ ಬರುತ್ತಾರೆ
ಬೆಳಗಾವಿ ನಗರ ಈಗ ಸ್ಮಾರ್ಟ ಆಗುತ್ತಿದೆ ಇದಕ್ಕೆ ತಕ್ಕಂತೆ ಬೆಳಗಾವಿಯ ದರ್ಬಾರ್ ಗಲ್ಲಿಯೂ ಈ ಬಾರಿ ಸ್ಮಾರ್ಟ್ ಆಗಿದೆ ರಸ್ತೆಯ ಎರಡೂ ಬದಿಗೆ ಹಾಕಲಾಗುತ್ತಿದ್ದ ಫುಡ್ ಸ್ಟಾಲ್ ಗಳು ಈ ಬಾರಿ ರಸ್ತೆಯ ಮದ್ಯದಲ್ಲಿ ಹಾಕಲಾಗಿದೆ ಇದರಿಂದ ದರ್ಬಾರ್ ಗಲ್ಲಿ ಯಲ್ಲಿ ಯಾವುದೇ ಗದ್ದಲವಿಲ್ಲದೇ ಜನ ಸರಳವಾಗಿ ಗಲ್ಲಿಯಲ್ಲಿ ಸುತ್ತಾಡಿ ಬಗೆ ಬಗೆಯ ಖಾದ್ಯಗಳ ರುಚಿ ನೋಡಬಹುದಾಗಿದೆ
ರಮಜಾನ್ ತಿಂಗಳಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸುವ ಅಂಗಡಿಕಾರರು ದರ್ಬಾರ್ ಗಲ್ಲಿಯ ಮನೆಗಳ ಎದುರು ತಳ್ಳುವ ಗಾಡಿಗಳನ್ನು ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದರು ಆದರೆ ಮನೆ ಮಾಲೀಕರು ಬಡ ವ್ತಾಪಾರಿಗಳಿಂದ ರಮಜಾನ್ ತಿಂಗಳಲ್ಲಿ ಐವತ್ತು ಸಾವಿರ ರೂಪಾಯಿಯಿಂದ ಲಕ್ಷದ ವರೆಗೆ ಬಾಡಿಗೆ ವಸೂಲಿ ಮಾಡುವ ಪದ್ದತಿ ದರ್ಬಾರ್ ಗಲ್ಲಿಯಲ್ಲಿ ಜಾರಿಯಲ್ಲಿತ್ತು
ರಮಜಾನ್ ತಿಂಗಳಲ್ಲಿ ಹಗಲು ರಾತ್ರಿ ಶ್ರಮ ಪಟ್ಟು ವ್ಯಾಪಾರ ಮಾಡಿ ಬಂದ ಲಾಭವನ್ನೆಲ್ಲ ಬಡ ವ್ಯಾಪಾರಿಗಳು ಮನೆ ಮಾಲೀಕರಿಗೆ ಕೊಟ್ಟು ಬರಿಗೈಯಲ್ಲಿ ಮನೆಗೆ ಮರಳ ಬೇಕಾದ ಪರಿಸ್ಥಿತಿ ಇತ್ತು
ದರ್ಬಾರ್ ಗಲ್ಲಿಯಲ್ಲಿ ಬಡ ಅಂಗಡಿಕಾರರಿಂದ ಲಕ್ಷಗಟ್ಟಲೆ ಬಾಡಿಗೆ ವಸೂಲಿ ಮಾಡುತ್ತಿರುವ ವಿಷಯ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು

ಆದರೆ ಈ ಬಾರಿ ರಮಜಾನ್ ತಿಂಗಳಲ್ಲಿ ದರ್ಬಾರ್ ಗಲ್ಲಿಯಲ್ಲಿ ಸ್ಟಾಲ್ ಹಚ್ಚುವ ಬಡ ವ್ಯಾಪಾರಿಗಳು ಸೇರಿಕೊಂಡು ಶಾಸಕ ಫಿರೋಜ್ ಸೇಠ ಅವರ ಬಳಿ ಹೋಗಿ ಸೇಠ ಸಾಹೇಬ್ರೆ ನಾವು ಒಂದು ತಿಂಗಳು ದರ್ಬಾರ್ ಗಲ್ಲಿಯ ಅಂಗಡಿಗಳ ಎದುರು ಮನೆಗಳ ಎದುರು ಗಾಡಿ ನಿಲ್ಲಿಸಿ ವ್ಯಾಪಾರ ಮಾಡುತ್ತೇವೆ ಆದರೆ ಮನೆ ಮಾಲೀಕರು ತಮ್ಮ ಮನೆಗಳ ಎದುರು ಗಾಡಿ ನಿಲ್ಲಿಸಿ ವ್ಯಾಪಾರ ಮಾಡಲು ಲಕ್ಷಗಟ್ಟಲೆ ಬಾಡಿಗೆ ಕೇಳುತ್ತಿದ್ದಾರೆ ಪ್ರತಿ ವರ್ಷ ಬಾಡಿಗೆ ಹೆಚ್ಚು ಮಾಡುತ್ತಲೇ ಇದ್ದಾರೆ ನಾವು ಇಡೀ ತಿಂಗಳು ದುಡಿದ ದುಡಿಮೆ ಬಾಡಿಗೆ ಕೊಡಬೇಕಾಗಿದೆ ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಒಂದು ವಾರದ ಹಿಂದೆ ಸೇಠ ಅವರಲ್ಲಿ ಬಡ ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದರು
ಶಾಸಕ ಫಿರೋಜ್ ಸೇಠ ದರ್ಬಾರ್ ಗಲ್ಲಿಯ ಓಟ್ ಬ್ಯಾಂಕ್ ನ್ನು ಲೆಕ್ಕಿಸದೇ ದರ್ಬಾರ್ ಗಲ್ಲಿಯಲ್ಲಿ ರಮಜಾನ್ ತಿಂಗಳಲ್ಲಿ ಸ್ಟಾಲ್ ಹಚ್ಚುವ ಬಡ ವ್ಯಾಪಾರಿಗಳ ಪರವಾಗಿ ದಿಟ್ಟ ನಿರ್ಧಾರ ಕೈಗೊಂಡು ರಸ್ತೆಯ ಮದ್ಯದಲ್ಲಿ ಸ್ಟಾಲ್ ಹಾಕಲು ಬಡ ವ್ಯಾಪಾರಿಗಳಿಗೆ ಅನುಕೂಲ ಮಾಡಿ ಕೊಟ್ಟಿರುವ ವಿಷಯ ಈಗ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ
ಈ ಬಾರಿ ಬಡ ವ್ಯಾಪಾರಿಗಳು ಸಮಂಧ ಇಲ್ಲದ ಮನೆ ಮಾಲೀಕರಿಗೆ ಲಕ್ಷಗಟ್ಟಲೆ ಬಾಡಿಗೆ ಕೊಡುವದು ತಪ್ಪಿದಂತಾಗಿದೆ
ರಮಜಾನ್ ತಿಂಗಳಲ್ಲಿ ಬಡ ವ್ಯಾಪಾರಿಗಳಿಂದ ಲಕ್ಷಗಟ್ಟಲೆ ಬಾಡಿಗೆ ವಸೂಲಿ ಮಾಡುತ್ತಿದ್ದ ಬಂಟರು ಈಗ ಬಡ ವ್ಯಾಪಾರಿಗಳಿಗೆ ಕಿರುಕಳ ನೀಡುವ ಪ್ರಯತ್ನದಲ್ಲಿದ್ದಾರೆ

ದರ್ಬಾರ್ ಗಲ್ಲಿಯ ಮದ್ಯದಲ್ಲಿ ನೀಟಾಗಿ ಹಾಕಲಾಗಿರುವ ಸ್ಟಾಲ್ ಗಳಿಂದ ಇಲ್ಲಿ ಈಗ ಶಿಸ್ತಿನ ವಾತಾವರಣ ನಿರ್ಮಾಣ ವಾಗಿದೆ ಶಾಸಕ ಸೇಠ ಅವರ ಅವರ ದಿಟ್ಟ ನಿರ್ಧಾರವನ್ನು ಜನ ಸಾಮಾನ್ಯರು ಮೆಚ್ಚುತ್ತಿದ್ದರೆ ಲಕ್ಷಗಟ್ಟಲೆ ಬಾಡಿಗೆ ವಸೂಲಿ ಮಾಡುತ್ತಿದ್ದ ಮನೆ ಮಾಲೀಕರು ಕಂಗಾಲಾಗಿದ್ದಾರೆ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *