ಬೆಳಗಾವಿ- ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತಡಗೆದುಕೊಂಡರು
ಜತ್ತ ಜಾಂಬೋಟಿ ರಸ್ತೆ ಕಾಮಗಾರಿ ನಡೆಯುತ್ತಿದೆ ಅಥಣಿಯಲ್ಲಿ ನಾಲ್ಕು ಗೊಡ್ಡ ಮರಗಳಿವೆ ಇವುಗಳನ್ನು ಕಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ಕೊಡುತ್ತಿಲ್ಲ ಮೂರು ತಿಂಗಳಾಯ್ತು ಕೆಲಸ ನಿಂತು ಹೋಗಿದೆ ಎಂದಾಗ ಅರಣ್ಯ ಅಧಿಕಾರಿ ಎದ್ದು ನಿಂತು ಸರ್ ಒಂದು ಸಬ್ಮಿಶನ್ ಎಂದಾಗ ಲಕ್ಷ್ಮಣ ಸವದಿ ಅಕ್ರೋಶಿತರಾಗಿ ಏ ಮಾರಯ್ಯ ಎಲ್ಲಿದ ಸಬ್ಮಿಶನ್ ಹೋಗೋ ಮಾರಯ್ಯ ಗಿಡಾ ಕಡ್ಯಾಕ ಕೋಡೋ ಪರ್ಮಿಶನ್ ಎಂದು ತರಾಟೆಗೆ ತೆಗೆದುಕೊಂಡರು
ಶಾಸಕ ಅರವಿಂದ ಪಾಟೀಲ ಮಾತನಾಡಿ ಖಾನಾಪೂರ ತಾಲೂಕಿನ ಅರಣ್ಯ ಪ್ರದೇಶದಲ್ಲಿರುವ ಐದು ಗ್ರಾಮಗಳಿಗೆ ಇನ್ನುವರೆಗೆ ವಿದ್ಯುತ್ತ ಸರಬರಾಜು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಸ್ವಾತಂತ್ರ್ಯ ದೊರೆತು ಆರವತ್ತು ವರ್ಷಗಳು ಗತಿಸಿದರೂ ಐದು ಹಳ್ಳಿಗಳು ಇನ್ನುವರೆಗೆ ಬೆಳಕು ಕಂಡಿಲ್ಲ ಎಂದು ಅಸಮಾಧಾನ ವ್ಯೆಕ್ತಪಡಿಸಿದರು
ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ಖಾನಾಪೂರ ತಾಲೂಕಿನ ಅರಣ್ಯ ಪ್ರದೇಶದಲ್ಲಿರುವ ಹಳ್ಳಿಗಳಿಗೆ ವಿದ್ಯುತ್ತ ನೀಡುವದಾಗಿ ಪರಿಷತ್ತಿನಲ್ಲಿ ಇಂಧನ ಇಲಾಖೆಯ ಮಂತ್ರಿಗಳು ಒಪ್ಪಿ ವರ್ಷ ಆಗಿದೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೆಸ್ಕಾಮ್ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಇದಕ್ಕೆ ಉತ್ತರ ನೀಡಿದ ಜಿಲ್ಲಾ ಅರಣ್ಯ ಅಧಿಕಾರಿಗಳು ವೈಲ್ಡ ಲೈಫ್ ಸೆಂಚುರಿ ಪ್ರದೇಶದಲ್ಲಿ ವಿದ್ಯುತ್ತಿಕರಣ ಮಾಡಲು ಅನುಮತಿ ನೀಡುವ ಅಧಿಕಾರ ನನಗಿಲ್ಲ ಇದಕ್ಕೆ ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ ಎಂದು ಅಧಿಕಾರಿಗಳು ಜಾರಿಕೊಂಡರು
ಮದ್ಯಪ್ರವೇಶಿಸಿ ಮಾತನಾಡಿದ ಸಂಸದ ಪ್ರಕಾಶ ಹುಕ್ಕೇರಿ ಪತ್ರ ನನಗೆ ಕೊಡಿ ಕೇಂದ್ರದಿಂದ ನಾನು ಮಂಜೂರು ಮಾಡಿಸುವದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು
ಇದಾದ ಬಳಿಕ BPL ರೇಶನ್ ಕಾರ್ಡಗಳ ಬಗ್ಗೆ ಚರ್ಚೆ ನಡೆಯಿತು