ಕಳಸಾ ಬಂಡೂರಿಗಾಗಿ ನಾಲೆಯ ತೀರದಲ್ಲಿ ವಾಸ್ತವ್ಯ..

ಬೆಳಗಾವಿ- ಕಳಸಾ ಬಂಡೂರಿ ಮಹಾದಾಯಿ ನದಿ ಜೋಡಣೆಗಾಗಿ ರೈತರು ನಿರಂತರವಾಗಿ ಹೋರಾಟ ನಡೆಸಿದ್ದು ಜೆಡಿಎಸ್ ಶಾಸಕ ಕೋನರೆಡ್ಡಿ ನಾಲೆಯ ತೀರದ ದೇಗುಲದ ಎದುರು ವಾಸ್ತವ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ

ಇತ್ತಿಚಿಗಷ್ಟೇ ಗೋವಾ ವಿಧಾನಸಭೆ ಸ್ಪೀಕರ್ ನೇತೃತ್ವದ ತಂಡ ಮಹಾದಾಯಿ ಕಾಮಗಾರಿ ಸ್ಥಳಕ್ಕೆ ಶಿಷ್ಟಾಚಾರ ಉಲ್ಲಂಘಿಸಿ ಬಂದಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಅವರಿಗೆ ಸೆಡ್ಡು ಹೊಡೆಯೋ ದೃಷ್ಟಿಯಿಂದ ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಮಲಪ್ರಭಾ ಉಗಮ ಸ್ಥಾನದಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದು, ಈ ಮೂಲಕ ಗೋವಾ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ಉತ್ತರ ಕರ್ನಾಟಕದ ಜೀವನಾಡಿ ಹಾಗೂ ಈ ಭಾಗದ ನಾಲ್ಕು ಜಿಲ್ಲೆಗಳ ಹದಿಮೂರು ತಾಲೂಕುಗಳ ಜನರ ಕುಡಿಯೋ ನೀರಿನ ಆಶಾಕಿರಣವಾದ ಮಹದಾಯಿ ಕೊಳ್ಳಕ್ಕೆ ಗೋವಾ ತಂಡ ಪದೆ ಪದೇ ಭೇಟಿ ನೀಡಿ, ಕರ್ನಾಟಕದ ವಿರುದ್ಧ ಆರೋಪ ಮಾಡುತ್ತಿರುವುದನ್ನು ವಿರೋಧಿಸಿ ಖಾನಾಪುರತಾಲೂಕಿನ ಕಣಕುಂಬಿಯ ಮಾವುಲಿ ದೇವಸ್ಥಾನದಲ್ಲಿ ನವಲಗುಂದ ಶಾಸಕ ಎನ್.ಹೆಚ್.ಕೋನರಡ್ಡಿ ಗ್ರಾಮವಾಸ್ತವ್ಯ ಮಾಡಿದರು.
ಕಾರ್ಯಕರ್ತರು ರಾತ್ರಿಯಿಡಿ ದೇವಸ್ಥಾನದ ಹೊರಭಾಗದಲ್ಲಿಯೇ ಕಾಲ ಕಳೆದರು‌.ಅಲ್ಲಿಯೇ ಅಡುಗೆ, ಊಟ ಮಾಡಿ,ಅಲ್ಲಿಯೇ ಮಲಗಿ ನಿದ್ರಿಸಿದರು. ಸಾಕಷ್ಟು ಚಳಿ ಇದ್ದರೂ ಅದನ್ನು ಲೆಕ್ಕಿಸದೇ ಕಾರ್ಯಕರ್ತರು ರಾತ್ರಿಯಿಡೀ ಕಾಲ ಕಳೆದದ್ದು ವಿಶೇಷವಾಗಿತ್ತು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *