ಬೆಳಗಾವಿ-ನಾನು ಅಧಿಕಾರಿಗಳ ಮೇಲೆ ವರಟಾಗಿ ಮಾತನಾಡಿದ್ರೆ ಅದು ನನ್ನ ವಯಕ್ತಿಕ ಲಾಭಕ್ಕಾಗಿ ಅಲ್ಲ. ಅಧಿಕಾತಿಗಳ ವರ್ತನೆಗಾಗಿ ನಾನು ಬಳಸಿದ ಪದಗಳು ಕಡಿಮೇನೆ.ಅಧಿಕಾರಿಗಳು ಕ್ಷೇತ್ದದ ಜನರ ಕೆಲಸ ಮಾಡದಿದ್ದರೆ ಇನ್ನು ಮುಂದೆ ನನ್ನ ವರಟ ಮಾತುಗಳನ್ನು ಮುಂದುವರೆಸುತ್ತೆನೆ.ಎಂದು ಶಾಸಕ ಪಿ ರಾಜೀವ ಸ್ಟೇಶನ್ ಗೆ ಬೆಂಕಿ ಹಚ್ಚುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಪೊಲಿಸ್ ಠಾಣೆ ಬೆಂಕಿ ವಿಚಾರ.ಪ್ರಸ್ತಾಪಿಸಿ ಪತ್ತೆಯಾಗದ ಕೊಲೆ ಪ್ರಕರಣದಲ್ಲಿ ಅಮಾಯಕ ರನ್ನ ಕರೆತಂದು ವಿಚಾರಣೆ ಎಷ್ಟು ಸರಿ. ರೋಷಾವೇಷಗೊಂಡು ಅವೇಶಭರಿತನಾಗಿ ಮಾತನಾಡಿದ್ದೆನೆ. ಈಗಲು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಸ್ಪಷ್ಠಪಡಿಸಿದರು
ನಾನು ತಳಮಟ್ಟದ ಜನರ ನೋವನ್ನ ಅರ್ಥಮಾಡಿಕೊಂಡಿದ್ದೆನೆ. ವ್ಯವಸ್ಥೆ ಯನ್ನ ಸರಿಪಡಿಸುತ್ತೆನೆ. ನನ್ನ ನಡತೆ ಸರಿ ಅನಿಸಿದ್ರೆ ಜನ ಆರಿಸಿತರುತ್ತಾರೆ ಇಲ್ಲವಾದ್ರೆ ಅವರಿಗೆ ಬಿಟ್ಟಿದ್ದು.
ನನ್ನ ಕಾರ್ಯವಿಧಾನ ಹೀಗೆ ಮುಂದು ವರೆಸುತ್ತದೆ.
ಇವತ್ತಿನ ವ್ಯವಸ್ಥೆ ಯಲ್ಲಿ ಬೆಂಕಿ ಹಚ್ಚುವ ಪದ ಅವಶ್ಯಕತೆ ಇದೆ.ಇದು ನಮ್ಮ ವ್ಯವಸ್ಥೆ ಗೆ ಹಿಡಿದ ಕೈ ಗಣ್ಣಡಿಯಾಗಿದೆ.ಎಂದರು
ತಾಲೂಕಿನ ಅಧಿಕಾರಿಗಳು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹಿತ ಕಾಯುತ್ತಿದ್ದಾರೆ ಅವರು ಸಾರ್ವಜನಿಕರ ಕೆಲಸ ಮಾಡದಿದ್ದರೆ ನನ್ನ ಮಾತಿನ ಶೈಲಿ ಬದಲಾವಣೆ ಆಗುಹೇಳಿದರು
ಮೂರು ವರ್ಷದ ಹಿಂದಿನ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರದಾಡುತ್ತಿದೆ ಪೋಲೀಸ್ ಅಧಿಕಾರಿಗಳ ವಿರುದ್ದದ ಆಕ್ರೋಶ ಇನ್ನೂ ಕಡಿಮೆ ಆಗಿಲ್ಲ ಎಂದರು
ನಾನು ನನ್ನ ಸ್ವಾರ್ಥಕ್ಕಾಗಿ ಯಾವುದನ್ನು ಹೇಳಿಲ್ಲ ವ್ಯೆವಸ್ಥೆ ವಿರುದ್ಧದ ಆಕ್ರೋಶ ಅದಾಗಿದೆ ವ್ಯೆವಸ್ಥೆ ಸುಧಾರಣೆಗೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮುಂದುವರೆಯುತ್ತದೆ ಎಂದು ಪಿ ರಾಜೀವ ಹೇಳಿದರು
ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷ ಸೇರಬೇಕೋ ಬಿಡಬೇಕೋ ಅನ್ನೋದರ ಬಗ್ಗೆ ಕುಡಚಿ ಕ್ಷೇತ್ರದ ಸಿದ್ಧರಾಮನ ಮಡ್ಡಿ ಗ್ರಾಮದ ಜನ ನಿರ್ಧರಿಸುತ್ತಾರೆ ಅವರು ಕೊಟ್ಟ ಸಲಹೆ ಪಾಲಿಸುತ್ತೇನೆ ಮುಂದಿನ ಚುನಾವಣೆಯಲ್ಲಿ ಪಿ ರಾಜೀವ ಸ್ಪರ್ಧೆ ಮಾಡೋದು ಬೇಡ ಅಂತ ಸಿದ್ಧರಾಮನ ಮಡ್ಡಿಯ ಜನ ಅಂದ್ರೆ ನಾನು ಖಂಡಿತವಾಗಿಯೂ ಸ್ಪರ್ಧೆ ಮಾಡೋದಿಲ್ಲ ಅಂತ ಪಿ ರಾಜೀವ ಸ್ಪಷ್ಠಪಡಿಸಿದರು